ಖ್ಯಾತ ನಟ ಅಜಿತ್ ಕುಮಾರ್ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸೈಕಲ್, ಬೈಕ್ ಏರಿ ಏಕಾಏಕಿ ನೂರಾರು ಕಿ.ಮೀ ಪ್ರವಾಸ ಮಾಡುವ ಅಜಿತ್ ಗೆ ಏಕಾಏಕಿ ಏನಾಯಿತು ಎಂದು ಅಭಿಮಾನಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಆತಂಕ ಪಡುವಂಥದ್ದು ಅಜಿತ್ ಅವರಿಗೆ ಏನೂ ಆಗಿಲ್ಲ ಎನ್ನುವ ಮಾಹಿತಿ ಸದ್ಯ ಸಿಕ್ಕಿದೆ. ಪ್ರವಾಸ ಮತ್ತು ಇಂತಿಷ್ಟು ತಿಂಗಳು ಕಳೆದ ಬಳಿಕ, ಅವರು ರೆಗ್ಯುಲರ್ ಆಗಿ ಚೆಕಪ್ ಮಾಡಿಸಿಕೊಳ್ಳುತ್ತಾರಂತೆ. ಹೀಗಾಗಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ.
ಅಜಿತ್ ಅವರ ಆರೋಗ್ಯ ಅಷ್ಟೊಂದು ಆರೋಗ್ಯಪೂರ್ಣವಾಗಿರಲು ಕಾರಣ, ಆಗಾಗ್ಗೆ ಅವರು ವೈದ್ಯರನ್ನು ಭೇಟಿ ಮಾಡಿ, ಪರೀಕ್ಷೆ ಮಾಡಿಸಿಕೊಳ್ಳುತ್ತಾರೆ. ಬೈಕ್ ಸವಾರಿಗೆ ಹೊರಟರೆ, ಅದಕ್ಕೂ ಮುನ್ನ ಆರೋಗ್ಯ ತಪಾಸಣೆ ಮಾಡಿಕೊಳ್ಳುತ್ತಾರೆ ಎಂದು ತಿಳಿದು ಬಂದಿದೆ.