couple drown
ಮೈಸೂರು: ಇನ್ನೇನು ಇದೇ ತಿಂಗಳ 22ರಂದು ಹಸೆಮಣೆ ಏರಬೇಕಾಗಿದ್ದ ಜೋಡಿ ಇತ್ತೀಚೆಗೆ ತಲಕಾಡಿನಲ್ಲಿ ಜಲಸಮಾಧಿಯಾದ್ದರು. ಪ್ರೀವೆಡ್ಡಿಂಗ್ ಫೋಟೋ ಶೂಟ್ ವೇಳೆ ತೆಪ್ಪ ಮುಳುಗಿ ಇಬ್ಬರೂ ಪ್ರಾಣ ಬಿಟ್ಟಿದ್ದರು. ಇದೀಗ ಈ ಪ್ರಕರಣ ಸಂಬಂಧ ಪೊಲೀಸರು ಆರು ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ನವೆಂಬರ್ 9ರಂದು ತಲಕಾಡಿನ ಕಾವೇರಿ ನದಿ ಮಧ್ಯೆ ಪ್ರಿವೆಡ್ಡಿಂಗ್ ಫೋಟೊಶೂಟ್ ಮಾಡಿಸಿಕೊಳ್ಳುವ ಸಂದರ್ಭ ತೆಪ್ಪ ಮಗುಚಿಬಿದ್ದು, ಮೈಸೂರಿನ ಕ್ಯಾತಮಾರನಹಳ್ಳಿ ನಿವಾಸಿಗಳಾದ 28 ವರ್ಷದ ಚಂದ್ರು ಹಾಗೂ 20 ವರ್ಷದ ಶಶಿಕಲಾ ಮೃತಪಟ್ಟಿದ್ದರು.
ಸುಳ್ಳು ಹೇಳುವುದು ಕಾಂಗ್ರೆಸ್ ರಕ್ತಗತ : ಈಶ್ವರಪ್ಪ ಕಿಡಿ
ಆರು ಜನರ ವಿರುದ್ಧ ತಲಕಾಡು ಪೊಲೀಸ್ ಠಾಣೆಯಲ್ಲಿ ಐಸಿಪಿ ಸೆಕ್ಷನ್ 304ರ ಅಡಿ ಪ್ರಕರಣ ದಾಖಲಾಗಿದೆ. ಫೋಟೊಗ್ರಾಫರ್ ನಿಖಿಲ್, ತೆಪ್ಪವನ್ನು ನೀಡಿದ ಕಟ್ಟೆಪುರ ನಿವಾಸಿ ಮೂಗಪ್ಪ ಸೇರಿದಂತೆ ಆರು ಜನರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ತೆಪ್ಪವನ್ನು ಮೂಗಪ್ಪ ಅವರು ತಮ್ಮ ಸ್ವಂತ ಉಪಯೋಗಕ್ಕೆ ಬಳಕೆ ಮಾಡುತ್ತಿದ್ದರು. ಕಟ್ಟೆಪುರ-ಮುಡುಕುತೊರೆ ನಡುವೆ ಹರಿಯುವ ಕಾವೇರಿ ನದಿಯನ್ನು ದಾಟಲು ಮೂಗಪ್ಪ ಅವರು ತೆಪ್ಪ ಬಳಕೆ ಮಾಡುತ್ತಿದ್ದರು ಎನ್ನಲಾಗಿದೆ. ಆದ್ರೆ ಪ್ರೀ ವೆಡ್ಡಿಂಗ್ ಶೂಟ್ ಗಾಗಿ ತೆಪ್ಪವನ್ನು ನೀಡುವಂತೆ ನವಜೋಡಿ ಹಾಗೂ ಅವರ ಜತೆಗಿದ್ದವರು ಮನವಿ ಮಾಡಿದ ಹಿನ್ನೆಲೆಯಲ್ಲಿ ಮೂಗಪ್ಪ ಅವರು ತೆಪ್ಪ ನೀಡಿದ್ದರು ಎಂದು ತಿಳಿದುಬಂದಿದೆ.
couple drown
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel