ಅಬ್ಬರಿಸುತ್ತಾ ಬಂದ ಸುಲ್ತಾನ – ಕೆಜಿಎಫ್ 2 ಮೂರನೇ ಹಾಡು ರಿಲೀಸ್

1 min read

ಅಬ್ಬರಿಸುತ್ತಾ ಬಂದ ಸುಲ್ತಾನ – ಕೆಜಿಎಫ್ 2 ಮೂರನೇ ಹಾಡು ರಿಲೀಸ್

ಕೆಜಿಎಫ್ 2 (KGF Chapter 2) ಚಿತ್ರ ಬಿಡುಗಡೆಗೆ ಕ್ಷಣಗಣೆನೆ ಶುರುವಾಗಿದೆ.   ಕೆಜಿಎಫ್ ​1ರಂತೆ  ಈ ಚಿತ್ರದಲ್ಲೂ ಸಹ ಹಾಡುಗಳು ಕಮಾಲ್ ಮಾಡುತ್ತಿವೆ.   ಇಂದರ ಮೇಲೊಂದರಂತೆ ಬಿಡುಗಡೆಯಾಗುತ್ತಿರುವ ಹಾಡಿಗಳಿಂದ ಈ ಚಿತ್ರದ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗುತ್ತಿದೆ.   ಇತ್ತೀಚೆಗಷ್ಟೇ ಈ ಚಿತ್ರದ ತೂಫಾನ್, ಗಗನೀ ಹಾಡು ಹಾಗೂ ಟ್ರೈಲರ್​ ಬಿಡುಗಡೆಯಾಗಿ ಧೂಳೆಬ್ಬಿಸಿದೆ. ಇದೀಗ ಮತ್ತೊಂದು ಹಾಡು ಬಿಡುಗಡೆಯಾಗಿದೆ. ಈ ಸಿನಿಮಾದ ಮೂರನೇ ಹಾಡು ರಿಲೀಸ್​ ಆಗಿದ್ದು, ಸುಲ್ತಾನ ಲಿರಿಕಲ್ ಹಾಡು ಬಿಡುಗಡೆಯಾಗಿದೆ.

ರವಿ ಬಸ್ರೂರು ಸಂಗೀತ ನಿರ್ದೇಶನ ಮತ್ತು ಸಾಹಿತ್ಯದಲ್ಲಿ  ಮೂಡಿಬಂದಿರುವ  ಹಾಡು ಮೊದಲ ಭಾಗದ ದೀರ ದೀರ ಸುಲ್ತಾನ ಹಾಡನ್ನ ನೆನಪಿಸುವಂತೆಯೇ ಇದೆ.  ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳಂತೆ ಇದು ಸಹ ಯುಟ್ಯೂಬ್ ನಲ್ಲಿ ಸದ್ದು ಮಾಡುತ್ತಿದೆ.

ಲಹರಿ ಮ್ಯೂಸಿಕ್ ಮತ್ತು ಎಂ ಆರ್ ಟಿ ಮ್ಯೂಸಿಕ್ ಯುಟ್ಯೂಬ್ ಚಾನೆಲ್ ಗಳಲ್ಲಿ  ಈ ಹಾಡು ಬಿಡುಗಡೆಯಾಗಿದೆ.   ಹಾಡು ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಿದೆ.  ಸ್ಯಾಂಡಲ್‌ವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಾಗಿ  ಇಡೀ ಭಾರತ ಕಾಯುತ್ತಿದೆ. ದೇಶದ  ಎಲ್ಲಾ ಕಡೆಯಿಂದ ಹೌಸ್ ಫುಲ್ ಬುಕ್ಕಿಂಗ್ ಗಳು ನಡೆಯುತ್ತಿವೆ. ಚಿತ್ರ ಅಡ್ವಾನ್ಸ್ ಬುಕ್ಕಿಂಗ್ ನಲ್ಲಿ ದಾಖಲೆಯನ್ನೇ ಬರೆದಿದೆ.   ಏಪ್ರಿಲ್ 14ರಂದು ಎಂದರೆ ನಾಳೆ ಸಿನಿಮಾ ಬಿಡುಗಡೆಯಾಗುತ್ತಿದ್ದು, ಅಭಿಮಾನಿಗಳು ಕೂಡ ಕಾತುರದಿಂದ ಕಾಯುತ್ತಿದ್ದಾರೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd