ಸಾರಿಗೆ ನೌಕರರ ಮುಷ್ಕರ – . ಖಾಸಗಿ ಬಸ್ ಗಳ ಓಡಾಟಕ್ಕೆ ಫ್ರೀ ಪರ್ಮಿಟ್..!
ನಾಳೆ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ಬಿಎಂಟಿಸಿ, ಕೆಎಸ್ ಆರ್ ಟಿಸಿ ಹಿರಿಯ ಅಧಿಕಾರಿಗಳ ಜೊತೆ ಪೊಲೀಸ್ ಹಿರಿಯ ಅಧಿಕಾರಿಗಳ ಸಭೆ ನಡೆಸಿದ್ದಾರೆ. ನಾಳೆ ಬಸ್ ಬಂದ್ ಹಿನ್ನೆಲೆಯಲ್ಲಿ ಬಂದೋಬಸ್ತ್ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಸ್ವಯಂ ಪ್ರೇರಿತವಾಗಿ ಕೆಲಸಕ್ಕೆ ಬರುವ ನೌಕರರಿಗೆ ಭದ್ರತೆ ಒದಗಿಸೋದು. ಪೊಲೀಸ್ ಭದ್ರತೆಯೊಂದಿಗೆ ಬಸ್ ಓಡಿಸುವ ಬಗ್ಗೆಯೂ ಚರ್ಚೆ ನಡೆದಿದೆ.
ಇತ್ತ ನಾಳೆಯಿಂದ ಫ್ರೀ ಖಾಸಗಿ ವಾಹನಗಳಿಗೆ ಪರ್ಮಿಷನ್ ಕೊಡಲಾಗಿದೆ. ಖಾಸಗಿ ಬಸ್ ಗಳ ಓಡಾಟಕ್ಕೆ ಫ್ರೀ ಪರ್ಮಿಟ್ ಕೊಡಲು ಸೂಚನೆ ನೀಡಲಾಗಿದೆ. ಪ್ರಯಾಣಿಕರಿಗೆ ಯಾವುದೇ ಸಮಸ್ಯೆ ಆಗದೇ ಇರುವ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಮ್ಯಾಕ್ಸಿ ಕ್ಯಾಬ್, ಖಾಸಗಿ ಬಸ್, ಟಿಟಿ, ಜಿಪ್, ಕಾರುಗಳು ಓಡಾಟಕ್ಕೆ ಫ್ರೀ ಪರ್ಮಿಟ್ ನೀಡಲಾಗಿದೆ. ಸ್ವಯಂ ಪ್ರೇರಿತವಾಗಿ ಬಸ್ ಓಡಾಟ ಮಾಡೋರಿಗೆ ಮುಕ್ತ ಅವಕಾಶ ನೀಡಲಾಗಿದೆ. ಪೊಲೀಸ್ ಬಂದೋಬಸ್ತಿನ ಮೂಲಕ ಬಸ್ ಓಡಿಸಲು ತೀರ್ಮಾನ ತೆಗೆದುಕೊಳ್ಲಲಾಗಿದೆ. ಖಾಸಗಿ ಬಸ್ ಗಳಿಗೆ ತೊಂದರೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುವ ಸಿದ್ಧತೆ ನಡೆದಿದೆ.
144 ಸೆಕ್ಷನ್ ಜಾರಿಯಾಗಿರುತ್ತೆ : ಸಾರಿಗೆ ನೌಕರರಿಗೆ ಕಮಲ್ ಪಂತ್ ಎಚ್ಚರಿಕೆ
ಕುಡಿದ ಮತ್ತಿನಲ್ಲಿ ಮನೆಗೆ ಬೆಂಕಿಯಿಟ್ಟು 7 ಜನರನ್ನ ಕೊಂದಿದ್ದ ಆರೋಪಿ ಸಾವು..!
ಸಾರಿಗೆ ನೌಕರರ ಪ್ರತಿಭಟನೆ – ಮುಷ್ಕರದ ಲಾಭ ಪಡೆಯಲು ಸಜ್ಜಾದ ಖಾಸಗಿ ಬಸ್ ಗಳ ಒಕ್ಕೂಟ..!