Indian-2 | ಹದಿನಾಲ್ಕು ಭಾಷೆಗಳು.. ಹತ್ತು ನಿಮಿಷ ಡೈಲಾಗ್.. ಕಮಲ್ ಸೂಪರ್
ಹದಿನಾಲ್ಕು ಭಾಷೆಗಳು.. ಹತ್ತು ನಿಮಿಷ ಡೈಲಾಗ್ ! ಸಂಭಾಷಣೆಯನ್ನು ಸಾರಸಗಟಾಗಿ ಹೇಳಬಲ್ಲ ನಟರಲ್ಲಿ ಕಮಲ್ ಹಾಸನ್ ಮೊದಲ ಸಾಲಿನಲ್ಲಿ ಇರುತ್ತಾರೆ. ಪ್ರಾತಕ್ಕೆ ತಕ್ಕಂತೆ ನಟಿಸೋದು, ಸಂಭಾಷಣೆಯಲ್ಲಿ ಕಮಲ್ ಹಾಸನ್ ಸೂಪರ್. ಇತ್ತಿಚೆಗೆ ಇಂಡಿಯನ್ 2 ಗಾಗಿ ಕಮಲ್ ಹತ್ತು ನಿಮಿಷಗಳ ಡೈಲಾಗ್ ಹೇಳಿದ್ದಾರಂತೆ.
ಸಿಂಗಲ್ ಟೇಕ್ ನಲ್ಲಿ ಕಮಲ್ ಈ ಡೈಲಾಗ್ ಅನ್ನು ಹೇಳಿದ್ದಾರಂತೆ. ಅದು ಕೂಡ ಹದಿನಾಲ್ಕು ಭಾಷೆಗಳಲ್ಲಿ ಕಮಲ್ ಡೈಲಾಗ್ ಹೇಳಿದ್ದು, ಚಿತ್ರ ಯೂನಿಟ್ ಅಚ್ಚರಿ ವ್ಯಕ್ತಪಡಿಸಿದೆ ಅನ್ನೋದು ಕಾಲಿವುಡ್ ಟಾಕ್.

ಈ ಹೈ ವೋಲ್ಟೇಜ್ ಸಿಕ್ವೆನ್ಸ್ ಸಿನಿಮಾಗೆ ಹೈಲೆಟ್ ಆಗಿ ಇರಲಿದೆ ಅಂತೆ. ಈ ಹಿಂದೆ ಶಂಕರ್, ಕಮಲ್ ಕಾಂಬೋದ ಇಂಡಿಯನ್ 1996 ಸೂಪರ್ ಹಿಟ್ ಆಗಿತ್ತು. ಇದರ ಸೀಕ್ವೆಲ್ ಇಂಡಿಯನ್ 2 ಆಗಿದೆ. ಕಾಜಲ್ ಆಗರ್ ವಾಲ್, ರಕುಲ್ ಪ್ರಿತ್ ಸಿಂಗ್ ಸಾಕಷ್ಟು ಮಂದಿ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಲೈಕಾ ಪ್ರೋಡಕ್ಷನ್ ಈ ಸಿನಿಮಾವನ್ನು ನಿರ್ಮಿಸುತ್ತಿದೆ. indian-2-kamal-haasan-present-his-stunning-performance