ಬ್ಲಾಕ್ ಮೇಲ್ ವ್ಯಕ್ತಿ ನಾನಲ್ಲ, 17 ಶಾಸಕರ ಬಗ್ಗೆ ಮಾತಾಡಿಲ್ಲ : ರೇಣುಕಾಚಾರ್ಯ
ಬೆಂಗಳೂರು : ಸಚಿವಸ್ಥಾನಕ್ಕಾಗಿ ಬ್ಲಾಕ್ ಮೇಲ್ ಮಾಡುವ ವ್ಯಕ್ತಿನಾನಲ್ಲ. ನಾನು 17 ಶಾಸಕರ ಬಗ್ಗೆ ಲಘುವಾಗಿ ಮಾತನಾಡಿಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.
ನಿನ್ನೆ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ರೇಣುಕಾಚಾರ್ಯ “ಕಾಂಗ್ರೆಸ್ – ಜೆಡಿಎಸ್ ಪಕ್ಷ ತೊರೆದು ಬಂದ 17 ಶಾಸಕರಿಂದ ಬಿಜೆಪಿ ಸರ್ಕಾರ ರಚನೆಯಾಗಿದೆ ಎಂಬುದು ಶುದ್ಧ ಸುಳ್ಳು” ಎಂದು ಹೇಳಿಕೆ ನೀಡಿದ್ದರು.
ಇದು ವಲಸೆ ಬಿಜೆಪಿ ನಾಯಕರಿಗೆ ಮುಜುಗರ ಉಂಟು ಮಾಡಿತ್ತು. ಹಾಗೇ ರೇಣುಕಾಚಾರ್ಯ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ್ದರು. ಸಿದ್ದರಾಮಯ್ಯನವರೇ ಮೊದ್ಲು ನಿಮ್ಮ ತಟ್ಟೆ ನೋಡಿಕೊಳ್ಳಿ : ರೇಣುಕಾಚಾರ್ಯ
ಈ ಬಗ್ಗೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, 17 ಶಾಸಕರು ನಮ್ಮ ಪಕ್ಷಕ್ಕೆ ಬಂದಿದ್ದರಿಂದಲೇ ರಾಜ್ಯದಲ್ಲಿ ಬಿಜೆಪಿ ಅಕಾರಕ್ಕೆ ಬರಲು ಕಾರಣವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.
ಇದಕ್ಕೆ ಅವರ ತ್ಯಾಗವೂ ಇದೆ ಜೊತೆಗೆ ನಮ್ಮ ಕೊಡುಗೆಯೂ ಇದೆ. 17 ಶಾಸಕರ ಬಗ್ಗೆ ನಾನು ಎಲ್ಲಿಯೂ ಲಘುವಾಗಿ ಮಾತನಾಡಿಲ್ಲ. ಅವರ ಬಗ್ಗೆ ಅಪಾರವಾದ ಗೌರವವಿದೆ. ರೋಷನ್ ಬೇಗ್ಗೆ ಅನಾರೋಗ್ಯ: ಜೈಲಿನಿಂದ ಜಯದೇವ ಆಸ್ಪತ್ರೆಗೆ ಶಿಫ್ಟ್
ಈ ಬಗ್ಗೆ ಯಾರಿಗೂ ಗೊಂದಲ ಬೇಡ ಎಂದು ಸ್ಪಷ್ಟಪಡಿಸಿದರು. ಅಲ್ಲದೆ ಒಬ್ಬ ವ್ಯಕ್ತಿಯಿಂದಲೇ ಪಕ್ಷ ಅಧಿಕಾರಕ್ಕೆ ಬಂದಿಲ್ಲ ಎಂಬ ಹೇಳಿಕೆಗೆ ನಾನು ಈಗಲೂ ಬದ್ದವಾಗಿದ್ದೇನೆ ಎಂದು ಹೇಳಿದರು.
ಇನ್ನು ಬಿಜೆಪಿಯಲ್ಲಿ ಗುಂಪುಗಾರಿಕೆ ನಡೆಯುತ್ತಿದ್ಯಾ ಎಂಬ ಪ್ರಶ್ನೆಗೆ ಉತ್ತರಿಸಿ, ನಾನು ಬ್ಲಾಕ್ ಮೇಲ್ ಮಾಡುವ ವ್ಯಕ್ತಿಯಲ್ಲ. ನನ್ನದು ನೇರ, ಸೀದಾಸಾದ ವ್ಯಕ್ತಿತ್ವ.
ತಪ್ಪು ಮಾಡಿದ್ದರೆ ಆತ್ಮಾವಲೋಕನ ಮಾಡಿಕೊಳ್ಳುತ್ತೇನೆ. ಸಚಿವ ಸ್ಥಾನಕ್ಕೆ ಬ್ಲಾಕ್ ಮೇಲ್ ಮಾಡುವಂತಹ ವ್ಯಕ್ತಿ ನಾನಲ್ಲ. ಗುಂಪುಗಾರಿಕೆಯನ್ನೂ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










