ನಟಿ ಅಮಲಾ ಪೌಲ್ ಅವರು ಮತ್ತೆ ಮದುವೆ ವಿಚಾರದಲ್ಲಿ ಸುದ್ದಿಯಾಗಿದ್ದಾರೆ.
ಕನ್ನಡದ ಹೆಬ್ಬುಲಿಯಲ್ಲಿ ನಾಯಕಿ ನಟಿಯಾಗಿ ಅಭಿನಯಿಸಿದ್ದ ಅಮಲಾ ಪೌಲ್ ಎರಡನೇ ಬಾರಿ ಮದುವೆಯಾಗಿದ್ದಾರೆ. ಅವರು ತಮ್ಮ ಸ್ನೇಹಿತ ಜಗತ್ ಸಾಯಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಅಮಲಾ ಪೌಲ್ ಹಾಗೂ ಜಗತ್ ಸಾಯಿ ಇಂದು ಕೊಚ್ಚಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಎನ್ನಲಾಗಿದೆ. ನಟಿ ಅಮಲಾ ಪೌಲ್, 2014ರಲ್ಲಿ ತಮಿಳು ಸಿನಿಮಾ ನಿರ್ದೇಶಕ ವಿಜಯ್ ರನ್ನು ಪ್ರೀತಿಸಿ ವಿವಾಹವಾಗಿದ್ದರು. ಆದರೆ ವಿಜಯ್ ಜೊತೆ ಭಿನ್ನಾಭಿಪ್ರಾಯ ಉಂಟಾದ ಕಾರಣ ಅವರಿಂದ ದೂರವಾಗಿದ್ದಾರೆ.
ನಂತರ ಅಮಲಾ ಪೌಲ್ ಅವರು, ಗಾಯಕ ಭುವೀಂದರ್ ಜೊತೆಗೆ ಮದುವೆಯಾಗಲಿದ್ದಾರೆ ಎಂಬ ಮಾತುಗಳು ಜೋರಾಗಿ ಕೇಳಿ ಬರುತ್ತಿದ್ದವು. ಆದರೆ, ಬಾಯ್ಫ್ರೆಂಡ್ ಭುವೀಂದರ್ ತಮಗೆ ಕಿರುಕುಳ ನೀಡಿದ್ದಾನೆ ಎಂದು ಅಮಲಾ ಆರೋಪ ಮಾಡಿ ಭುವೀಂದರ್ ಇಂದ ದೂರಾದರು. ಈಗ ತಮ್ಮ ಬಾಯ್ಫ್ರೆಂಡ್ ಜಗತ್ ಸಾಯಿ ಜೊತೆಗೆ ಕೊಚ್ಚಿಯ ರೆಸಾರ್ಟ್ ನಲ್ಲಿ ಮದುವೆಯಾಗಿದ್ದಾರೆ. ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ನವ ದಂಪತಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.