Jammu&Kashmir: ಐಇಡಿ ಪತ್ತೆ | ನಿಷ್ಕಿಯಗೊಳಿಸಿದ ಭದ್ರತಾ ಪಡೆ
1 min read
ಐಇಡಿ ಪತ್ತೆ | ನಿಷ್ಕಿಯಗೊಳಿಸಿದ ಭದ್ರತಾ ಪಡೆ
ಜಮ್ಮು- ಕಾಶ್ಮೀರ : ಜಮ್ಮು&ಕಾಶ್ಮೀರಲ್ಲಿ ರಾಜೌರಿ ಜಿಲ್ಲೆಯಲ್ಲಿ ಸುಧಾರಿತ ಸ್ಪೋಟಕ ಐಇಡಿ ಪತ್ತೆಯಾಗಿದ್ದು, ಭದ್ರತಾ ಪಡೆ ಸ್ಪೋಟಕವನ್ನು ನಿಷ್ಕ್ರಿಯಗೊಳಿಸಿದೆ.
ರಾಜೌರಿ-ಗುರ್ದನ್ ರಸ್ತೆಯ ಗುರ್ದನ್ ಚಾವಾ ಗ್ರಾಮದಲ್ಲಿ ಬಾಂಬ್ ಪತ್ತೆಯಾಗಿತ್ತು. ಸಧ್ಯ ಬಾಂಬ್ ನ್ನು ಭದ್ರತಾಪಡೆ ನಿಷ್ಕ್ರಿಯಗೊಳಿಸಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ಗ್ರಾಮದಲ್ಲಿ ಅನುಮಾನಾಸ್ಪದವಾಗಿ ವ್ಯಕ್ತಿಯೊಬ್ಬನ ಚಲನವಲನ ಕಂಡು ಬಂದಿತ್ತು. ವ್ಯಕ್ತಿಯನ್ನು ಕಂಡ ಸ್ಥಳಿಯರು ಮಾಹಿತಿ ನೀಡಿದ್ದಾರೆ. ಸ್ಪೆಷಲ್ ಆಪರೇಷನ್ ಗ್ರೂಪ್ ಆಫ್ ಪೊಲೀಸ್ ಮತ್ತು ಸೇನಾ ಪಡೆಗಳು ಆ ಸ್ಥಳದಲ್ಲಿ ಜಂಟಿ ಶೋಧ ಕಾರ್ಯಾಚರಣೆಯನ್ನು ನಡೆಸಿವೆ.
ಕಾರ್ಯಾಚರಣೆ ವೇಳೆ ರಸ್ತೆಯ ಪಕ್ಕದಲ್ಲಿ ಅನುಮಾನಾಸ್ಪದ ವಸ್ತುವೊಂದು ಕಂಡು ಬಂದಿದೆ. ಪರೀಕ್ಷೆ ನಡೆಸಿದಾಗ ಅದು ಐಇಡಿ ಎಂದು ತಿಳಿದುಬಂದಿದೆ. ನಂತರ, ಬಾಂಬ್ ಸ್ಕ್ವಾಡ್ ಪೊಲೀಸರು ಐಇಡಿಯನ್ನು ಸುರಕ್ಷಿತ ಸ್ಥಳದಲ್ಲಿ ತೆಗದುಕೊಂಡು ಹೋಗಿ ಅದನ್ನು ನಿಷ್ಕ್ರಿಯಗೊಳಿಸಿದ್ದಾರೆ.