ದೆಹಲಿ : ಬಾಲಿವುಡ್ ನಟ ನವಾಜುದ್ದೀನ್ ಸಿದ್ಧಿಕಿಗೆ ಅವರ ಪತ್ನಿ ಆಲಿಯಾ ಸಿದ್ಧಿಕಿ ಅವರು ಡೈವೋರ್ಸ್ ಕೋರಿ ಲೀಗಲ್ ನೊಟೀಸ್ ಕಳುಹಿಸಿದ್ದಾರೆ. ಕೊರೊನಾ ಲಾಕ್ ಡೌನ್ ಹಿನ್ನೆಲೆ ಸ್ಪಿಡ್ ಪೋಸ್ಟ್ ಗೆ ಅವಕಾಶ ಇಲ್ಲದ ಕಾರಣ ಆಲಿಯಾ ಅವರು ಇ-ಮೇಲ್ ಮತ್ತು ವಾಟ್ಸಾಪ್ ಮೂಲಕ ನೊಟೀಸ್ ರವಾನಿಸಿದ್ದಾರೆ.
11 ವರ್ಷದ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿರುವ ಆಲಿಯಾ, ಈ ವಿವಾಹಕ್ಕೆ ನಾನು ಅಂತ್ಯ ಹಾಡುತ್ತಿದ್ದೇನೆ ಎಂದು ವಾಟ್ಸಾಪ್ ಮೂಲಕ ನೊಟೀಸ್ ಕಳುಹಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
ಆಲಿಯಾ ಹೇಳಿದ್ದೇನು?
“ನಾನು ಲೀಗಲ್ ನೊಟೀಸ್ ನೀಡಿದ್ದೇನೆ, ಆದರೆ ಅದಕ್ಕೆ ಇನ್ನೂ ಪ್ರತಿಕ್ರಿಯೆ ಬಂದಿಲ್ಲ. ಕಳೆದ 10 ವರ್ಷಗಳಿಂದ ಹಲವು ಸಮಸ್ಯೆಗಳನ್ನು ಎದುರಿಸಿದ್ದೇನೆ, ಹೀಗಾಗಿ ವಿಚ್ಛೇಧನದ ನಿರ್ಧಾರ ಕೈಗೊಂಡಿದ್ದೇನೆ. ಕೊರೊನಾ ಲಾಕ್ ಡೌನ್ ಕಾರಣದಿಂದಾಗಿ ಆತ್ಮಾವಲೋಕನ ಸಾಧ್ಯವಾಯಿತು. ಹೀಗಾಗಿ ನಾನು ಮದುವೆ ಅಂತ್ಯಗೊಳಿಸುವ ನಿರ್ಧಾರಕ್ಕೆ
ಬಂದಿದ್ದೇನೆ ಎಂದು ಆಲಿಯಾ ಸಿದ್ಧಿಕಿ ಅವರು ಹೇಳಿದ್ದಾರೆ.
ಸಿದ್ಧಿಕಿ ಮತ್ತು ಆಲಿಯಾ ಅವರು 2009ರಲ್ಲಿ ವಿವಾಹವಾಗಿದ್ದು, ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಆಲಿಯಾ ಅವರನ್ನು ವರಿಸುವ ಮುನ್ನ ಸಿದ್ಧಿಕಿ ಅವರು ಶೀಬಾ ಎಂಬವರನ್ನು ವಿವಾಹವಾಗಿದ್ದರು.
ಹೋಂ ಕ್ವಾರಂಟೈನ್ ನಲ್ಲಿ ನವಾಜುದ್ದೀನ್ ಸಿದ್ಧಿಕಿ. ಇನ್ನು ಸಿದ್ಧಿಕಿ ಅವರು ಅನಾರೋಗ್ಯಪೀಡಿತರಾಗಿರುವ ತಾಯಿಯನ್ನು ನೋಡಲು ಉತ್ತರ ಪ್ರದೇಶದ ಬುಢಾನಾಗೆ ಹೋಗಿದ್ದಾರೆ. ಕೊರೊನಾ ವೈರಸ್ ಸೋಂಕು ಹಿನ್ನೆಲೆಯಲ್ಲಿ ನವಾಜುದ್ದೀನ್ ಹಾಗೂ ಅವರ ಕುಟುಂಬದವರನ್ನು 14 ದಿನಗಳ ಹೋಂ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.








