ಕನ್ನಡದ ಖ್ಯಾತ ನಿರ್ದೇಶಕ ಜೋಗಿ ಪ್ರೇಮ್ (Jogi Prem) ಬಾಲಿವುಡ್ ನಾಯಕ ಸಲ್ಮಾನ್ ಖಾನ್ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ ಎಂಬ ಸಂಗತಿ ಹೊರ ಬಿದ್ದಿದೆ.
ಪ್ರೇಮ್ ಸದ್ಯ ಕೆಡಿ ಸಿನಿಮಾದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಈ ನಡುವೆಯೇ ಅವರು ಸಲ್ಮಾನ್ ಖಾನ್ (Salman Khan) ಗಾಗಿ ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಈ ಮೂಲಕ ಕನ್ನಡದ ಮತ್ತೋರ್ವ ನಿರ್ದೇಶಕ ಬಾಲಿವುಡ್ (Bollywood) ಬಾಗಿಲು ತಟ್ಟಿದಂತಾಗುತ್ತದೆ
ಹಿಂದಿನ ಅಪ್ಡೇಟ್ ಗಳ ಪ್ರಕಾರ ಸಲ್ಮಾನ್ ಖಾನ್ ಅವರಿಗಾಗಿ ಸುದೀಪ್ ಸಿನಿಮಾ ನಿರ್ದೇಶನ ಮಾಡಬೇಕಿತ್ತು. ಇದಕ್ಕೆ ಸಲ್ಮಾನ್ ಕೂಡ ಒಪ್ಪಿದ್ದರು ಎನ್ನಲಾಗಿತ್ತು. ಆದರೆ, ಸುದೀಪ್ ಕೆಲಸಗಳಲ್ಲಿ ಬ್ಯೂಸಿಯಾಗಿದ್ದಕ್ಕೆ ಸದ್ಯಕ್ಕೆ ಅದು ಅನುಮಾನ ಎನ್ನಲಾಗುತ್ತಿದೆ.
ಪ್ರೇಮ್ ನಿರ್ದೇಶನ ಮಾಡುತ್ತಾರೆ ಎನ್ನಲಾದ ಚಿತ್ರವನ್ನು ಸಜೀಸ್ ನಡಿಯಾಲ್ ನಿರ್ಮಾಣ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಕೆಡಿ ನಂತರ ಪ್ರೇಮ್ ಅವರು ದರ್ಶನ್ ಅವರಿಗಾಗಿ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ, ಪ್ರೇಮ್ ಮೊದಲು ಯಾರ ಚಿತ್ರ ಕೈಗೆತ್ತಿಕೊಳ್ಳಲಿದ್ದಾರೆ ಎಂಬುವುದನ್ನು ಕಾಯ್ದು ನೋಡಬೇಕಿದೆ.