ಕನ್ನಡ ಚಿತ್ರರಂಗದ ಪ್ರತಿಯೊಬ್ಬರಿಗೂ ಕ್ರೇಜಿಸ್ಟಾರ್ ರವಿಚಂದ್ರನ್ ಅಂದರೆ ಇಷ್ಟ. ಅದರಲ್ಲಿಯೂ ಅವರ ಪ್ರೇಮಲೋಕ ಚಿತ್ರವಂತೂ ಕನ್ನಡಿಗರಿಗೆ ತುಂಬಾನೆ ಇಷ್ಟ. ಈಗಲೂ ಪ್ರೇಮಲೋಕ ಚಿತ್ರವನ್ನು ಜನರು ಖುಷಿಯಿಂದಲೇ ನೋಡುತ್ತಾರೆ. ಈಗ ಈ ಚಿತ್ರದ ಕುರಿತು ರವಿಚಂದ್ರನ್ ಅಪ್ಡೇಟ್ ಒಂದನ್ನು ನೀಡಿದ್ದಾರೆ.
ಪ್ರೇಮಲೋಕ ಚಿತ್ರದ ಹಾಡುಗಳು ಇಂದಿಗೂ ಟ್ರೆಂಡಿಂಗ್ ನಲ್ಲಿವೆ. ಆ ಚಿತ್ರ ಸಾಕಷ್ಟು ದಾಖಲೆ ಬರೆದಿತ್ತು. ಈ ಸಿನಿಮಾದ ಪಾರ್ಟ್ 2 (Premaloka 2) ಮಾಡುವ ಕುರಿತು ರವಿಚಂದ್ರನ್ ಮಾತನಾಡಿದ್ದಾರೆ. ಹಂಪಿ ಉತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರೇಮಲೋಕ 2 ಚಿತ್ರದ ಕನಸನ್ನು ಅಭಿಮಾನಿಗಳ ಮುಂದೆ ಹಂಚಿಕೊಂಡಿದ್ದಾರೆ.
ಈ ಸಿನಿಮಾದಲ್ಲಿ ಬರೋಬ್ಬರಿ 25 ಹಾಡುಗಳು ಇರಲಿವೆ ಎಂದು ಅಚ್ಚರಿಕೆಯ ಹೇಳಿಕೆ ನೀಡಿದ್ದಾರೆ. ಇದನ್ನು ಕೇಳುತ್ತಿದ್ದಂತೆ ಸ್ವತಃ ಸಚಿವ ಜಮೀರ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸದ್ಯ ರವಿಚಂದ್ರನ್ ಸಿನಿಮಾ ಮಾಡುವ ಕುರಿತು ಮಾತ್ರ ಅಪ್ಡೇಟ್ ನೀಡಿದ್ದು, ಯಾವಾಗ ಚಿತ್ರೀಕರಣ ಆರಂಭವಾಗಲಿದೆ ಸೇರಿದಂತೆ ಯಾವುದೇ ಮಾಹಿತಿಯನ್ನು ನೀಡಿಲ್ಲ.