Kareena Kapoor: ಲಾಲ್ ಸಿಂಗ್ ಚೆಡ್ಡಾ ಸೋಲು : ಕರೀನಾ ಹೇಳಿದ್ದೇನು..?
ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಟ್ ಅಮೀರ್ ಖಾನ್ ಅವರ ಇತ್ತೀಚಿನ ಚಿತ್ರ ‘ಲಾಲ್‌ಸಿಂಗ್ ಚಡ್ಡಾ’. ಕರೀನಾ ಕಪೂರ್ ನಾಯಕಿಯಾಗಿ ನಟಿಸಿರುವ ಈ ಸಿನಿಮಾದಲ್ಲಿ ನಾಗ ಚೈತನ್ಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅದ್ವೆತ್ ಚಂದನ್ ನಿರ್ದೇಶಿಸಿದ್ದಾರೆ. ಭಾರೀ ನಿರೀಕ್ಷೆಗಳ ನಡುವೆ ಆಗಸ್ಟ್ 11 ರಂದು ತೆರೆಕಂಡ ಈ ಚಿತ್ರ ನಿರೀಕ್ಷೆಯಷ್ಟು ಕಲೆಕ್ಷನ್ ಮಾಡುವಲ್ಲಿ ವಿಫಲವಾಗಿದೆ. ಈ ಚಿತ್ರದ ಕಲೆಕ್ಷನ್ ಗಲ್ಲಾಪೆಟ್ಟಿಗೆಯಲ್ಲಿ ಹೀನಾಯವಾಗಿ ಕುಸಿದಿದೆ.

ಈ ಬಗ್ಗೆ ಕರೀನಾ ಕಪೂರ್ ಪ್ರತಿಕ್ರಿಯೆ ನೀಡಿದ್ದು, ಕೆಲವರು ಬೇಕಂತಲೇ ಈ ಸಿನಿಮಾವನ್ನು ಟಾರ್ಗೆಟ್ ಮಾಡಿದ್ದಾರೆ ಎಂದು ಆರೋಪಿಸಿದರು. ಕೇವಲ ಶೇಕಡಾ ಒಂದು ಪ್ರತಿಶತ ಪ್ರೇಕ್ಷಕರೇ ಈ ರೀತಿ ಮಾಡುತ್ತಿದ್ದಾರೆ. ರಿಲೀಸ್ ಗೂ ಮುನ್ನಾ ಬಾಯ್ ಕಟ್ ಲಾಲ್ ಸಿಂ್ ಚಡ್ಡಾ ಅಂತಾ ಪ್ರಚಾರ ಮಾಡಿದ್ರು. ಋಣಾತ್ಮಕ ಪಬ್ಲಿಸಿಟಿಯಿಂದಲೇ ಈ ರೀತಿ ಆಗಿದೆ ಎಂದು ಹೇಳಿದ್ದಾರೆ.
ಈ ಸಿನಿಮಾವನ್ನು ಬಹಿಷ್ಕರಿಸಿದರೆ ಒಳ್ಳೆಯ ಸಿನಿಮಾವನ್ನು ದೂರ ಮಾಡಿದಂತಾಗುತ್ತದೆ. ಮೂರು ವರ್ಷಗಳ ಕಾಲ ಈ ಚಿತ್ರಕ್ಕಾಗಿ ಶ್ರಮಿಸಿದ್ದೇವೆ. ದಯವಿಟ್ಟು ನಮ್ಮ ಸಿನಿಮಾವನ್ನು ಬಹಿಷ್ಕರಿಸಬೇಡಿ’ ಎಂದು ಕರೀನಾ ಕೇಳಿಕೊಂಡಿದ್ದಾರೆ.