ನವದೆಹಲಿ : ಯುವಕನೊಬ್ಬ ವಿವಾಹಿತ ಮಹಿಳೆಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದಕ್ಕೆ ಆತನ ಸಹೋದರನನ್ನು ಕಾರಿನಲ್ಲಿ ಸಜೀವವಾಗಿ ಸುಟ್ಟು ಹಾಕಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರನಲ್ಲಿ ಬೆಳಕಿಗೆ ಬಿಂದೆ.
ನಾಗರಾಜು ಸಾವನ್ನಪ್ಪಿದ ವ್ಯಕ್ತಿ ಎಂದು ಗುರುತಿಸಲಾಗಿದೆ. ಸಾವನ್ನಪ್ಪಿದ ವ್ಯಕ್ತಿಯ ಸಹೋದರ ವಿವಾಹಿತ ಮಹಿಳೆ ರಿಪುಂಜಯ ಎಂಬುವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎಂಬ ಆರೋಪ ಕೇಳಿ ಬಂದಿದೆ. ಇವರು, ಆಂಧ್ರಪ್ರದೇಶ ಕೋಣಸೀಮ ಜಿಲ್ಲೆಯ ರಾಮಚಂದ್ರಾಪುರಂ ಮಂಡಲದ ನಿವಾಸಿಗಳು. ಈ ಸಂಬಂಧವನ್ನು ಮಹಿಳೆಯ ಕುಟುಂಬಸ್ಥರು ಹಲವು ಬಾರಿ ವಿರೋಧಿಸಿದ್ದಾರೆ. ಈ ಕುರಿತು ಎಚ್ಚರಿಕೆ ನೀಡಲು ಪುರುಷೋತ್ತಮನ್‌ನ ಅಣ್ಣ ನಾಗರಾಜುಗೆ ಕರೆ ಮಾಡಿದ್ದರು. ವಿಷಯ ಬಗೆಹರಿಸಲು ಮಹಿಳೆಯ ಕುಟುಂಬಸ್ಥರು, ಆತನನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದರು. ಈ ಸಂದರ್ಭದಲ್ಲಿ ಆತನನ್ನು ಥಳಿಸಿ, ಹಗ್ಗದಿಂದ ಆತನ ಕೈಕಾಲುಗಳನ್ನು ಕಟ್ಟಿಹಾಕಿ, ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ.
ನಂತರ, ಕಾರನ್ನು ಕಮರಿಗೆ ತಳ್ಳಲು ಪ್ರಯತ್ನಿಸಿದ್ದರು. ಬೆಟ್ಟದ ಕೆಳಗೆ ಕಾರನ್ನು ನುಗ್ಗಿಸಲು ದೊಡ್ಡ ಕಲ್ಲು ಅಡ್ಡಿಯಾಗಿದೆ. ಅಲ್ಲದೇ, ಕಾರಿಗೆ ಬೆಂಕಿ ಸುರಿದ ಹಿನ್ನಲೆಯಲ್ಲಿ ಅದರ ಬಳಿ ಹೋಗಲು ಅವರಿಗೆ ಆಗಿಲ್ಲ.
ಕಾರಿನೊಳಗೆ ವ್ಯಕ್ತಿಯೊಬ್ಬ ಇದ್ದ ಎಂಬುವುದನ್ನು ಗಮನಿಸಿದ ದಾರಿಹೋಕರು ಪೊಲೀಸರಿಗೆ ಮಾಹಿತಿ ನೀಡಿ ಪ್ರಾಣ ಉಳಿಸಲು ಪ್ರಯತ್ನ ಮಾಡಿದ್ದಾರೆ. ಆದರೆ, ತೀವ್ರ ಸುಟ್ಟ ಗಾಯಗಳಿಂದ ನಾಗರಾಜು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘನಟೆಯ ನಂತರ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ನಾಗರಾಜುಗೆ 35 ವರ್ಷಗಳಾಗಿದ್ದು, ಬೆಂಗಳೂರಿನ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.








