ತೆಲುಗು ಸ್ಟಾರ್ ಜ್ಯೂ.ಎನ್ ಟಿಆರ್ ನಟಿಸಿರುವ ವಾರ್ 2 ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸಿದ್ದಾರೆ.
ಆರ್ ಆರ್ ಆರ್ ಸಿನಿಮಾದಲ್ಲಿ ‘ನಾಟು ನಾಟು’ ಸಾಂಗ್ ಇದ್ದಂತೆಯೇ ವಾರ್ 2 ಚಿತ್ರದಲ್ಲಿ ಕೂಡ ಹಾಡು ಇದ್ದು, ಹೃತಿಕ್ ಹಾಗೂ ಜ್ಯೂ. ಎನ್ ಟಿಆರ್ ಹೆಜ್ಜೆ ಹಾಕಿದ್ದಾರೆ. ಬ್ರಹ್ಮಾಸ್ತ್ರ ನಿರ್ದೇಶಕ ಅಯಾನ್ ಮುಖರ್ಜಿ ನಿರ್ದೇಶನದಲ್ಲಿ ವಾರ್ 2 ಸಿನಿಮಾ ಸಿದ್ಧವಾಗುತ್ತಿದೆ. ಬಾಲಿವುಡ್ ನಟ ಹೃತಿಕ್ ರೋಷನ್ ಜೊತೆ ಜ್ಯೂ. ಎನ್ ಟಿಆರ್ ಪ್ರಮುಖ ಪಾತ್ರದಲ್ಲಿ ಕಾಣಿಸುತ್ತಿದ್ದಾರೆ. ಯಶ್ ರಾಜ್ ಫಿಲ್ಮ್ಸ್ ಹಣ ಹಾಕಿದೆ.
ಹೃತಿಕ್ ರೋಷನ್ ಹಾಗೂ ಜ್ಯೂ. ಎನ್ ಟಿಆರ್ ಅದ್ಭುತ ಡ್ಯಾನ್ಸರ್. ಅವರಿಬ್ಬರ ಪ್ರತಿಭೆ ಸದ್ಭಳಕೆ ಮಾಡಿಕೊಳ್ಳಲು ನಿರ್ದೇಶಕ ಅಯಾನ್ ಮುಖರ್ಜಿ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈಗಾಗಲೇ ಚಿತ್ರದ ಶೂಟಿಂಗ್ ಆರಂಭವಾಗಿದ್ದು, ತಮ್ಮ ಭಾಗದ ಚಿತ್ರೀಕರಣ ಪೂರೈಸುವುದಕ್ಕಾಗಿ ಜ್ಯೂ. ಎನ್ ಟಿಆರ್ ಎಂಟ್ರಿ ಮುಂಬೈಗೆ ತೆರಳಿದ್ದಾರೆ. ಅವರು 10 ದಿನಗಳ ಕಾಲ ಶೂಟಿಂಗ್ ನಲ್ಲಿ ಭಾಗವಹಿಸಲಿದ್ದಾರೆ. ವಾರ್ 2ನಲ್ಲಿ ತಾರಕ್ ಗೆ ಮತ್ತೆ ಆಲಿಯಾ ಭಟ್ ಜೋಡಿಯಾಗುತ್ತಿರುವುದು ವಿಶೇಷವಾಗಿದೆ.