ಹಾಲಿವುಡ್ ನ ಖ್ಯಾತ ನಟಿ ಕ್ಯಾಮೆರಾನ್ ಡಿಯಾಜ್ 51ನೇ ವರ್ಷಕ್ಕೆ ತಾಯಿಯಾಗಿ ಸುದ್ದಿಯಾಗಿದ್ದಾರೆ.
ಈ ಮೂಲಕ ಅವರು ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಕ್ಯಾಮೆರಾಜನ್ ಡಿಯಾಜ್ ಗಂಡು ಮಗುವಿಗೆ ಜನ್ಮ ನೀಡಿದ್ದು, ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
ಗಂಡು ಮಗುವಿಗೆ ಜನ್ಮ ನೀಡಿರುವ ಕುರಿತು ಪತಿ ಬೆಂಜಿ ಮ್ಯಾಡೆನ್ ಇನ್ ಸ್ಟಾಗ್ರಾಂ ಮೂಲಕ ಹಂಚಿಕೊಂಡಿದ್ದಾರೆ. ನಮ್ಮ ಕುಟುಂಬಕ್ಕೆ ಮಗನ ಆಗಮನವಾಗಿದೆ. ಅವನಿಗೆ ಕಾರ್ಡಿನಲ್ ಮ್ಯಾಡೆನ್ ಹೆಸರಿಡಲು ತೀರ್ಮಾನಿಸಿದ್ದೇವೆ. ಅವನು ತುಂಬ ಮುದ್ದಾಗಿದ್ದಾನೆ. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ನಾವು ಆತನ ಫೋಟೋ ಪೋಸ್ಟ್ ಮಾಡಿಲ್ಲ. ಆದರೂ ಆತ ಕ್ಯೂಟ್ ಆಗಿದ್ದಾನೆ ಎಂದು ಹೇಳುತ್ತೇನೆ. ನಿಮ್ಮ ಆಶೀರ್ವಾದ, ಹಾರೈಕೆ ಇರಲಿ ಎಂದು ಬರೆದುಕೊಂಡಿದ್ದಾರೆ.
ಕ್ಯಾಮೆರಾನ್ ಡಿಯಾಜ್ ಹಾಗೂ ಬೆಂಜಿ ಮ್ಯಾಡೆನ್ 2015ರಲ್ಲಿ ವಿವಾಹವಾಗಿದ್ದರು. 2019ರಲ್ಲಿ ನಟಿ, ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈಗ ಎರಡನೇ ಮಗುವಿಗೆ ಕ್ಯಾಮೆರಾನ್ ಡಿಯಾಜ್ ತಾಯಿಯಾಗಿದ್ದಾರೆ.