ನಿಮ್ಮ ಸ್ಮಾರ್ಟ್‌ಫೋನ್‌‌ನಲ್ಲಿ ವೈರಸ್ ಇದೆಯೇ ?

ನಿಮ್ಮ ಸ್ಮಾರ್ಟ್‌ಫೋನ್‌‌ನಲ್ಲಿ ವೈರಸ್ ಇದೆಯೇ ?

ಮಂಗಳೂರು, ಸೆಪ್ಟೆಂಬರ್‌17: ಹೆಚ್ಚಿನ ಜನರು ಸ್ಮಾರ್ಟ್‌ಫೋನ್‌ಗಳನ್ನು ಬಳಸುತ್ತಾರೆ. ಸ್ಮಾರ್ಟ್ ಫೋನ್ ಗಳಿಂದ ಬಹಳಷ್ಟು ಉಪಯೋಗವಿದ್ದರೂ ಅನೇಕ ಬಾರಿ ಇದು ಹಾನಿಯನ್ನುಂಟು ಮಾಡುತ್ತದೆ. ಅನೇಕ ಬಾರಿ, ಸ್ಮಾರ್ಟ್‌ಫೋನ್‌ನಲ್ಲಿರುವ ವೈರಸ್‌ನಿಂದಾಗಿ, ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದು ಹ್ಯಾಕ್ ಸಹ ಮಾಡಬಹುದು. ವೈರಸ್‌ನಿಂದಾಗಿ ನಿಮ್ಮ ವೈಯಕ್ತಿಕ ವಿವರಗಳು ಸ್ಮಾರ್ಟ್‌ಫೋನ್‌ನಿಂದ ಸೋರಿಕೆಯಾಗ ಬಹುದು. ಸ್ಮಾರ್ಟ್‌ಫೋನ್‌‌ನಲ್ಲಿ ವೈರಸ್ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಕಂಡುಹಿಡಿಯುವ ಮಾರ್ಗಗಳನ್ನು ಇಲ್ಲಿ ವಿವರಿಸಲಾಗಿದೆ.

ನಿಮ್ಮ ಮೊಬೈಲ್ ಡೇಟಾ ಹೆಚ್ಚು ವೆಚ್ಚವಾಗಲು ಪ್ರಾರಂಭಿಸುತ್ತಿದ್ದರೆ ಅದನ್ನು ನಿರ್ಲಕ್ಷಿಸಬೇಡಿ. ಇದು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿನ ವೈರಸ್‌ನಿಂದಲೂ ಆಗಿರಬಹುದು. ನೀವು ಮೊಬೈಲ್ ಡೇಟಾವನ್ನು ಹೆಚ್ಚು ಬಳಸದೆ ಇದ್ದರೂ ಮೊದಲಿಗಿಂತ ಹೆಚ್ಚು ವೆಚ್ಚವಾಗುತ್ತಿದ್ದರೆ, ನಿಮ್ಮ ಸ್ಮಾರ್ಟ್‌ಫೋನ್ ವೈರಸ್‌ಗಳಿಂದ ಕೂಡಿದೆ ಎಂದರ್ಥ.

ನೀವು ಪೋಸ್ಟ್‌ಪೇಯ್ಡ್ ಸಂಪರ್ಕವನ್ನು ಬಳಸುತ್ತಿದ್ದು, ನಿಮ್ಮ ಬಿಲ್‌ನಲ್ಲಿ ಎಸ್ಎಂಎಸ್ ಗೆ ಹೆಚ್ಚು ಶುಲ್ಕ ವಿಧಿಸುತ್ತಿದರೆ ಕೂಡ ನಿಮ್ಮ ಸ್ಮಾರ್ಟ್‌ಫೋನ್ ವೈರಸ್ ಹೊಂದಿರಬಹುದಾದ ಸಾಧ್ಯತೆ ‌ಇದೆ.
ನಿಮ್ಮ ಸ್ಮಾರ್ಟ್‌ಫೋನ್‌ನಿಂದ ಎಸ್‌ಎಂಎಸ್ ಅನ್ನು ಪ್ರೀಮಿಯಂ ದರದಲ್ಲಿ ಕಳುಹಿಸಲಾಗಿದೆಯೇ ಎಂದು ನೀವು ಸುಲಭವಾಗಿ ಕಂಡುಹಿಡಿಯಬಹುದು. ವಿಶೇಷ ಸಂಖ್ಯೆ ಗೆ ಸಂದೇಶ ಕಳುಹಿಸಲು ಹೆಚ್ಚಿನ ಹಣ ಖರ್ಚಾಗುತ್ತದೆ.

ಸ್ಮಾರ್ಟ್ಫೋನ್ ಬಿಸಿಯಾಗುತ್ತಿದ್ದರೆ, ಇದು ಸಹ ಮೊಬೈಲ್ ವೈರಸ್ ಹೊಂದಿರುವ ಸಾಧ್ಯತೆಯನ್ನು ತೋರಿಸುತ್ತದೆ.

ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ನೀವು ವಾಟ್ಸಾಪ್ ಬಳಸುತ್ತಿದ್ದರೆ ಮತ್ತು ಅದು ನಿಧಾನವಾಗಿ ಚಾಲನೆಯಲ್ಲಿದ್ದರೆ ವಾಟ್ಸಾಪ್ ವೈರಸ್ ಹೊಂದಿರುವ ಸಂಭವವಿದೆ.

ಸ್ಮಾರ್ಟ್‌ಫೋನ್‌ನ ಕಡಿಮೆ ವೇಗದಿಂದಾಗಿ, ಕ್ಯಾಮೆರಾ ಮತ್ತು ಬ್ರೌಸಿಂಗ್ ವೇಗವೂ ನಿಧಾನಗೊಳ್ಳುತ್ತದೆ. ಇದರೊಂದಿಗೆ, ಟೈಪಿಂಗ್‌ನಲ್ಲಿನ ವೇಗವು ನಿಧಾನವಾಗಲು ಪ್ರಾರಂಭಿಸುತ್ತದೆ.

ಆದ್ದರಿಂದ ಅದನ್ನು ನಿರ್ಲಕ್ಷಿಸಬೇಡಿ. ಅಂತಹ ಸಂದರ್ಭದಲ್ಲಿ ವಾಟ್ಸಾಪ್ ಅನ್ನು ಅನ್’ಇನ್ಸ್ಟಾಲ್ ಮಾಡಿ . ಇದು ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಉಳಿಸಬಹುದು.

ಸ್ಮಾರ್ಟ್‌ಫೋನ್‌ ಬ್ಯಾಟರಿ ತ್ವರಿತವಾಗಿ ಖರ್ಚು ಆಗುತ್ತಿದ್ದರೆ, ಅದರ ಬ್ಯಾಟರಿ ಹಾನಿಗೊಳಗಾಗಿದೆ ಅಥವಾ ನೀವು ಅದನ್ನು ಅತಿಯಾಗಿ ಬಳಸುತ್ತಿರುವಿರಿ ಎಂದು ನೀವು ಭಾವಿಸುತ್ತೀರಿ, ಆದರೆ ಬ್ಯಾಟರಿ ತುಂಬಾ ಬೇಗನೆ ಖಾಲಿಯಾಗುತ್ತಿದ್ದರೆ ಕೂಡ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ವೈರಸ್ ಇರಬಹುದಾದ ಸಂಭವವಿದೆ.

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಮೇಲೆ ತಿಳಿಸಲಾದ ಸಮಸ್ಯೆಗಳಿದ್ದರೆ, ಅವುಗಳು ವೈರಸ್‌ನ ಚಿಹ್ನೆಗಳಾಗಿರುವ ಸಂಭವವಿದೆ. ಆದ್ದರಿಂದ ಅದನ್ನು ನಿರ್ಲಕ್ಷಿಸಬೇಡಿ. ಅಂತಹ ಸಂದರ್ಭದಲ್ಲಿ ಹೆಚ್ಚು ತಡ ಮಾಡದೇ ಅದನ್ನು ಸೇವಾ ಕೇಂದ್ರದಲ್ಲಿ ತೋರಿಸಿ ಅಥವಾ ಉತ್ತಮ ಆಂಟಿ ವೈರಸ್ ಅನ್ನು ಹಾಕಿಸಿಕೊಳ್ಳಿ. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ದೀರ್ಘಕಾಲದವರೆಗೆ ವೈರಸ್ ಇರುವುದು ಅಪಾಯಕಾರಿ

Leave a Reply

Your email address will not be published. Required fields are marked *

Recent Posts

YOU MUST READ

Pin It on Pinterest

Share This