ಡಿಕೆಶಿ ಕೈಗೆ ಕಡ್ಸಲೆ : ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ

1 min read
dk-shivakumar

ಡಿಕೆಶಿ ಕೈಗೆ ಕಡ್ಸಲೆ : ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ

ಉಡುಪಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಸನ್ಮಾನಿಸುವ ವೇಳೆ ಜಿಲ್ಲಾ ಕಾಂಗ್ರೆಸ್ ನಾಯಕರು ಎಡವಟ್ಟು ಮಾಡಿಕೊಂಡಿದ್ದಾರೆ.

ಸದ್ಯ ಡಿಕೆ ಶಿವಮಾರ್ ಕರಾವಳಿಯ ಮೂರು ಜಿಲ್ಲೆಗಳ ಪ್ರವಾಸದಲ್ಲಿದ್ದಾರೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಪ್ತವಾಸ ಮಾಡಿ ಉತ್ತರ ಕನ್ನಡಕ್ಕೆ ತೆರಳಿದ್ದಾರೆ.

ಉಡುಪಿ ಪ್ರವಾಸದ ವೇಳೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಡಿ.ಕೆ ಶಿವಕುಮಾರ್ ಅವರಿಗೆ ಬೆಳ್ಳಿಯ ಕತ್ತಿಯನ್ನು ನೀಡಿ ಸನ್ಮಾನಿಸಲಾಯ್ತು.

ಈ ವೇಳೆ ಜಿಲ್ಲಾ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಗೆ ಬೆಳ್ಳಿ ಕತ್ತಿ ನೀಡುವ ಬದಲು ದೈವಗಳಿಗೆ ಹರಕೆಯಾಗಿ ನೀಡುವ ಕಡ್ಸಲೆಯನ್ನು ನೀಡಲಾಗಿದೆ.

dk-shivakumar

ದೈವ ಪಾತ್ರಿ, ಭೂತಾರಾಧನೆ ಸಂದರ್ಭ ದೈವ ನರ್ತಕರು ಮಾತ್ರ ಕಡ್ಸಲೆ ಹಿಡಿದುಕೊಳ್ಳಲಾಗುತ್ತದೆ.

ಧಾರ್ಮಿಕವಾಗಿ ಬಹಳ ಪವಿತ್ರವಾಗಿರುವ ಕಡ್ಸಲೆಯನ್ನು ಉಡುಗೊರೆಯಾಗಿ ನೀಡಿದ್ದು ಸರಿಯಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಡ್ಸಲೆ ಆಯುಧ ದೈವಾರಾಧನೆಯಲ್ಲಿ ತನ್ನದೇ ಆದ ಮಹತ್ವವನ್ನು ಹೊಂದಿದೆ. ದೈವಪಾತ್ರಿಗಳಲ್ಲದೆ ಬೇರೆ ಯಾರು ಈ ಆಯುಧವನ್ನು ಹಿಡಿಯುವಂತಿಲ್ಲ.

ಆದ್ರೆ ಜಿಲ್ಲೆಗೆ ಆಗಮಿಸಿದ ತಮ್ಮ ನಾಯಕನನ್ನು ಖುಷಿಪಡಿಸಲು ಬೆಳ್ಳಿಯ ಕಡ್ಸಲೆ ಕೊಟ್ಟು ಕಾಂಗ್ರೆಸ್ ಮುಖಂಡರು ತಪ್ಪು ಮಾಡಿದ್ದಾರೆ.

ಈ ಘಟನೆಯಿಂದ ದೈವಾರಾಧಕರ ಭಾವನೆಗೆ ಧಕ್ಕೆಯಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭಕ್ತರು ಆಕ್ರೋಶ ಹೊರಹಾಕಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd