ರಣೋತ್ಸಾಹದಲ್ಲಿ ರಷ್ಯಾ – ಕೈವ್ ನಗರ ತೊರೆಯುವಂತೆ ತನ್ನ ನಾಗರೀಕರಿಗೆ ಭಾರತದ ಸಂದೇಶ..
ರಷ್ಯಾ ಸೇನಾಪಡೆಗಳು ಉಕ್ರೇನ್ ರಾಜಧಾನಿ ಕೀವ್ ತಲುಪಲು ಕೆಲವೇ ಕಿಲೋ ಮೀಟರ್ ದೂರದಲ್ಲಿವೆ. ಕೀವ್ ನಗರದ ಮೇಲೆ ಭಾರಿ ಪ್ರಮಾಣದ ದಾಳಿ ಮಾಡುವ ಸಾಧ್ಯತೆ ಇದೆ. 60 ಕಿಲೋಮೀಟರ್ ದೂರದುದ್ದಕ್ಕೂ ರಷ್ಯಾ ಯುದ್ಧ ವಾಹನಗಳು ಯುದ್ಧ ಸನ್ನದ್ಧವಾಗಿ ನಿಂತಿರುವ ಸ್ಯಾಟಲೈಟ್ ಫೋಟೊಗಳು ಬಿಡುಗಡೆಯಾಗಿವೆ.
ಈ ಹಿನ್ನೆಲೆಯಲ್ಲಿ ಕೀವ್ ನಗರದಿಂದ ತಕ್ಷಣವೇ ನಿರ್ಗಮಿಸುವಂತೆ ಭಾರತೀಯ ರಾಯಭಾರ ಕಚೇರಿ ತನ್ನ ನಾಗರಿಕರಿಗೆ ತಿಳಿಸಿದೆ. ರೈಲು ಅಥವಾ ಬೇರೆ ವಾಹನಗಳಲ್ಲಾದರೂ ಸರಿ ಭಾರತೀಯ ನಾಗರಿಕರು ತಕ್ಷಣವೇ ನಿರ್ಗಮಿಸಬೇಕು ಎಂದು ಭಾರತೀಯ ರಾಯಭಾರ ಕಚೇರಿ ಟ್ವೀಟ್ ಮಾಡಿದೆ.
ರಷ್ಯಾದ ನೂರಾರು ಯುದ್ಧ ಟ್ಯಾಂಕ್ಗಳು, ಶಸ್ತ್ರಾಸ್ತ್ರ ತುಂಬಿದ ವಾಹನಗಳು ಕೀವ್ನ ವಾಯುವ್ಯ ದಿಕ್ಕಿನಲ್ಲಿ ಜಮಾವಣೆಗೊಂಡಿವೆ. ಉಕ್ರೇನ್ ರಾಜಧಾನಿಯನ್ನು ವಶಪಡಿಸಲು ರಷ್ಯಾ ಅಂತಿಮ ಸಿದ್ಧತೆ ಮಾಡಿಕೊಳ್ಳುತ್ತಿರುವ ಚಿತ್ರವನ್ನ ಅಮೆರಿಕ ಮೂಲದ ಬಾಹ್ಯಾಕಾಶ ಸಂಸ್ಥೆಯೊಂದು ಬಿಡುಗಡೆ ಮಾಡಿದೆ.
ಉಕ್ರೇನ್ನಲ್ಲಿ ಇನ್ನೂ ಸುಮಾರು 16,000 ಭಾರತೀಯ ವಿದ್ಯಾರ್ಥಿಗಳು ಸಿಲುಕಿದ್ದಾರೆ. ಗುರುವಾರ ದಾಳಿ ಆರಂಭವಾದ ನಂತರ ಅನೇಕ ವಿದ್ಯಾರ್ಥಿಗಳು ಬಂಕರ್ಗಳಲ್ಲಿ ದಿನ ಕಳೆಯುವಂತಾಗಿದೆ.