ದಕ್ಷಿಣ ಭಾರತದ ಖ್ಯಾತ ನಟ ಜ್ಯೂ. ಎನ್ ಟಿಆರ್ ಗೋವಾದಲ್ಲಿ ಕಾಣಿಸಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಎನ್.ಟಿ.ಆರ್ ನಟನೆಯ ದೇವರ ಸಿನಿಮಾ ಗೋವಾದಲ್ಲಿ ನಡೆಯುತ್ತಿದ್ದು, ವಿಶೇಷ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಲ್ಲದೇ, ಅಭಿಮಾನಿಗಳು ಈ ಫೋಟೋವನ್ನು ಕಾಂತಾರದ ಶಿವನಿಗೆ ಹೋಲಿಕೆ ಮಾಡಿದ್ದಾರೆ.
ದೇವರ ಸಿನಿಮಾ 2024ರ ಏಪ್ರಿಲ್ 6ಕ್ಕೆ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗುತ್ತಿದೆ. ಅಕ್ಟೋಬರ್ 10 ರಂದು ದೇವರ ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಘೋಷಿಸಿದೆ. ಹೀಗಾಗಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ, ಈಗ ಮತ್ತೊಂದು ಅಪ್ಡೇಟ್ ಸಿಕ್ಕಿದ್ದು, ಇದು ಕನ್ನಡಕ್ಕೂ ಡಬ್ ಆಗಲಿದೆ. ತಮ್ಮ ಪಾತ್ರಕ್ಕೆ ಕನ್ನಡದಲ್ಲಿ ಜ್ಯೂನಿಯರ್ ಡಬ್ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಈ ಚಿತ್ರಕ್ಕೆ ಎನ್ ಟಿಆರ್ ಕೊರಟಾಲ ಶಿವ ನಿರ್ದೇಶನ ಮಾಡುತ್ತಿದ್ದಾರೆ.
ಈಗಾಗಲೇ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು, ಎನ್.ಟಿ.ಆರ್ ಕಪ್ಪು ಬಣ್ಣದ ಲುಂಗಿ ಮತ್ತು ಶರ್ಟ್ ತೊಟ್ಟು, ಸಮುದ್ರದ ಬಂಡೆಗಳ ಮೇಲೆ ಕೊಡಲಿ ಹಿಡಿದು ನಿಂತು ತೀಕ್ಷ್ಣವಾಗಿ ನೋಡುತ್ತಿದ್ದರು. ಕಳೆಗೆ ಹೆಣಗಳ ರಾಶಿ ಇದೆ. ಪಕ್ಕದಲ್ಲಿ ಮುರಿದು ಬಿದ್ದ ದೋಣಿಯೊಂದನ್ನೂ ಕಾಣಬಹುದು. ಈ ಪೋಸ್ಟರ್ ಈಗ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ. ಅವರ ಮಾಸ್ ಲುಕ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.
ದೇವರ ಚಿತ್ರದ ಮೂಲಕ ಶ್ರೀದೇವಿ ಮಗಳು ಜಾಹ್ನವಿ ಕಪೂರ್ ತೆಲಗು ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ನಟ ಸೈಫ್ ಅಲಿ ಖಾನ್ ಕೂಡ ಖಳನಟನಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಕಾಶ್ ರೈ ಸೇರಿದಂತೆ ಹಲವರು ನಟಿಸಿದ್ದಾರೆ.