ಬಾಲಿವುಡ್ ನಟಿ ಸನ್ನಿ ಲಿಯೋನ್ (Sunny Leone) ಕಾಸರಗೋಡಿನಲ್ಲಿ (Kasaragod) ಕಾಣಿಸಿಕೊಂಡಿದ್ದು, ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಕಾಸರಗೋಡಿನ ಸೀತಂಗೋಳಿ ಹತ್ತಿರದ ಶೇಣಿಯಲ್ಲಿ ನಡೆಯುತ್ತಿರುವ ಹಿಂದಿ ಸಿನಿಮಾದ ಶೂಟಿಂಗ್ (Shooting) ನಲ್ಲಿ ಸನ್ನಿ ಭಾಗವಹಿಸಿದ್ದಾರೆ. ಈ ಶೂಟಿಂಗ್ ಶೇಣಿಯ ಶಾಲೆ ಹತ್ತಿರದ ರಾಜ್ಯ ಹೆದ್ದಾರಿಯಲ್ಲಿ ನಡೆಯುತ್ತಿತ್ತು. ಬಿಸಿಲನ್ನೂ ಲೆಕ್ಕಿಸದೆ ಶೂಟಿಂಗ್ ನಲ್ಲಿ ಸನ್ನಿ ಭಾಗವಸಿದ್ದರು.
ಈ ವೇಳೆ ರಸ್ತೆಯಲ್ಲಿ ನಡೆಯುವ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪ್ರದೇಶದಲ್ಲಿ ಹಲವಾರು ಚಿತ್ರಗಳ ಶೂಟಿಂಗ್ ನಡೆದಿದೆ. ಆದರೆ, ಸನ್ನಿ ಬಂದಿದ್ದಾರೆಂಬ ಸುದ್ದಿ ಕೇಳಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು