ಕೊರೊನಾ ಲಸಿಕೆ ಕಡ್ಡಾಯ | ಪ್ರತಿಭಟಿಸುತ್ತಿರುವ ಜನರು Saaksha Tv
ಕೆನಡಾ: ಕೆನಡಾ ದೇಶದಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಈ ಹಿನ್ನಲೇ ಅಲ್ಲಿನ ಸರಕಾರ ಲಸಿಕೆಯನ್ನು ಕಡ್ಡಾಯಗೊಳಿಸಿದ್ದಕ್ಕೆ ಸರಕಾರದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಏರುತ್ತಿರುವ ಕೊರೊನಾ ಸಂಕಿತರ ಸಂಖ್ಯೆ ಏರಿಕೆಯಾಗಿತ್ತಿದೆ. ಈ ಸಂಖ್ಯೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಅಲ್ಲಿನ ಸರಕಾರ ಲಸಿಕೆಯನ್ನು ಕಡ್ಡಾಯಗೊಳಿಸಿತ್ತು. ಆದರೆ ಇದನ್ನು ವಿರೋಧಿಸಿ ಪ್ರಜೆಗಳು ಪ್ರತಿಭಟನೆ ಮಾಡುತ್ತಿದ್ದಾರೆ. ಈ ಪ್ರತಿಭಟನೆ ಹೆಚ್ಚಾಗುತ್ತಿದ್ದಂತೆ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತು ಅವರ ಕುಟುಂಬವು ದೇಶದ ರಾಜಧಾನಿಯಲ್ಲಿದ್ದ ತಮ್ಮ ನಿವಾಸವನ್ನು ಬಿಟ್ಟು ಬೇರೊಂದು ರಹಸ್ಯ ಸ್ಥಳಕ್ಕೆ ಹೋಗಿದ್ದಾರೆ ಎಂದು ವರದಿಗಳಲ್ಲಿ ಉಲ್ಲೇಖಿಸಲಾಗಿದೆ.
ಜಸ್ಟಿನ್ ಟ್ರುಡೊ ಸರ್ಕಾರದ ಕೊರೊನಾ ವೈರಸ್ ಮಾರ್ಗಸೂಚಿಗಳ ವಿರುದ್ಧ ಹೋರಾಟ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಕೊರೊನಾ ಲಸಿಕೆ ಕಡ್ಡಾಯ ಹಾಗೂ ಇತರ ನಿರ್ಬಂಧಗಳನ್ನು ತೆಗೆದು ಹಾಕುವಂತೆ ಸರ್ಕಾರವನ್ನು ಒತ್ತಾಯಿಸಿ ಸಾವಿರಾರು ಮಂದಿ ಪ್ರತಿಭಟನೆ ಮಾಡುತ್ತಿದ್ದಾರೆ.
ಈ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರು ಮಾತ್ರವಲ್ಲದೇ, ಅವರ ಕುಟುಂಬವೂ ಪ್ರತಿಭಟನೆಯಲ್ಲಿ ಭಾಗಿಯಾಗಿದೆ. ವೃದ್ಧರು ಮತ್ತು ಅಂಗವಿಕಲರು ಕೂಡ ಪ್ರತಿಭಟನೆಯಲ್ಲಿ ಇದ್ದಾರೆ ಎಂದು ದ ಗ್ಲೋಬ್ ಅಂಡ್ ಮೇಲ್ ಪತ್ರಿಕೆ ತನ್ನ ವರದಿ ಮಾಡಿದೆ.
ಈ ಮೊದಲು ‘ಫ್ರೀಡಮ್ ಕಾನ್ವಾಯ್’ ಎಂಬ ಹೆಸರಲ್ಲಿ ಈ ಪ್ರತಿಭಟನೆಯನ್ನು ಟ್ರಕ್ ಚಾಲಕರು ಹಮ್ಮಿಕೊಂಡಿದ್ದರು. ಈಗ ಅದೇ ಪ್ರತಿಭಟನೆ ದೊಡ್ಡದಾಗಿದೆ. ಈಗ ನಡೆಯುತ್ತಿರುವ ದೊಡ್ಡ ಪ್ರತಿಭಟನೆಗೆ ಭಾರಿ ಪ್ರಮಾಣದ ಜನರು ಸೇರುತ್ತಿದ್ದಾರೆ ಎಂದು ಕೆನಡಿಯನ್ ಬ್ರಾಡ್ಕಾಸ್ಟಿಂಗ್ ಕಾರ್ಪೊರೇಷನ್ ವರದಿ ಮಾಡಿದೆ.