ರಾಷ್ಟ್ರೀಯ,7 ಜುಲೈ 2023: JioCinema ವೇದಿಕೆಯು, ಅಸಂಪ್ರದಾಯಿಕ, ಕೌಟುಂಬಿಕ ಸಂಬಂಧವೊಂದರ ಸುತ್ತ ಹೆಣೆಯಲಾಗಿರುವ ಮುದ್ದಾದ ಸಿನಿಮಾ ‘ಟ್ರಯಲ್ ಪೀರಿಯಡ್’ನ ಬಿಡುಗಡೆಗೆ ಸಜ್ಜಾಗಿದೆ. ಜೆನೆಲಿಯಾ ದೇಶಮುಖ್ ಮತ್ತು ಮಾನವ್ ಕೌಲ್ ಮುಖ್ಯಪಾತ್ರದಲ್ಲಿ ನಟಿಸಿರುವ, ಅಲೆಯಾ ಸೆನ್ ನಿರ್ದೇಶನದ ಈ ಸಿನಿಮಾದಲ್ಲಿ ಶಕ್ತಿ ಕಪೂರ್, ಶೀಬಾ ಚಡ್ಡಾ, ಗಜರಾಜ್ ರಾವ್ ಮತ್ತು ಝಿಡಾನೆ ಬ್ರೇಜ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಆಧುನಿಕ ಕಾಲದ ಕುಟುಂಬವೊಂದರ ಬಂಧ ಮತ್ತು ಸಂಕೀರ್ಣ ಸಂಬಂಧಗಳ ಭಾವನಾತ್ಮಕ ಪಯಣವನ್ನು ‘ಟ್ರಯಲ್ ಪೀರಿಯಡ್’ ಸಶಕ್ತವಾಗಿ ಹಿಡಿದಿಟ್ಟಿದೆ.
ಸಿಂಗಲ್ ಮದರ್ ಆನಾಳ ಬದುಕಿನ ಕಥೆಯೇ ಈ ಸಿನಿಮಾದ ತಿರುಳು. ಖ್ಯಾತ ನಟಿ ಜೆನೆಲಿಯಾ ದೇಶಮುಖ್ ಆನಾಳ ಪಾತ್ರಕ್ಕೆ ಜೀವ ತುಂಬಿದ್ದಾರೆ. ಮಗ, ‘ಮೂವತ್ತು ದಿನಗಳ ಟ್ರಯಲ್ ಪೀರಿಯಡ್ಗೆ ನನಗೊಬ್ಬ ತಂದೆ ಬೇಕು’ ಎಂಬ ವಿಕ್ಷಿಪ್ತ ಬೇಡಿಕೆಯನ್ನು ಮುಂದಿಟ್ಟಾಗ ಆನಾಳ ಬದುಕಿನಲ್ಲಿ ಅಲ್ಲೋಲಕಲ್ಲೋಲವಾಗುತ್ತದೆ. ಮಗನ ಬೇಡಿಕೆಯ ಈಡೇರಿಕೆಯ ದಾರಿಯಲ್ಲಿ ಅವರ ಬದುಕಿನಲ್ಲಿ ಪಿಡಿ ಅಲಿಯಾಸ್ ಪ್ರಜಾಪತಿ ದ್ವಿವೇದಿಯ ಆಗಮನವಾಗುತ್ತದೆ. ಉಜ್ಜಯಿನಿಯ ಪಿಡಿ, ಆನಾ ಮತ್ತು ಅವಳ ಮಗನ ನಿರೀಕ್ಷೆಗೆ ಸಂಪೂರ್ಣ ವಿರುದ್ಧವಾದ ಸ್ವಭಾವದವನಾಗಿರುತ್ತಾನೆ. ಇಂಥದ್ದೊಂದು ಅನ್ಕನ್ವೆನ್ಷನಲ್ ಕುಟುಂಬದಲ್ಲಿ ಎದುರಾಗುವ ಸವಾಲುಗಳು, ವೈಯಕ್ತಿಕ ಸಂಘರ್ಷಗಳ ಕಿಡಿ, ಅನಿರಿಕ್ಷಿತವಾಗಿ ಹುಟ್ಟಿಕೊಳ್ಳುವ ಸಂಬಂಧಗಳ ನವಿರುತನ, ಪ್ರೇಮ ಮತ್ತು ಸ್ನೇಹದ ತಾಜಾತನ ಎಲ್ಲವೂ ಸೇರಿ ಮರೆಯಲಾರದ ಅಪರೂಪದ ಅನುಭವವನ್ನು ಈ ಸಿನಿಮಾ ಕೊಡುತ್ತದೆ.
Watch the trailer here:
ಜ್ಯೋತಿ ದೇಶಪಾಂಡೆ ನಿರ್ಮಿಸಿರುವ ಈ ಸಿನಿಮಾವನ್ನು ಜಿಯೊ ಸ್ಟೂಡಿಯೊಸ್ ಪ್ರಸ್ತುತಪಡಿಸುತ್ತಿದೆ. ಈ ಸಿನಿಮಾದ ನಿರ್ಮಾಣದಲ್ಲಿ ಕೈಜೋಡಿಸಿರುವ ಕ್ರೋಮ್ ಪಿಕ್ಚರ್ಸ್ ಪ್ರೊಡಕ್ಷನ್ನ ಹೇಮಂತ್ ಭಂಡಾರಿ, ಅಮಿತ್ ರವೀಂದ್ರನಾಥ ಶರ್ಮ ಮತ್ತು ಅಲೆಯ ಸೆನ್ ಅವರ ಪ್ರಕಾರ, ಟ್ರಯಯಲ್ ಪೀರಿಯಡ್ ಒಂದು ಪರಿಪೂರ್ಣ ಕೌಟುಂಬಿಕ ಮನರಂಜನೆಯ ಸಿನಿಮಾ.
ನಾಯಕಿಯಾಗಿ ಕಾಣಿಸಿಕೊಂಡಿರುವ ಜೆನೆಲಿಯಾ ದೇಶಮುಖ್, ಈ ಸಿನಿಮಾದ ಬಗ್ಗೆ ಅನಿಸಿಕೆಗಳನ್ನು ಹಂಚಿಕೊಂಡಿದ್ದು ಹೀಗೆ: ‘ಸಿನಿಮಾಗಳ ಸಂಖ್ಯೆಗಿಂತ ಗುಣಮಟ್ಟವನ್ನೇ ನೆಚ್ಚಿಕೊಂಡು ಸಿನಿಮಾವನ್ನು ಆಯ್ದುಕೊಳ್ಳಬೇಕಾದ ಹಂತಕ್ಕೆ ನನ್ನ ವೃತ್ತಿಜೀವನ ಬಂದು ನಿಂತಿದೆ. ಡೈರೆಕ್ಟರ್ ಅಲೆಯಾ ಸೆನ್ ಮತ್ತು ಕ್ರೋಮ್, ‘ಟ್ರಯಲ್ ಪೀರಿಯಡ್’ನಲ್ಲಿ ನಟಿಸುವ ಆಫರ್ ತೆಗೆದುಕೊಂಡು ಬಂದಾಗ ಅದರ ಕಥೆ ಕೇಳಿದೆ. ಇದೊಂದು ತಾಯಿಯ ಕಥೆ. ಜೊತೆಗೆ, ಹೆಣ್ಣೊಬ್ಬಳು ತಾಯ್ತನದ ದಾರಿಯಲ್ಲಿ ಹಾದುಹೋಗಬೇಕಾಗುವ ಸಂಬಂಧಗಳ ಕಥೆಯೂ ಹೌದು. ಇದು ಕಾಲೇಜು ಲವ್ ಸ್ಟೋರಿಯಲ್ಲ, ಬದಲಿಗೆ ತಾಯಿಯೊಬ್ಬಳ ಬದುಕಿನಲ್ಲಿ ನಡೆಯುವ ಪ್ರೇಮಕಥೆ. ನಾನೂ ಇಂಥದ್ದೇ ಒಂದು ಭಿನ್ನಪಾತ್ರದ ನಿರೀಕ್ಷೆಯಲ್ಲಿದ್ದೆ. ಈಗ ‘ಟ್ರಯಲ್ ಪೀರಿಯಡ್’ ಸಿನಿಮಾ, ಬಹಳ ದೊಡ್ಡ ಸಂಖ್ಯೆಯಲ್ಲಿ ಮತ್ತು ಇಂಥ ಸಿನಿಮಾಗಳನ್ನು ಇಷ್ಟಪಡುವ ಬಹುದೊಡ್ಡ ಸಂಖ್ಯೆಯ ಪ್ರೇಕ್ಷಕರನ್ನು ಹೊಂದಿರುವ ‘JioCinema’ ವೇದಿಕೆಯಲ್ಲಿ ಪ್ರೀಮಿಯರ್ ಆಗುತ್ತಿರುವುದು ನನಗೆ ಸಾಕಷ್ಟು ಖುಷಿ ಕೊಟ್ಟಿದೆ. ನಾವು ಒಂದು ತಂಡವಾಗಿ ತುಂಬ ಪ್ರೀತಿಯಿಂದ ಈ ಸಿನಿಮಾ ಮಾಡಿದ್ದೇವೆ ಮತ್ತು ನಮ್ಮ ಪ್ರಾಮಾಣಿಕ ಪ್ರಯತ್ನ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ’
ನಾಯಕನಾಗಿ ನಟಿಸಿರುವ ಮಾನವ್ ಕೌಲ್ ಅವರಿಗೂ ಈ ಸಿನಿಮಾದ ಕುರಿತು ಸಾಕಷ್ಟು ನಿರೀಕ್ಷೆ ಇದೆ. ‘ಟ್ರಯಲ್ ಪೀರಿಯಡ್’ ಸಿನಿಮಾದಲ್ಲಿ ಹಲವು ವಿಶೇಷಗಳಿವೆ! ಹೃದಯಕರಗಿಸುವ ಈ ಸಿನಿಮಾದಲ್ಲಿ ಭಾವನಾತ್ಮಕ ಏಳುಬೀಳಿನ ಜರ್ನಿಯಿದೆ. ಅದಕ್ಕಿಂತ ಹೆಚ್ಚಾಗಿ, ಇಷ್ಟೊಂದು ಅದ್ಭುತವಾದ ಪ್ರತಿಭಾವಂತ ನಟರು ಮತ್ತು ಕ್ರೋಮ್ ಪಿಕ್ಚರ್ಸ್ ತಂಡದ ಜೊತೆಗೆ ಕೆಲಸ ಮಾಡಿದ್ದು ನನಗೊಂದು ಮರೆಯಲಾರದ ಅನುಭವ. ನಾವೆಲ್ಲರೂ ಈ ಚಿತ್ರವನ್ನು ತುಂಬ ಪ್ರೀತಿಯಿಂದ ಮಾಡಿದ್ದೇವೆ ಮತ್ತು ಇಲ್ಲಿನ ಒಂದೊಂದು ಪಾತ್ರವೂ ವಿಭಿನ್ನತೆಯಿಂದ ನಿಮ್ಮ ಮನಸಲ್ಲಿ ಅಚ್ಚೊತ್ತುತ್ತದೆ. ಇದೇ ಡೈರೆಕ್ಟರ್ ಅಲೆಯಾ ಸೆನ್ ಅವರ ಶಕ್ತಿ.
ನಿರ್ದೇಶಕಿ ಅಲೆಯಾ ಸೆನ್ ಈ ಚಿತ್ರದ ಬಗ್ಗೆ ವಿವರಿಸುತ್ತಾ, ‘ಟ್ರಯಲ್ ಪೀರಿಯಡ್’ ಸಿನಿಮಾಗೆ ನನ್ನ ಹೃದಯದಲ್ಲಿ ವಿಶೇಷವಾದ ಸ್ಥಾನವಿದೆ. ಒಬ್ಬಳು ಫಿಲ್ಮ್ಮೇಕರ್ಆಗಿ, ಮನುಷ್ಯ ಸಂಬಂಧಗಳ ಅಸಂಪ್ರದಾಯಿಕ ಆಯಾಮಗಳನ್ನು ಶೋಧಿಸುವುದರಲ್ಲಿ ನನಗೆ ಹೆಚ್ಚಿನ ಆಸಕ್ತಿ ಇದೆ. ಇಂದಿನ ಜೆನ್ ಆಲ್ಫಾ ತಲೆಮಾರಿನ ಮಕ್ಕಳ ಆಲೋಚನೆಯಲ್ಲಿ ಫಿಲ್ಟರ್ ಇರುವುದಿಲ್ಲ. ಅವರು ಡಿಮ್ಯಾಂಡ್ ಮಾಡುವ ಸಂಗತಿಗಳೂ ಅನಿರೀಕ್ಷಿತವೇ ಆಗಿರುತ್ತವೆ. ಅಂಥ ಪೀಳಿಗೆಯ ಮಗುವೊಂದು ಸಿಂಗಲ್ ಪೇರೆಂಟ್ ಆಗಿರುವ ಅಮ್ಮನ ಬಳಿ ‘ಬಾಡಿಗೆ ತಂದೆ’ಯನ್ನು ಕೇಳಿದಾಗ ಏನಾಗುತ್ತದೆ ಎನ್ನುವುದೇ ಈ ಸಿನಿಮಾದ ಕಥೆ. ಈ ಸಿನಿಮಾ ಇಂದಿನ ವಿಘಟಿತ ಕುಟುಂಬಗಳು ಎದುರಿಸುವ ಸಮಸ್ಯೆಗಳನ್ನು ಬಿಚ್ಚಿಡುತ್ತದೆ. ಜೆನೆಲಿಯಾ ಮತ್ತು ಮಾನವ್ ಜೊತಗೆ ಗಜರಾಜ್ ರಾವ್, ಶಕ್ತಿ ಕಪೂರ್, ಶೀಬಾ ಚಡ್ಡಾ ಮತ್ತು ಝಿಡಾನೆ ಎಲ್ಲರೂ ಈ ಸಿನಿಮಾವನ್ನು ಇನ್ನಷ್ಟು ಶ್ರೀಮಂತಗೊಳಿಸಿದ್ದಾರೆ.’ ಎಂದು ಹೇಳುತ್ತಾರೆ.
‘ಭಾರತದ ಸಾಂಪ್ರದಾಯಿಕ ಕುಟುಂಬ ವ್ಯವಸ್ಥೆಯಲ್ಲಿ ಉಂಟಾಗುತ್ತಿರುವ ಬದಲಾವಣೆಗಳನ್ನು ಹಿಡಿದಿಡುವ ಈ ಸಿನಿಮಾ, ಪ್ರೇಕ್ಷಕರನ್ನು ಭಾವುಕಗೊಳಿಸುತ್ತದೆ. ಕ್ರೋಮ್ ಪಿಕ್ಚರ್ಸ್ ಕಡೆಯಿಂದ ನಾವು, ‘JioCinema’ದಲ್ಲಿ ಬಿಡುಗಡೆಯಾಗುತ್ತಿರುವ ಕೌಟುಂಬಿಕ ಮನರಂಜನೆಯ ‘ಟ್ರಯಲ್ ಪೀರಿಯಡ್’ ಸಿನಿಮಾವನ್ನು ನೋಡಿ ಎಂದು ಹೃದಯಪೂರ್ವಕವಾಗಿ ಆಹ್ವಾನಿಸುತ್ತೇವೆ.’ ಎಂದೂ ಅಲೆಯಾ ಆಹ್ವಾನಿಸುತ್ತಾರೆ.
ವಿನೋದ, ರೋಮಾಂಚನ, ಡ್ರಾಮಾ ಮತ್ತು ಭಾವುಕತೆಗಳ ಹದವಾದ ಮಿಶ್ರಣದಲ್ಲಿ ರೂಪುಗೊಂಡಿರುವ ‘ಟ್ರಯಲ್ ಪೀರಿಯಡ್’ ಸಿನಿಮಾ, ಜುಲೈ 21ಕ್ಕೆ ಬಿಡುಗಡೆಯಾಗುತ್ತಿದೆ. JioCinema ದಲ್ಲಿ ವೀಕ್ಷಿಸಿ!