ಖ್ಯಾತ ಮಾಡೆಲ್ ಹಾಗೂ ನಟಿ ಈಗ ಸನ್ಯಾಸತ್ವ ಸ್ವೀಕರಿಸಿದ್ದಾರೆ.
ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ಹಾಗೂ ಐಶ್ವರ್ಯ ರೈ ಅವರಂತಹ ಮಾಡೆಲ್ ಗಳಿಗೆ ಸೌಂದರ್ಯ ಸ್ಪರ್ಧೆಯಲ್ಲಿ ಸ್ಪರ್ಧೆ ಒಡ್ಡಿ ರನ್ನರ್ ಅಪ್ ಆಗಿದ್ದ ಮಾಡೆಲ್ (model), ನಟಿ ಬರ್ಖಾ ಮದನ್ (Barkha Madan) ಸನ್ಯಾಸಿನಿಯಾಗಿದ್ದಾರೆ (Nun). ಇವರು 1994ರಲ್ಲಿ ನಡೆದ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಫೈನಲ್ ವರೆಗೆ ತಲುಪಿದ್ದರು.
ಆನಂತರ ಸಿನಿ ರಂಗ ಪ್ರವೇಶಿಸಿದ್ದರು. ಖಿಲಾಡಿ ಕಾ ಕಿಲಾಡಿ ಸಿನಿಮಾದ ಮೂಲಕ ಅಭಿಯಾನ ಆರಂಭಿಸಿ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದರು. ಆನಂತರ ಬಾಲಿವುಡ್ ನಿಂದ ದೂರವಾಗಿ ಈಗ ಸನ್ಯಾಸಿನಿಯಾಗಿದ್ದಾರೆ.
ದಲೈ ಲಾಮಾ ಅವರ ಅನುನಾಯಿ ಆಗಿದ್ದ ಬರ್ಖಾ, ಆಧ್ಯಾತ್ಮಿಕ ಲೋಕದೆಡೆ ಪ್ರಯಾಣ ಆರಂಭಿಸಿದ್ದಾರೆ. ಸದ್ಯ ಸನ್ಯಾಸಿನಿಯಾಗಿ ಪರ್ವತಗಳಲ್ಲಿ ವಾಸಿಸುತ್ತಿದ್ದಾರೆ ಎನ್ನಲಾಗುತ್ತಿದೆ.