ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಅಭಿಮಾನಿಗಳ ಜಗಳ ಜೋರಾಗಿದೆ. ಈ ಮಧ್ಯೆ ಧ್ರುವ ಸರ್ಜಾ ಅಭಿಮಾನಿಗಳಿಗೆ ಕಿವಿ ಮಾತು ಹೇಳಿದ್ದಾರೆ.
ಸ್ಟಾರ್ ನಟರ ಅಭಿಮಾನಿಗಳು ಇನ್ನೊಬ್ಬ ನಟನನ್ನು ಸಾಮಾಜಿಕ ಜಾಲತಾಣದಲ್ಲಿ ಹೀಗಳೆಯುವುದು, ಇನ್ನೊಬ್ಬ ನಟನ ಅಭಿಮಾನಿಗಳೊಟ್ಟಿಗೆ ಜಗಳ ಮಾಡುವುದು ಸಾಮಾನ್ಯವಾಗುತ್ತಿರುವುದಕ್ಕೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ‘
ಭುವನಂ ಗಗನಂ’ ಸಿನಿಮಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟ ಧ್ರುವ ಸರ್ಜಾ ಫ್ಯಾನ್ಸ್ ವಾರ್ನಲ್ಲಿ ಸಿಲುಕಿಕೊಂಡಿರುವ ಅಭಿಮಾನಿಗಳಿಗೆ ಸಲಹೆ ನೀಡಿ,ಯಾರ ಫ್ಯಾನ್ ಆದರೂ ಆಗಿರಿ ಆದರೆ ಕನ್ನಡ ಸಿನಿಮಾಗಳನ್ನು ತಪ್ಪದೇ ನೋಡಿರಿ. ಅವರ ಫ್ಯಾನ್, ಇವರ ಫ್ಯಾನ್ ಎಂದು ಕಿತ್ತಾಡಬೇಡಿ ಎಂದು ಮನವಿ ಮಾಡಿದ್ದಾರೆ.