IPL 2022 | ಇಶಾನ್ ಕಿಶಾನ್ ಗೆ ರೆಸ್ಟ್ ನೀಡಿ
ಮುಂಬೈ ಇಂಡಿಯನ್ಸ್ ಆರಂಭಿಕ ಆಟಗಾರ ಇಶಾನ್ ಕಿಶನ್ PL-2022 ರಲ್ಲಿ ದಯನೀಯವಾಗಿ ವಿಫಲರಾಗಿದ್ದಾರೆ.
ಋತುವಿನ ಆರಂಭಿಕ ಪಂದ್ಯಗಳಲ್ಲಿ, ಇಶಾನ್ (ಡೆಲ್ಲಿ ವಿರುದ್ಧ 81 – ಔಟಾಗದೆ 54, ರಾಜಸ್ಥಾನ್ ರಾಯಲ್ಸ್ ವಿರುದ್ಧ 54) ರನ್ ಗಳಿಸಿದ್ದರು.
ಆದ್ರೆ ಅದನ್ನು ಮುಂದುವರಿಸಲು ಅವರಿಗೆ ಸಾಧ್ಯವಾಗಲಿಲ್ಲ.
ಈ ಋತುವಿನಲ್ಲಿ ಇದುವರೆಗೆ 8 ಪಂದ್ಯಗಳನ್ನು ಆಡಿರುವ ಕಿಶನ್ 199 ರನ್ ಗಳಿಸಿದ್ದಾರೆ.
ಫಾರ್ಮ್ ಕಳೆದುಕೊಂಡಿರುವ ಕಿಶನ್‌ಗೆ ವಿಶ್ರಾಂತಿ ನೀಡಬೇಕು ಎಂದು ಟೀಂ ಇಂಡಿಯಾದ ಮಾಜಿ ಆಟಗಾರ ಆಕಾಶ್ ಚೋಪ್ರಾ ಹೇಳಿದ್ದಾರೆ.
ಇಶಾನ್ ಕಿಶನ್ ಗೆ ತಕ್ಷಣ ವಿಶ್ರಾಂತಿ ನೀಡಬೇಕು. ಅವನು ಫಾರ್ಮ್ ನಲ್ಲಿಲ್ಲ.ಅವರು ಕ್ರೀಸ್ ನಲ್ಲಿ ಸ್ಟ್ರಗಲ್ ಆಗುತ್ತಿದ್ದಾರೆ.
ಆತ ಅದ್ಭುತವಾದ ಆಟಗಾರ. ಆದ್ರೆ ತನ್ನ ಸಾಮರ್ಥ್ರ್ಯಕ್ಕೆ ತಕ್ಕಂತೆ ಬ್ಯಾಟ್ ಬೀಸುತ್ತಿಲ್ಲ.
ಹೀಗಾಗಿ ಅವರಿಗೆ ತಂಡದಿಂದ ಒಂದೆರಡು ಪಂದ್ಯಗಳವರೆಗೂ ರೆಸ್ಟ್ ನೀಡಬೇಕು ಎಂದಿದ್ದಾರೆ ಆಕಾಶ್.
ipl-2022-aakash-chopra-mumbai-indians-ishan-kishan









