ಬಾಲಿವುಡ್ ನ ಖ್ಯಾತ ನಟ ದಿಲೀಪ್ ತಾಹೀಲ್ ಗೆ ಕೋರ್ಟ್ ಜೈಲು ಶಿಕ್ಷೆ ಪ್ರಕಟಿಸಿದೆ.
ಬಾಗ್ ಮಿಲ್ಕಾ ಬಾಗ್, ಬಾಜಿಗರ್, ರಾ.ಒನ್ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿರುವ ನಟ ದಲೀಪ್ ತಾಹೀಲ್ (Dalip Taheel) ಗೆ ಮಹಾರಾಷ್ಟ್ರದ ಬಾಂದ್ರಾದ ಅಡಿಷನಲ್ ಚೀಫ್ ಮೆಟ್ರೋಪಾಲಿಟಿನ್ ಮ್ಯಾಜಿಸ್ಟ್ರೇಟ್ ಜೈಲು ಶಿಕ್ಷೆ ಪ್ರಕಟಿಸಿದೆ. ಅಲ್ಲದೇ, ಶಿಕ್ಷೆಯೊಂದಿಗೆ ದಂಡ ವಿಧಿಸಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ನಟ, ತೀರ್ಪನ್ನು ಪ್ರಶ್ನಿಸಲಾಗುವುದು ಎಂದು ಹೇಳಿದ್ದಾರೆ.
2018ರಲ್ಲಿ ನಡೆದ ಡ್ರಂಕ್ ಅಂಡ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದಲೀಪ್ ಗೆ ಎರಡು ತಿಂಗಳು ಜೈಲು ಹಾಗೂ ಐದು ನೂರು ರೂ. ದಂಡ ವಿಧಿಸಲಾಗಿತ್ತು. ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆಗೆ ಐದು ಸಾವಿರ ರೂಪಾಯಿ ಪರಿಹಾರ ನೀಡುವಂತೆ ಸೂಚಿಸಿದೆ.
ದಲೀಪ್ ವಿರುದ್ಧ 2018ರಲ್ಲಿ ಹಿಟ್ ಅಂಡ್ ರನ್ ಕೇಸು ದಾಖಲಾಗಿತ್ತು. ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿದ್ದ ನಟ ಆಟೋಗೆ ಗುದ್ದಿದ್ದರು. ಆ ವೇಳೆ ನಟ, ಮದ್ಯ ಸೇವಿಸಿರುವುದು ದೃಢವಾಗಿತ್ತು. ಇದನ್ನು ಪರಿಶೀಲಿಸಿ ಕೋರ್ಟ್ ತೀರ್ಪು ನೀಡಿತ್ತು.