ದೇಶದಲ್ಲಿ ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಈ ನಡುವೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಕೊರೊನಾ ವೈರಸ್ ಭಾರತದಲ್ಲಿ ಸಾಮುದಾಯಿಕವಾಗಿ ಹರಡಿಲ್ಲ ಎಂದು ಹೇಳಿದೆ.
ಸದ್ಯಕ್ಕೆ ಭಾರತದಲ್ಲಿ ಕೊರೊನಾ ವೈರಸ್ 2ನೇ ಹಂತ ಎಂದರೆ ಸ್ಥಳೀಯ ಮಟ್ಟದಲ್ಲಿ ಹಬ್ಬಿದ್ದು, 3ನೇ ಹಂತಕ್ಕೆ ತಲುಪಿಲ್ಲ. ಒಂದು ವೇಳೆ 3, 4ನೇ ಹಂತಕ್ಕೆ ಬಂದರೆ ಅದು ಬಹಳ ಅಪಾಯಕಾರಿ ಮತ್ತು ಚೀನಾ, ಇಟಲಿ ರೀತಿಯಲ್ಲಿ ಸಹಸ್ರಾರು ಮಂದಿ ಸಾವನ್ನಪ್ಪುವ ಆತಂಕವಿದೆ. ಆದರೆ ನಾವು ಆ ಹಂತಕ್ಕೆ ಹೋಗಿಲ್ಲ. 52 ಪ್ರಯೋಗಾಲಯಗಳ ಸಹಯೋಗದೊಂದಿಗೆ 1,040 ಮಾದರಿಗಳನ್ನು ಹಲವು ಪರೀಕ್ಷೆಗೆ ಒಳಪಡಿಸಿದ್ದು, ಸದ್ಯಕ್ಕೆ ಎಲ್ಲವೂ ನೆಗೆಟಿವ್ ಎಂದು ಬಂದಿದೆ. ಹಾಗಾಗಿ ಸಾಮುದಾಯಿಕವಾಗಿ ಕೊರೊನಾ ಸೋಂಕು ಹಬ್ಬಿಲ್ಲ ಎಂದು ಹೇಳಬಹುದು ಆದರೆ ಸಂಪೂರ್ಣವಾಗಿ ಇದನ್ನು ನಂಬಲಾಗದು. ಈ ರೀತಿಯ ಪರೀಕ್ಷೆಗಳನ್ನು ಮುಂದುವರಿಸಲಿದ್ದು, ಮುಂದಿನ ಸ್ಥಿತಿ ಹೇಗಿರುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ ಎಂದು ಮೂಲಗಳು ತಿಳಿಸಿವೆ.
ಭಾರತಕ್ಕೆ FATFನಲ್ಲಿ ಐತಿಹಾಸಿಕ ಗೆಲುವು: IAS ಅಧಿಕಾರಿ ವಿವೇಕ್ ಅಗರ್ವಾಲ್ ಉಪಾಧ್ಯಕ್ಷರಾಗಿ ಆಯ್ಕೆ
ಭಾರತಕ್ಕೆ FATFನಲ್ಲಿ ಐತಿಹಾಸಿಕ ಗೆಲುವು: IAS ಅಧಿಕಾರಿ ವಿವೇಕ್ ಅಗರ್ವಾಲ್ ಉಪಾಧ್ಯಕ್ಷರಾಗಿ ಆಯ್ಕೆ ಭಾರತಕ್ಕೆ ಜಾಗತಿಕ ಹಣಕಾಸು ಮತ್ತು ಭದ್ರತಾ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಸಾಧನೆ ದೊರೆತಿದ್ದು,...








