ಐಪಿಎಲ್ 2021 | ಗ್ರೆಟೆಸ್ಟ್ ವರ್ಸಸ್ ಲೆಟೆಸ್ಟ್ : DC vs CSK Preview

1 min read
IPL 2021

ಐಪಿಎಲ್ 2021 | ಗ್ರೆಟೆಸ್ಟ್ ವರ್ಸಸ್ ಲೆಟೆಸ್ಟ್ ;

ಐಪಿಎಲ್ ನ ಇಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿವೆ. ಕಳೆದ ವರ್ಷದ ಹೀನಾಯ ಪ್ರದರ್ಶನವನ್ನ ಮರೆತು ಒಳ್ಳೆ ಸ್ಟಾರ್ಟ್ ಗೆ ಚೆನ್ನೈ ಎದುರು ನೋಡುತ್ತಿದ್ದರೇ, ಕಳೆದ ವರ್ಷದ ಸಾಲಿಡ್ ಪ್ರದರ್ಶನವನ್ನೇ ಈ ಬಾರಿ ಕೂಡ ಮುಂದುವರಿಸಲು ಡೆಲ್ಲಿ ತಂಡ ಕಾಯುತ್ತಿದೆ.

ಹೆಡ್ ಟು ಹೆಡ್ ರೆಕಾರ್ಡ್

ಐಪಿಎಲ್ ನಲ್ಲಿ ಈವರೆಗೂ ಈ ಎರಡು ತಂಡಗಳು 23 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ 15ಪಂದ್ಯಗಳನ್ನ ಚೆನ್ನೈತಂಡ ಗೆದ್ದುಕೊಂಡಿದೆ. ಇನ್ನುಳಿದ 8 ಪಂದ್ಯಗಳಲ್ಲಿ ಡೆಲ್ಲಿ ದರ್ಬಾರ್ ನಡೆಸಿದೆ.

ಪಿಚ್ ಹೇಗಿದೆ..?

ಈ ಮ್ಯಾಚ್ ಮುಂಬೈ ವಾಂಖೇಡೆ ಸ್ಟೇಡಿಯಂ ನಡೆಯಲಿದ್ದು, ಫಾಸ್ಟ್ ಅಂಡ್ ಬೌನ್ಸ್ ಎರಡು ಇರುತ್ತೆ. ಒಳ್ಳೆ ಹೈ ಸ್ಕೋರಿಂಗ್ ಮ್ಯಾಚ್ ಆಗಲಿದೆ. ಇಲ್ಲಿ ಟಾಸ್ ಗೆದ್ದ ತಂಡ ಫೀಲ್ಡಿಂಗ್ ತೆಗೆದುಕೊಳ್ಳುವ ಚಾನ್ಸ್ ಇದೆ.

IPL 2021
ಸ್ಟೆಂಥ್ ಅಂಡ್ ವೀಕ್ನೆಸ್

ಸಿಎಸ್ ಕೆ ಟೀಂ ಬಗ್ಗೆ ಮಾತನಾಡೋದಾದ್ರೆ ಚೆನ್ನೈಗೆ ಎಂಎಸ್ ಡಿ ಬಿಗ್ ಪ್ಲಸ್ ಪಾಯಿಂಟ್. ಇದು ಬಿಟ್ಟರೇ ಟೀಂನಲ್ಲಿ ಜಡೇಜ, ಮೊಯಿಲ್ ಅಲಿ, ಬ್ರಾವೋ, ಕ್ರಿಷ್ಣಪ್ಪ ಗೌತಮ್, ಸ್ಯಾಮ್ ಕರನ್ ನಂತಹ ಬೆಸ್ಟ್ ಆಲ್ ರೌಂಡರ್ ಗಳಿದ್ದಾರೆ. ಕಳೆದ ವರ್ಷಕ್ಕೆ ಹೊಲಿಕೆ ಮಾಡಿದ್ರೆ ಟೀಂ ಈ ಬಾರಿ ಸಮತೋಲನವಾಗಿದೆ ಅಂತ ಗೊತ್ತಾಗುತ್ತಿದೆ.

ಇನ್ನ ವಿಕ್ನೇಸ್ ಬಗ್ಗೆ ಮಾತನಾಡೋದಾದ್ರೆ, ಧೋನಿ, ರೈನಾ, ಜಡೇಜಾ, ಉತ್ತಪ್ಪ ಗೆ ಮ್ಯಾಚ್ ಪ್ರಾಕ್ಟಿಸ್ ಇಲ್ಲದೇ ಇರೋದು ಎಲ್ಲೊ ಒಂದು ಸೆಟ್ ಬ್ಯಾಕ್ ಆಗಬಹುದು.

ಡೆಲ್ಲಿಯ ಸ್ಟ್ರೆಂಥ್ ವಿಕ್ನೇಸ್ ನೋಡೊದಾದ್ರೆ, ಈ ಮೊದಲ ಮ್ಯಾಚ್ ಗೆ ರಬಾಡ, ನೋಕಿಯೋ ಅಲಭ್ಯವಾಗಿರುವುದು ಸೆಟ್ ಬ್ಯಾಕ್ ಆಗುತ್ತೆ. ಇನ್ನ ಆಲ್ ರೌಂಡರ್ ಅಕ್ಷರ್ ಪಟೆಲ್ ಗೆ ಕೊರೊನಾ ಬಂದಿದ್ದು, ಅವರಿನ್ನೂ ಕ್ವರಂಟೈನ್ ನಲ್ಲಿರುವುದು ತಂಡಕ್ಕೆ ಹಿನ್ನೆಡೆ ಆಗಲಿದೆ. ಈ ಮೂವರು ತಂಡದ ಕೀ ಬೌಲರ್ ಗಳಾಗಿದ್ದು, ಈ ಪಂದ್ಯಕ್ಕೆ ಅಲಭ್ಯವಾಗಿರುವುದು ಮತ್ತು ಬ್ಯಾಟಿಂಗ್ ನಲ್ಲಿ ಶ್ರೇಯಸ್ ಐಯ್ಯರ್ ಮಿಸ್ ಆಗಿರುವುದು ತಂಡದ ಮೇಲೆ ಪರಿಣಾಮ ಬೀರಲಿದೆ.

ಸ್ಟೆಂಥ್ : ಪೃಥ್ವಿ ಶಾ, ಪಂತ್, ಬೊಂಬಾಟ್ ಫಾರ್ಮ್ ನಲ್ಲಿರುವುದು.

ಸಂಭವ್ಯ ಪಟ್ಟಿ

ಚೆನ್ನೈ : ಡುಪ್ಲಸಿಸ್, ಉತ್ತಪ್ಪ, ರಾಯುಡು, ರೈನಾ ಧೋನಿ, ಮೊಯಿನ್ ಅಲಿ, ಜಡೇಜಾ, ಸ್ಯಾಮ್ ಕರನ್, ಶಾರ್ದೂಲ್ ಠಾಕೂರ್, ದೀಪಕ್ ಚಹಾರ್, ತಾಹಿರ್

ಡೆಲ್ಲಿ : ಧವನ್, ಫೃಥ್ವಿ ಶಾ, ಸ್ಮಿತ್, ಪಂತ್, ಹೆಟ್ಮೇರ್, ಸ್ಟಾಯಿನಿಸ್, ಕ್ರಿಸ್ ವೋಕ್ಸ್, ಅಶ್ವಿನ್, ಉಮೇಶ್ ಯಾದವ್, ಅಮಿತ್ ಮಿರ್ಶಾ, ಇಶಾಂತ್ ಶರ್ಮಾ,

ವಿನ್ನಿಂಗ್ ಚಾನ್ಸನ್

ಆನ್ ಪೇಪರ್ ಟೀಮನ್ನ ನೋಡಿ ಹೇಳೋದಾದ್ರೆ ಎಲ್ಲೋ ಒಂದು ಕಡೆ ಡೆಲ್ಲಿ ಗೆಲ್ಲೋ ಚಾನ್ಸ್ ಇದೆ. ಡೆಲ್ಲಿ 55% ಚೆನ್ನೆ 45%.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd