ಬಾಲಿವುಡ್ ಬ್ಯೂಟಿ ತಾಪ್ಸಿ ಪನ್ನು ಗುಟ್ಟಾಗಿ ಮದುವೆಯಾಗಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ಬಹುಕಾಲದ ಸ್ನೇಹಿತನ ಜೊತೆ ನಟಿ ಹೊಸ ಬದುಕಿಗೆ ಕಾಲಿಟ್ಟಿದ್ದಾರೆ. ಸದ್ಯ ಅವರ ಮದುವೆಗೆ ಹೋದವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇತ್ತೀಚೆಗಷ್ಟೇ ನಟಿಯ ಮದುವೆ ಕುರಿತು ಹಲವಾರು ಮಾತುಗಳು ಕೇಳಿ ಬಂದಿದ್ದವು. ಆದರೆ, ನಟಿ ಮಾತ್ರ ಯಾವುದಕ್ಕೂ ಸ್ಪಷ್ಟನೆ ನೀಡಿದೆ, ಮೌನ ವಹಿಸಿದ್ದರು. ಸದ್ಯ ಉದಯ್ ಪುರದಲ್ಲಿ ಗುಟ್ಟಾಗಿ ಮದುವೆಯಾಗಿದ್ದಾರೆ ಎನ್ನಲಾಗುತ್ತಿದೆ.
ಮಾರ್ಚ್ 20ರಿಂದ ಮದುವೆ ಸಂಭ್ರಮ ಆರಂಭವಾಗಿದ್ದು, ಮಾರ್ಚ್ 23ಕ್ಕೆ ಮದುವೆಯಾಗಿದೆ ಎನ್ನಲಾಗಿದೆ. ತಾಪ್ಸಿ ಸಿಖ್ ಧರ್ಮಕ್ಕೆ ಸೇರಿದವರು. ಮಥಾಯಸ್ ಕ್ರೈಸ್ತ ಧರ್ಮಕ್ಕೆ ಸೇರಿದ್ದಾರೆ. ಎರಡು ಧರ್ಮದ ಪದ್ಧತಿಯಂತೆ ಮದುವೆ ನೆರವೇರಿದೆ. ಈಗ ಮದುವೆಯ ಫೋಟೋ ವೈರಲ್ ಆಗಿವೆ. 10 ವರ್ಷಗಳಿಂದ ಮಥಾಯಸ್ ಬೋ ಜೊತೆ ತಾಪ್ಸಿ ಡೇಟಿಂಗ್ ಮಾಡುತ್ತಿದ್ದರು ಎನ್ನಲಾಗಿದೆ.