ಈರೋಸ್ ನೌ’ ಓಟಿಟಿಯಲ್ಲಿ ಸಂಚಾರಿ ವಿಜಯ್ ಅಭಿನಯದ 6 ನೇ ಮೈಲಿ’
ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ನಟಿಸಿರುವ ಥ್ರಿಲ್ಲರ್ ಮೂವಿ- 6 ನೇ ಮೈಲಿ ಇಂದಿನಿಂದ ಈರೋಸ್ ನಲ್ಲಿ ಪ್ರೀಮಿಯರ್ ಆಗಿದೆ.
ಸೀನಿ ನಿರ್ದೇಶನದ, ಡಾ.ಶೈಲೇಶ್ ಕುಮಾರ್ ನಿರ್ಮಾಣದ ಈ ಚಿತ್ರದಲ್ಲಿ ಸಂಚಾರಿ ವಿಜಯ್, ಆರ್.ಜೆ. ನೇತ್ರಾ, ಕೃಷ್ಣ ಹೆಬ್ಬಾಳೆ, ರಘು ಪಾಂಡೇಶ್ವರ ಮತ್ತು ಮೈತ್ರಿಜಗ್ಗಿ ನಟಿಸಿದ್ದಾರೆ.
6 ನೇ ಮೈಲಿ ಚಿತ್ರವು ದಟ್ಟವಾದ ಕಾನನದಲ್ಲಿ ಚಾರಣ, ಚಾರಣಿಗರ ನಾಪತ್ತೆ, ರಹಸ್ಯ ಭೇದಿಸಲು ಹೊರಡುವ ನಾಯಕ… ಚಾರಣಿಗರ ನಾಪತ್ತೆ ಪ್ರಕರಣ ಭೇದಿಸಲು ಹೊರಡುವ ನಾಯಕ ಅದರಲ್ಲಿ ಯಶಸ್ವಿಯಾಗುತ್ತಾನೆಯೇ..? ಹೀಗೆ ಹಲವು ಕುತೂಹಲಕಾರಿ ಕಥಾನಕವನ್ನ ಹೊಂದಿದೆ.
ಆಕ್ಷನ್ ಥ್ರಿಲ್ಲರ್ ಚಿತ್ರದ ಮೂಲಕ ಮತ್ತೆ ಬರುತ್ತಿದ್ದಾರೆ ಟೈಗರ್ ಶ್ರಾಫ್..!
ಈರೋಸ್ ನೌ ನಲ್ಲಿ, ನಾವು ಯಾವಾಗಲೂ ನಮ್ಮ ವೀಕ್ಷಕರಿಗೆ ವಿಭಿನ್ನ ಭಾಷೆಗಳಲ್ಲಿ ವಿಭಿನ್ನ ನಿರೂಪಣೆಗಳನ್ನು ತರುತ್ತೇವೆ. ಕನ್ನಡ ಚಿತ್ರ 6 ನೇ ಮೈಲಿ ಒಂದು ಥ್ರಿಲ್ಲರ್ ಆಗಿದ್ದು, ಇದು ಪ್ರತಿಭಾನ್ವಿತ ತಾರಾಗಣವನ್ನು ಒಳಗೊಂಡಿದ್ದು, ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಈ ಚಿತ್ರವು ಉತ್ತಮ ಕಥಾಹಂದರ ಮತ್ತು ಅನನ್ಯ ಪ್ರಸ್ತುತಿಯಿಂದಾಗಿ ಪ್ರೇಕ್ಷಕರು ಈ ಚಲನಚಿತ್ರದ ಡಿಜಿಟಲ್ ಪ್ರೀಮಿಯರ್‍ನೊಂದಿಗೆ ಆಕರ್ಷಿತರಾಗುತ್ತಾರೆ ಎಂದು ನನಗೆ ಖಾತ್ರಿಯಿದೆ ” ಎಂದು ಈರೋಸ್ ನೌ ನ ಮುಖ್ಯ ಅಧಿಕಾರಿ ರಿಧಿಮಾ ಲುಲ್ಲಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸದಾ ವಿಸ್ತರಿಸುತ್ತಿರುವ ಓಟಿಟಿ ಪ್ಲಾಟ್‍ಫಾರ್ಮ್‍ಗಳು ವಿಭಿನ್ನ ಕಥೆಗಳ ಚಿತ್ರಗಳನ್ನ ತಯಾರಿಸಲು ಸಹಕಾರಿಯಾಗಿವೆ. ನಮ್ಮ 6 ನೇ ಮೈಲಿ ಚಿತ್ರವನ್ನ ಪ್ರದರ್ಶಿಸುತ್ತಿರುವುದಕ್ಕಾಗಿ ಈರೋಸ್ ನೌ ಗೆ ನಾವು ಋಣಿ. ನಮ್ಮ ಶ್ರಮ, ಪ್ರೇಕ್ಷಕರ ಬಳಿಗೆ ಈ ಮೂಲಕ ತಲುಪುತ್ತಿರುವುದಕ್ಕೆ ಖುಷಿಯಾಗುತ್ತಿದೆ ಎಂದು ಚಿತ್ರನಟ ಸಂಚಾರಿ ವಿಜಯ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
6 ನೇ ಮೇಲಿ ಚಿತ್ರವನ್ನ ವೀಕ್ಷಿಸಲು www.erosnow.com ಗೆ ಲಾಗ್ ಇನ್ ಮಾಡಿ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel