Rishab shetty – ಈ ರೆಸ್ಪಾನ್ಸ್ ನಿರೀಕ್ಷೆ ಮಾಡಿರಲಿಲ್ಲ
ಹೊಂಭಾಳೆ ಫಿಲ್ಮ್ಸ್, ರಿಷಬ್ ಶೆಟ್ಟಿ ಕಾಂಬಿನೇಷನ್ ನಲ್ಲಿ ಬಂದ ಸಿನಿಮಾ ಕಾಂತಾರ. ಬಾಕ್ಸ್ ಆಫೀಸ್ ನಲ್ಲಿ ಸುಮಾರು 200 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ.
ಸೆಪ್ಟೆಂಬರ್ 30ರಂದು ರಿಲೀಸ್ ಆದ ಈ ಸಿನಿಮಾ ಸೂಪರ್ ಡೂಪರ್ ಬ್ಲಾಕ್ ಬ್ಲಸ್ಟರ್ ಆಗಿ ನಿಂತಿದೆ.
ಈ ಸಿನಿಮಾವನ್ನು ಅಕ್ಟೋಬರ್ 15 ರಂದು ರಿಲೀಸ್ ಆಗಿತ್ತು. ಟಾಲಿವುಡ್ ನಲ್ಲಿ ಮೆಗಾ ನಿರ್ಮಾಪಕ ಅಲ್ಲು ಅರ್ಜುನ್ ಗೀತಾ ಫಿಲ್ಮ್ಸ್ ಮೂಲಕ ಸಿನಿಮಾವನ್ನು ರಿಲೀಸ್ ಮಾಡಿದರು.
ಪ್ರಸ್ತುತ ಈ ಸಿನಿಮಾ ಥಿಯೇಟರ್ ನಲ್ಲಿ ಪ್ರದರ್ಶನ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಸಿನಿಮಾ ತಂಡ ಸಕ್ಸಸ್ ಟೂರ್ ಹಮ್ಮಿಕೊಂಡಿದೆ.
ತಿರುಪತಿ, ವಿಶಾಖಪಟ್ಟಣದಲ್ಲಿರುವ ಥಿಯೇಟರ್ ಗಳಿಗೆ ಕಾಂತಾರ ಸಿನಿಮಾ ತಂಡ ಭೇಟಿ ನೀಡಿದೆ.
ಈ ಸಂದರ್ಭದಲ್ಲಿ ರಿಷಬ್ ಶೆಟ್ಟಿ ಮಾತನಾಡಿದ್ದು, ತೆಲುಗು ಪ್ರೇಕ್ಷಕರಿಂದ ಇಂತಹ ರೆಸ್ಪಾನ್ಸ್ ಅನ್ನು ನಾವು ನಿರೀಕ್ಷೆ ಮಾಡಿರಲಿಲ್ಲ.
ಕೇವಲ ಎರಡು ವಾರಗಳಲ್ಲಿ 50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇಷ್ಟು ಪ್ರೀತಿ ತೋರಿಸಿದ ತೆಲುಗು ಪ್ರೇಕ್ಷಕರಿಗೆ ಧನ್ಯವಾದಗಳು.
ನಿಮ್ಮ ಅಭಿಮಾನ ಎಂದಿಗೂ ಇದೇ ರೀತಿ ಇರಬೇಕು ಎಂದು ನಾನು ಕೋರಿಕೊಳ್ಳುತ್ತೇವೆ ಎಂದಿದ್ದಾರೆ.
ಇನ್ನು ಅಲ್ಲು ಅರವಿಂದ್ ಮಾತನಾಡುತ್ತಾ, ಸಿನಿಮಾಗೆ ಭಾಷೆ ಮುಖ್ಯವಲ್ಲ. ಕೇವಲ ಎಮೋಷನ್ ಮುಖ್ಯ ಎಂಬೋದನ್ನ ಕಾಂತಾರ ಸಿನಿಮಾ ನಿರೂಪಿಸಿದೆ ಎಂದಿದ್ದಾರೆ.