ಸೂಪರ್ ಟೇಸ್ಟಿ : ಈಸಿಯಾಗಿ ಮಾಡಿ ಈ ರೀತಿಯಾದ ತರಕಾರಿ ಹುಳಿ ಸಾರು..!
ಪದಾರ್ಥಗಳು
ತರಕಾರಿ – ಬದನೆ , ಆಲೂಗಡ್ಡೆ , ಬೀನ್ಸ್ , ಕ್ಯಾರೋಟ್ ( ಆಪ್ಷನಲ್ ) , ಬೇಕಾದರೆ ಮೂಲಂಗಿ , ಹಾಗೂ ನಿಮ್ಮ ಇಷ್ಟದ ತರಕಾರಿಗಳು
ಟೊಮ್ಯಾಟೋ , ಈರುಳ್ಳಿ , ಬೆಳ್ಳುಳ್ಳಿ , ಕರಿಬೇವು , ಕೊತ್ತಂಬರಿ ಸೊಪ್ಪು
ತೊಗರಿಬೇಳೆ 1 ಕಪ್ – ಅರ್ಧ ಕಪ್ ಹೆಸರುಬೇಳೆ
ಎಣ್ಣೆ ಒಗ್ಗರಣೆಗೆ , ಉಪ್ಪು ರುಚಿಗೆ ತಕ್ಕಷ್ಟು
ತೆಂಗಿನ ಕಾಯಿ – ಬೇಕಿದ್ದಲ್ಲಿ
ಮನೆಯಲ್ಲಿ ಮಾಡಿದ ಸಾಂಬರ್ ಪುಡಿ – ಇಲ್ಲದವಾದ್ರೆ ಖಾರದ ಪುಡಿ – ಧನ್ಯಾಪುಡಿ ಬಳಸಬಹುದು
ಅರಿಶಿಣ , ಸಾಸಿವೆ, (ಹಿಂಗು ಆಪ್ಷನಲ್) ಒಗ್ಗರಣೆಗೆ
ಹುಣಸೆಹುಳಿ – ಸ್ವಲ್ಪ
ತರಕಾರಿ ಹುಳಿ ಸಾರು ಸಾಮಾನ್ಯವಾಗಿ ಎಲ್ಲರೂ ತುಂಬಾ ಇಷ್ಟ ಪಡ್ತಾರೆ.. ಆದ್ರೆ ಕೆಲವೊಮ್ಮೆ ಮಾಡಲು ಹೆಚ್ಚು ಸಮಯ ಹಿಡಿಯುತ್ತೆ.. ಆದ್ರೆ ನಾವು ಸುಲಭವಾಗಿಯೇ ಮಾಡುವ ವಿಧಾನವನ್ನ ತಿಳಿಸಯೋಣ..
ಮೊದಲಿಗೆ ಹುಣಸೆಹುಳಿ ನೆನೆಸೆಕೊಳ್ಳಿ.
ಒಂದು ಕುಕ್ಕರ್ ತೆಗೆದುಕೊಂಡು ಅದಕ್ಕೆ ಹೆಚ್ಚಿಟ್ಟುಕೊಂಡ ತರಕಾರಿ ಬೇಳೆ ಹಾಕಿ ಮುಳುಗವಷ್ಟು ಅಥವ ಬೇಯಿಸುವಷ್ಟು ನೀರು ಹಾಕಿ ಅದಕ್ಕೆ ಒಂದು ಸ್ಪೂನ್ ಎಣ್ಣೆ ಹಾಕಿ , ಅರ್ಧ ಸ್ಪೂನ್ ಅರಿಶಿಣ ಹಾಕಿ , ಒಂದೆರೆಡು ಮೂರು ನಿಮ್ಮ ರುಚಿಗೆ ಬೇಕಾದಷ್ಟು ಟಮ್ಯಾಟೋ ಪೀಸ್ ಮಾಡದೇ ಹಾಗೆಯೇ ಹಾಕಿ.. ಅರ್ಧ ಈರುಳ್ಳಿ ಸ್ವಲ್ಪ ದಪ್ಪದಪ್ಪ ಪೀಸ್ ಗಳಾಗಿ ಹೆಚ್ಚಿ ಹಾಕಿ ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಕುಕ್ಕರ್ ಮುಚ್ಚಳ ಮುಚ್ಚಿ , ಮೀಡಿಯಮ್ ಫ್ಲೇಮ್ ನಲ್ಲಿ ಬೇಯಿಸಿ.. 2 ವಿಷಲ್ ಬಂದ ನಂತರ ಆಫ್ ಮಾಡಿ ಸ್ಟೀಮ್ ಇಳಿಯಲು ಬಿಡಿ..
ಇತ್ತ ಒಂದು ಮಿಕ್ಸಿ ಜಾರಿಗೆ ನೆನಸಿಟ್ಟ ಉಣಸೆಹುಳಿಯನ್ನ ಸ್ವಲ್ಪ ನೀರಿನ ಜೊತೆಗೆ ಹಾಕಿಕೊಳ್ಳಿ.. ಅದಕ್ಕೆ ಒಂದೆರೆಡು ಬೆಳ್ಳುಳ್ಳಿ ಎಸಳು , ಸಾಂಬರ್ ಪುಡಿ ಅಥವ ಖಾರದ ಪುಡಿ – ಧನ್ಯಪುಡಿ ರುಚಿಗೆ ಅನುಗುಣವಾಗಿ ಹಾಕಿಕೊಳ್ಳಿ , ಹೆಚ್ಚಿಟ್ಟ ಕೊತ್ತಂಬರಿಯಲ್ಲಿ ಅರ್ಧ ಜಾರಿಗೆ ಹಾಕಿ ಅರ್ಧ ಪಕ್ಕಕ್ಕೆ ಎತ್ತಿಡಿ , ಬೇಕಿದ್ದಲ್ಲಿ ಸ್ವಲ್ಪ ತೆಂಗಿನಕಾಯಿ ಹಾಕಿ , ಈಗ ಕುಕ್ಕರ್ ಮುಚ್ಚಳ ತೆಗೆದು ಅದರಿಂದ ಟೊಮ್ಯೋಟೋ ಪ್ರತ್ಯೇಕಿಸಿ ಅದನ್ನ ಜಾರಿಗೆ ಹಾಕಿಕೊಳ್ಳಿ 2 ನಿಮಿಷ ಆರಲು ಬಿಟ್ಟು ನಂತರ ಸ್ವಲ್ಪ ಸ್ವಲ್ಪವೇ ನೀರು ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಿ..
ಈಗ ಒಂದು ದಪ್ಪ ತಳದ ಸಾರು ಮಾಡುವ ಪಾತ್ರೆಯನ್ನ ಕಾಯಲು ಇಡಿ.. ಅದಕ್ಕೆ ಎಣ್ಣೆ ಹಾಕಿ , ನಂತಯರ ಸಾಸಿವೆ ಹಾಕಿ, ಸಾಸಿವೆ ಸಂಪೂರ್ಣ ಸಿಡಿದ ನಂತರ , ಅರಿಶಿಣ ಸೇರಿಸಿ, ಕರಿಬೇವು ಹಾಕಿ , ಸಿಪ್ಪೆ ಸಮೇತ ಚೆಚ್ಚಿದ 3-4 ಬಬೆಳ್ಳುಳ್ಳಿ ಎಸಳು ಹಾಕಿ , ಹೆಚ್ಚಿಟ್ಟಿದ್ದ 1 ದಪ್ಪ ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿ , ಈರುಳ್ಳಿ ಕಂದು ಬಣ್ಣಕ್ಕೆ ತಿರುಗಿದ ಮೇಲೆ ಅದಕ್ಕೆ ರುಬ್ಬಿದ ಮಿಶ್ರಣ ಸೇರಿಸಿ ಚೆನ್ನಾಗಿ ಬಾಡಿಸಿ.. 1 ನಿಮಿಷ ಹೀಗೆ ಬಾಡಿಸಿದ ಮೇಲೆ ಇದಕ್ಕೆ ತರಕಾರಿ ಬೇಳೆ ಜೊತೆಗೆ ಬೇಯಿಸಿದ ನೀರನ್ನ ಹಾಕಿ ಮಿಕ್ಸ್ ಮಾಡಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ , ಜೊತೆಗೆ ತೆಳು ಅಥವ ಗಟ್ಟಿ ಎಷ್ಟು ಪ್ರಮಾಣದ ಅಗತ್ಯತೆ ಇದೆಯೋ ಅಷ್ಟು ನೀರು ಸೇರಿಸಿ ಚನ್ನಾಗಿ ಮಿಕ್ಸ್ ಮಾಡಿ 8-10 ನಿಮಿಷ ಮೀಡಿಯಮ್ ಫ್ಲೇಮ್ ನಲ್ಲಿ ಚನ್ನಾಗಿ ಕುದಿಯಲು ಬಿಡಿ.. ಅದಕ್ಕೆ ಮೇಲಿಂದ ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ ಪ್ಲೇಟ್ ಅನ್ನು ಅರ್ಧ ಮುಚ್ಚಿ ಬಿಡಿ .. ( ಮೂರ್ತಿ ಮುಚ್ಚಿದಲ್ಲಿ ಉಕ್ಕಿಬಿಡುತ್ತದೆ)
ಒಂದು 10 -15 ನಿಮಿಷದೊಳಗಡೆ ಸ್ವಲ್ಪ ಎಣ್ಣೆ ತೇಲುವುದು ಗೊತ್ತಾಗುತ್ತದೆ. ಆಗ ಇದು ಬೆಂದಿದೆ ಎಂದರ್ಥ.. ನಂತರ ಫ್ಲೇಮ್ ಆಫ್ ಮಾಡಿ.. ಗಟ್ಟಿಯಾಗಿ ಮಾಡಿದಲ್ಲಿ ಮುದ್ದೆಗೆ ಈ ಸಾರು ಬೊಂಬಾಟ್ ಕಾಂಬಿನೇಷನ್.. ಅದೇ ತೆಳುವಾಗಿ ಮಾಡಿದ್ರೆ ಅನ್ನಕ್ಕೂ ಸೂಪರ್..








