Mysore | ಮೈಸೂರಲ್ಲಿ ದಂಪತಿ ಆತ್ಮಹತ್ಯೆಗೆ ಶರಣು
ಮೈಸೂರು : ಸಾಲಕ್ಕೆ ಹೆದರಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಭೇರ್ಯ ಸಮೀಪದ ಸಂಬ್ರವಳ್ಳಿ ಗ್ರಾಮದಲ್ಲಿ ನಡೆದಿದೆ.
50 ವರ್ಷದ ಬೆಟ್ಟಪ್ಪ, 43 ವರ್ಷದ ರುಕ್ಮಿಣಿ ಮೃತರಾಗಿದ್ದಾರೆ.
ಇವರು ಗ್ರಾಮದ ಜಮೀರ್ ಸಾಹೇಜ್ ತೋಟದಲ್ಲಿ 20 ವರ್ಷಗಳಿಂದ ಕೂಲಿ ಕೆಲಸ ಮಾಡಿಕೊಂಡಿದ್ದರು.
ಕೆಲಸ ಮಾಡಿಕೊಂಡು ತೋಟದ ಮನೆಯಲ್ಲೇ ವಾಸವಿದ್ದರು. ಇತ್ತೀಚೆಗೆ ಮಕ್ಕಳ ಮದುವೆ ಮಾಡಿದ್ದರು.
ಜೊತೆಗೆ ಸಂಬ್ರವಳ್ಳಿಯಲ್ಲಿ ಸಾಲ ಮಾಡಿ ಮನೆ ಸಹ ಕಟ್ಟಿದರು.
ಇದೀಗ ಸಾಲ ತೀರಿಸಲು ಸಾಧ್ಯವಾಗದ ತೋಟದಲ್ಲಿದ್ದ ಬಾವಿಗೆ ಇಬ್ಬರು ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಸಂಬಂಧ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.