ಕೋವಿಡ್ ಕಡಿಮೆ ಇರುವ ಜಿಲ್ಲೆಗಳಲ್ಲಿ ಕಠಿಣ ನಿಯಮ ಬೇಡ : ಕೆ.ಎಸ್.ಈಶ್ವರಪ್ಪ covid 19 curfew in karnataka saaksha tv
ಶಿವಮೊಗ್ಗ : ಕೊರೊನಾ ಸೋಂಕು ತಡೆಗೆ ರಾಜ್ಯ ಸರ್ಕಾರ ರಾಜ್ಯದಾದ್ಯಂತ ಹಾಫ್ ಲಾಕ್ ಡೌನ್ ಜಾರಿ ಮಾಡಿದೆ. ಆದ್ರೆ ಇದಕ್ಕೆ ಆಡಳಿತ ಪಕ್ಷದಲ್ಲಿಯೇ ಅಪಸ್ವರ ಉಂಟಾಗಿದೆ.
ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಲಾಕ್ ಡೌನ್ ಬಗ್ಗೆ ಮಾತನಾಡಿದ್ದು, ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಿರುವ ಬೆಂಗಳೂರಿನ ಕಠಿಣ ನಿಯಮಗಳು ಕೋವಿಡ್ ಕಡಿಮೆ ಇರುವ ಇತರೆ ಜಿಲ್ಲೆಗಳಿಗೆ ಬೇಡ ಎಂದಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎಸ್.ಈಶ್ವರಪ್ಪ, ಬೆಂಗಳೂರು ನಗರದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಾಗಿದೆ.
ಆದ್ರೆ ಇತರೇ ಜಿಲ್ಲೆಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಎರಡು, ಐದು ಜಾಸ್ತಿ ಅಂದ್ರೆ ಹತ್ತಿರಬಹುದು.
ಬೆಂಗಳೂರಿನಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಿದೆ ಅಂತಾ ಬೇರೆ ಜಿಲ್ಲೆಗಳಲ್ಲೂ ಕಠಿಣ ನಿಯಮ ಜಾರಿ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಈ ಕುರಿತು ನಾನು ನಾಳೆ ನಡೆಯಲಿರುವ ಕ್ಯಾಬಿನೆಟ್ ಸಭೆಯಲ್ಲಿ ಕೇಳುತ್ತೇನೆ. ಬೆಂಗಳೂರಿನ ಕಠಿಣ ನಿಯಮಗಳನ್ನು ಗಡಿ ಜಿಲ್ಲೆಯಲ್ಲಿ ಜಾರಿಗೊಳಿಸಲು ಸೂಚಿಸುತ್ತೇನೆ ಎಂದು ತಿಳಿಸಿದ್ದಾರೆ.









