ಪತ್ನಿಯ ನಡೆತೆಯನ್ನು ಅನುಮಾನಿಸಿ ಆಕೆಯ ಕೈ ಕಾಲು ಕಟ್ ಮಾಡಿದ ಪತಿ..!
ಮಧ್ಯಪ್ರದೇಶ : ಪಾಪಿ ಪತಿಯೊಬ್ಬ ತನ್ನ ಪತ್ನಿಗೆ ಅಕ್ರಮ ಸಂಬಂಧವಿದೆ ಎಂದು ಅನುಮಾನಿಸಿ ಆಕೆಯ ಕೈ ಮತ್ತು ಕಾಲು ಕಟ್ ಮಾಡಿ ವಿಕೃತಿ ಮೆರೆದಿರುವ ಹೇಯ ಘಟನೆ ಮಧ್ಯಪ್ರದೇಶದಲ್ಲಿ ಬೆಳಕಿಗೆ ಬಂದಿದೆ.
ಸ್ಯಾಂಡಲ್ ವುಡ್ ಡ್ರಗ್ಸ್ ಕೇಸ್ : ಡ್ರಗ್ ಡೀಲಿಂಗ್ ಗಾಗಿ ‘ಒನ್ ಲವ್’..! ಏನಿದು?
ಪತ್ನಿ ಫ್ಯಾಕ್ಟರಿಯೊಂದರಲ್ಲಿ ಮೇಲ್ವಿಚಾರಕಿಯಾಗಿ ಕೆಲಸ ಮಾಡುತ್ತಿದ್ದಳು. ಹೀಗಾಗಿ ಆಕೆ ಕೇವಲ ರಜಾ ದಿನಗಳಲ್ಲಿ ಮಾತ್ರ ಮನೆಗೆ ಮರಳುತ್ತಿದ್ದಳು. ಪತಿ ತನ್ನ ಮಗನೊಂದಿಗೆ ಮನೆಯಲ್ಲಿರುತ್ತಿದ್ದ. ಆದ್ರೆ ಪತ್ನಿಯ ನೆಡವಳಿಕೆ ಮೇಲೆ ಅನುಮಾನ ಬಂದಿತ್ತು. ಈ ಅನುಮಾನ ದಿನೇ ದಿನೇ ಹೆಚ್ಚಾಗಗುತ್ತಲೇ ಹೋಗಿತ್ತು. ಇದೇ ಕಾರಣಕ್ಕೆ ಹಲವು ಬಾರಿ ಪತ್ನಿ ಜೊತೆಗೆ ಜಗಳವನ್ನೂ ಕೂಡ ಮಾಡಿಕೊಂಡಿದ್ದಾನೆ.
ಬಿಡುಗಡೆ ಭಾಗ್ಯ ಸಿಕ್ರೂ ರಾಗಿಣಿ, ಸಂಜಾನಗೆ ವನವಾಸ ತಪ್ಪಿದ್ದಲ್ಲ..!
ಇತ್ತೀಚೆಗೆ ಪತ್ನಿ ರಜೆ ತೆಗೆದುಕೊಂಡಿದ್ದು, ಮನೆಗೆ ವಾಪಸ್ಸಾಗಿದ್ದಾಗ ಆಕೆಯ ಪತಿ ಕುಡಿದ ಮತ್ತಿನಲ್ಲಿ ಆಕೆಯ ಕೈ ಮತ್ತು ಕಾಲುಗಳನ್ನು ಕತ್ತರಿಸಿದ್ದ. ಇನ್ನೂ ಸ್ಥಳೀಯರು ತೀವ್ರವಾಗಿ ಗಾಯಗೊಂಡಿದ್ದ ಮಹಿಳೆಯನ್ನ ಆಸ್ಪತ್ರೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಮಹಿಳೆಯು ತನ್ನ ಪತಿ ವಿರುದ್ಧ ಕೊಲೆ ಯತ್ನ ಆರೋಪ ಮಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.