Egg Bhurji : ಟೇಸ್ಟಿ ಟೇಸ್ಟಿ ಎಗ್ ಬುರ್ಜಿ ಮಾಡಿ ನೋಡಿ..!!
ಬೇಕಾಗುವ ಪದಾರ್ಥಗಳು
ಮೊಟ್ಟೆ
ಶುಂಠಿ
ಈರುಳ್ಳಿ
ಬೆಳ್ಳುಳ್ಳಿ
ಹಸಿರು ಮೆಣಸಿನಕಾಯಿ
ಬೆಣ್ಣೆ
ಎಣ್ಣೆ
ಪಾವ್ ಭಾಜಿ ಮಸಾಲಾ
ಖಾರದ ಪುಡಿ
ಧನ್ಯ ಪುಡಿ
ಉಪ್ಪು
ಟೊಮ್ಯಾಟೋ
ಅರಿಶಿಣ ಪುಡಿ
ನಿಂಬೆ ಹಣ್ಣು
ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ :
ಬೀಟರ್ ಬಳಸಿ ಮಿಶ್ರಣ ಬಟ್ಟಲಿನಲ್ಲಿ 4 ಮೊಟ್ಟೆಗಳು ಮತ್ತು ½ ಟೀಚಮಚ ಉಪ್ಪನ್ನು ಹಾಕಿ ಚನ್ನಾಗಿ ಬೀಟ್ ಮಾಡಿ ಪಕ್ಕಕ್ಕೆ ಇರಿಸಿ.
ಮಧ್ಯಮ-ಎತ್ತರದ ಶಾಖದ ಮೇಲೆ ಬಾಣಲೆಯಲ್ಲಿ 2 ಚಮಚ ಸಸ್ಯಜನ್ಯ ಎಣ್ಣೆ ಮತ್ತು 1 ಚಮಚ ಬೆಣ್ಣೆಯನ್ನು (ಉಪ್ಪು ಅಥವಾ ಉಪ್ಪುರಹಿತ) ಬಿಸಿ ಮಾಡಿ.
ಬಾಣಲೆಯಲ್ಲಿ ಒಂದೆರೆಡು ಸ್ಪೂನ್ ಎಣ್ಣೆ ಹಾಕಿ ಅದಕ್ಕೆ ಅರ್ಧ ಕಪ್ ಸಣ್ಣದಾಗಿ ಹೆಚ್ಚಿದ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೂ ಹುರಿದುಕೊಳ್ಳಬೇಕು..
2 ಟೀ ಸ್ಪೂನ್ ಚಿಕ್ಕದಾಗಿ ಹೆಚ್ಚಿದ ಹಸಿರು ಮೆಣಸಿನಕಾಯಿ , ಟೊಮ್ಯಾಟೋ , ಶುಂಠಿ ಮತ್ತು 1 ಚಮಚ ಬೆಳ್ಳುಳ್ಳಿ ಸೇರಿಸಿ ಹುರಿಯಿರಿ..
ಒಂದು ನಿಮಿಷ ಚನ್ನಾಗಿ ಸ್ಮಾಷ್ ಆಗುವವರೆಗೂ ಬೇಯಲು ಬಿಡಿ…
ಅದಕ್ಕೆ 1 ಟೀಚಮಚ ಧನ್ಯಪುಡಿ ಪುಡಿ, ¼ ಟೀ ಚಮಚ ಅರಿಶಿನ ಪುಡಿ, 2 ಟೀಚಮಚ ಪಾವ್ ಭಾಜಿ ಮಸಾಲಾ, ಮತ್ತು ½ ಟೀಚಮಚ ಕಾಶ್ಮೀರಿ ಕೆಂಪು ಮೆಣಸಿನ ಪುಡಿ ಸೇರಿಸಿ, ಮತ್ತು 30-40 ಸೆಕೆಂಡುಗಳ ಕಾಲ ನಿರಂತರವಾಗಿ ಬೇಯಿಸಿ.
ನಂತರ ಮೊಟ್ಟೆಗಳನ್ನ ಒಡೆದು ಮಿಶ್ರಣ ಮಾಡಿ ಮೊಟ್ಟೆಗಳನ್ನು ಚೆನ್ನಾಗಿ ಬೇಯಿಸಿ.
ನಂತರ ಗ್ಯಾಸ್ ಆಫ್ ಮಾಡಿ 1 ಚಮಚ ನಿಂಬೆ ರಸ ಹಿಡಿ ಕಲಸಿ 2 ಚಮಚ ಕತ್ತರಿಸಿದ ಕೊತ್ತಂಬರಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಬಿಸಿಯಾಗಿ ಬಡಿಸಿ.
Egg Bhurji , tasty recipie , saakshatv