IPL 2021 | 14 ಅಂಕಗಳಿಸಿದರೂ ಆರ್ಸಿಬಿ ಪ್ಲೇ-ಆಫ್ ಸ್ಥಾನ ಗಟ್ಟಿಯಾಗಿಲ್ಲ

1 min read
RCB DC saaksha tv

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ ರಾಯಲ್ಸ್ ವಿರುದ್ಧದ ಸತತವಾಗಿ ಪಂದ್ಯ ಗೆದ್ದಿದೆ.

11 ಪಂದ್ಯಗಳಿಂದ 14 ಅಂಕ ಪಡೆದುಕೊಂಡು 3ನೇ ಸ್ಥಾನದಲ್ಲಿದೆ. ಇನ್ನೂ 3 ಲೀಗ್ ಪಂದ್ಯಗಳು ಆರ್ಸಿಬಿ ಕೈಯಲ್ಲಿದೆ.

14 ಅಂಕಗಳಿಸಿದರೂ ಆರ್ಸಿಬಿ ಪ್ಲೇ-ಆಫ್ ಸ್ಥಾನ ಗಟ್ಟಿಯಾಗಿಲ್ಲ. ಜೊತೆಗೆ ಮೈನಸ್ ರನ್ರೇಟ್ ಕೂಡ ಆರ್ಸಿಬಿಯಯ ಕನಸನ್ನು ನುಚ್ಚು ನೂರು ಮಾಡಬಹುದು.

ಯಾಕಂದ್ರೆ ಪಾಯಿಂಟ್ ಟೇಬಲ್ನಲ್ಲಿ ಆರ್ಸಿಬಿಗಿಂತ ಕೆಳಗಿರುವ ತಂಡಗಳು ಉತ್ತಮ ರನ್ರೇಟ್ ಹೊಂದಿವೆ. ಜೊತೆಗೆ ಆರ್ಸಿಬಿ ಆಡುವಷ್ಟೇ ಪಂದ್ಯಗಳನ್ನು ಆಡಬೇಕಿದೆ. ಸದ್ಯ ಆರ್ಸಿಬಿ 11 ಪಂದ್ಯಗಳಲ್ಲಿ ಏಳರಲ್ಲಿ ಗೆದ್ದು, ನಾಲ್ಕರಲ್ಲಿ ಸೋತು 14 ಅಂಕದೊಂದಿಗೆ ಮೂರನೇ ಸ್ಥಾನದಲ್ಲಿಯೇ ಉಳಿದುಕೊಂಡಿದೆ. ಬೆಂಗಳೂರು ತಂಡದ ನೆಟ್ ರನ್ ರೇಟ್ ಕೂಡ ಮೈನಸ್ 0.200 ನಲ್ಲಿಯೇ ಇದೆ.

ಆರ್ಸಿಬಿ ಇನ್ನು ಮೂರು ಪಂದ್ಯಗಳನ್ನು ಆಡಬೇಕಿದೆ. ಅಕ್ಟೋಬರ್ 3 ರಂದು ಪಂಜಾಬ್ ಕಿಂಗ್ಸ್ ವಿರುದ್ಧ, ಅಕ್ಟೋಬರ್ 6ಕ್ಕೆ ಹೈದರಾಬಾದ್ ವಿರುದ್ಧ ಮತ್ತು ಅಕ್ಟೋಬರ್ 8 ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂದ್ಯವನ್ನು ಆಡಲಿದೆ. ಈ ಮೂರರಲ್ಲಿ ಆರ್ಸಿಬಿ ಕೇವಲ ಒಂದು ಪಂದ್ಯವನ್ನು ಗೆದ್ದರೆ ತನ್ನ ಪ್ಲೇ ಆಫ್ ಹಾದಿಯನ್ನು ಖಚಿತ ಪಡಿಸಿಕೊಳ್ಳಲಿದೆ.

IPL 2021  saaksha tv

ಎಲ್ಲಾದರೂ ಮೂರು ಪಂದ್ಯ ಸೋತರೆ ಇತರೆ ತಂಡಗಳ ಫಲಿತಾಂಶದ ಮೇಲೆ ಆರ್ಸಿಬಿ ಭವಿಷ್ಯ ನಿರ್ಧಾರವಾಗಲಿದೆ. ಒಂದು ವೇಳೆ ಮೂರೂ ಪಂದ್ಯವನ್ನು ಸೋತರೆ ನೆಟ್ರೇಟ್ ಮತ್ತಷ್ಟು ಕುಸಿಯಲಿದೆ.

ಎಂ ಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪಾಯಿಂಟ್ ಟೇಬಲ್ನಲ್ಲಿ ಮೊದಲ ಎರಡು ಸ್ಥಾನ ಪಡೆದುಕೊಂಡು ಪ್ಲೇ ಆಫ್ ಹಂತವನ್ನು ಬಹುತೇಕ ಖಚಿತ ಪಡಿಸಿಕೊಂಡಿದೆ.

ಆರ್ಸಿಬಿ ಮೂರನೇ ಸ್ಥಾನ ಪಡೆದರೆ ನಾಕೌಟ್ ಹಂತಕ್ಕೆ ತಲುಪಲಿದೆ. 4ನೇ ಸ್ಥಾನಕ್ಕೆ ಯಾವ ತಂಡ ಎಂಬುದು ಈಗ ಕುತೂಹಲ. ಯಾಕಂದ್ರೆ ನಾಲ್ಕನೇ ಸ್ಥಾನಕ್ಕಾಗಿ ನಾಲ್ಕು ತಂಡಗಳ ನಡುವೆ ಬಿಗ್ ಫೈಟ್ ನಡೆಯುತ್ತಿದೆ.

ಮುಂಬೈ ಇಂಡಿಯನ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ಆ ಒಂದು ಸ್ಥಾನಕ್ಕಾಗಿ ಹೋರಾಟ ಶುರು ಮಾಡಿದೆ.

ಕೆಕೆಆರ್ ಮತ್ತು ಮುಂಬೈ ತಲಾ 10 ಅಂಕ ಸಂಪಾದಿಸಿದ್ದರೆ, ಆರ್ಆರ್ ಮತ್ತು ಪಂಜಾಬ್ ತಲಾ 8 ಅಂಕವನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ.

ಈ ಎಲ್ಲಾ ತಂಡಗಳಿಗೂ ತಲಾ ಮೂರು ಪಂದ್ಯಗಳು ಬಾಕಿ ಉಳಿದಿವೆ. ಅಷ್ಟೇ ಅಲ್ಲ ಪಂಜಾಬ್ ಆರ್ಸಿಬಿ ವಿರುದ್ಧ ಪಂದ್ಯ ಆಡಬೇಕಿದೆ. ಡೆಲ್ಲಿ ವಿರುದ್ಧದ ಪಂದ್ಯವೂ ಆರ್ಸಿಬಿ ಮಹತ್ವದ್ದಾಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿ ಅಂತಿಮ ಹಂತಕ್ಕೆ ತಲುಪುತ್ತಿದ್ದು ಸಾಕಷ್ಟು ರೋಚಕತೆ ಸೃಷ್ಟಿಸುತ್ತಿದೆ. ಈ ಹಿಂದೆ 14 ಅಂಕಗಳಿಸಿದ ತಂಡಗಳು ಸುಲಭವಾಗಿ ಪ್ಲೇ-ಆಫ್ ಪ್ರವೇಶ ಪಡೆಯುತ್ತಿದ್ದವು.

ಆದರೆ ಈಗ ತಂಡಗಳ ನಡುವೆ ಪೈಪೋಟಿ ಹೆಚ್ಚಿದೆ 16 ಅಂಕ ಸಂಪಾದಿಸಿದರೂ ರನ್ರೇಟ್ ಲೆಕ್ಕಾಚಾರದಲ್ಲಿ ಇರುತ್ತದೆ ಅನ್ನೋದು ಐಪಿಎಲ್ನ ರೋಚಕತೆಗೆ ಸಾಕ್ಷಿ ಆಗಿದೆ.

ಆರ್ಸಿಬಿ ಅಭಿಮಾನಿಗಳು ಸತತ ಎರಡು ಗೆಲುವಿನ ಬಳಿಕ ಫುಲ್ ಖುಷಿಯಾಗಿದ್ದಾರೆ. ಆದರೆ ಪ್ಲೇ-ಆಫ್ ಲೆಕ್ಕಾಚಾರ ಮಾತ್ರ ಇನ್ನೂ ಭಿನ್ನವಾಗಿಯೇ ಕಾಣುತ್ತದೆ.

ಆರ್ಸಿಬಿ ಸೇರಿದಂತೆ ಯಾವ ತಂಡದ ಪ್ಲೇ-ಆಫ್ ಭವಿಷ್ಯ ಗಟ್ಟಿಯಾಗಿಲ್ಲ. ಹೀಗಾಗಿ ಮುಂದಿನ 3 ಪಂದ್ಯಗಳು ಆರ್ಸಿಬಿಗೆ ನಿರ್ಣಾಯಕವಾಗಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd