ದೇವರ ಮೇಲಿನ ಸಿಟ್ಟಿಗೆ ದೇವಸ್ಥಾನಕ್ಕೆ ಕಲ್ಲು ಹೊಡೆದ..!
ನವದೆಹಲಿ: ಕಸ ಆಯ್ದುಕೊಂಡು ಜೀವನ ಸಾಗಿಸುತ್ತಿದ್ದ ಕಡುಬಡವ ವ್ಯಕ್ತಿಯೊಬ್ಬ ತನ್ನ ಸ್ಥಿತಿಗೆ ಕಾರಣ ದೇವರೇ ಎಂದು ಆಕ್ರೋಶದಲ್ಲಿ ದೇವಾಲಯಕ್ಕೆ ಕಲ್ಲು ಹೊಡೆದಿರುವ ಘಟನೆ ದೆಹಲಿಯಲ್ಲಿ ಬೆಳಕಿಗೆ ಬಂದಿದೆ. ಆತ ಕಲ್ಲು ಹೊಡೆದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಆತನನ್ನ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ವಿಕ್ಕಿ ಮಲ್ ಎಂಬ 28 ವರ್ಷದ ಯುವಕ ಈ ರೀತಿಯಾಗಿ ದೇವರ ಮೇಲೆಯೇ ಸಿಟ್ಟು ತೋರಿಸಿಕೊಂಡಿದ್ದಾನೆ. ಈತ ದೆಹಲಿಯ ಪಂಜಾಬಿ ಬಾಗ್ ನಲ್ಲಿ ಕಸ ಹಾಯ್ದುಕೊಂಡು ಜೀವನ ನಡೆಸುತ್ತಿದ್ದ.
ಶನಿವಾರ ಮುಂಜಾನೆ ದೇವಸ್ಥಾನದ ಬಳಿ ನಿಂತು ದೇವರತ್ತ ಕಲ್ಲು ಎಸೆದಿದ್ದಾನೆ. ನಿನ್ನಿಂದ ನನ್ನ ಬದುಕು ಹೀಗಿದೆ ಎನ್ನುವ ಸಿಟ್ಟನ್ನು ತೋಡಿಕೊಂಡಿದ್ದಾನೆ. ಶುಕ್ರವಾರ ರಾತ್ರಿ ದೇವಸ್ಥಾನದಲ್ಲೇ ತಂಗಿದ್ದ ರಂಜೀತ್ ಫತಾಕ್ ಹೆಸರಿನ ವ್ಯಕ್ತಿಯಿಂದ ಈ ವಿಚಾರ ತಿಳಿದುಬಂದಿದೆ. ದೂರಿನ ಆಧಾರದ ಮೇಲೆ ದೇವಸ್ಥಾನದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗಿದೆ. ವಿಕ್ಕಿ ದೇವಸ್ಥಾನದ ಹೊರಗಡೆ ನಿಂತು ಕಲ್ಲು ಎಸೆದಿರುವುದು ಅದರಲ್ಲಿ ಸೆರೆಯಾಗಿದ್ದು, ಇದೀಗ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮನೆಕೆಲಸದವಳ ಮೇಲೆ ಪ್ರೀತಿಗಾಗಿ ಹೆಂಡತಿ ಮಕ್ಕಳನ್ನೇ ಆಚೆ ಹಾಕಿದ ಪತಿ..!
ಬಾಯ್ ಫ್ರೆಂಡ್ ನಂಬಿ ಹೋದ ಅಪ್ರಾಪ್ತೆ ಮೇಲೆ ಎರಗಿಬಿದ್ದ ರಾಕ್ಷಸರು – ಪ್ರಿಯಕರ ಸೇರಿ 8 ಮಂದಿಯಿಂದ ಗ್ಯಾಂಗ್ ರೇಪ್..!