ladakh border crisis
ಲಡಾಖ್ : ಲಡಾಖ್ ಗಡಿ ಸಂಘರ್ಷ ಇತ್ತೀಚೆಗೆ ತೀವ್ರತೆ ಪಡೆದುಕೊಂಡಿದೆ. ಆದ್ರೆ ಇದೀಗ ಭಾರತ-ಚೀನಾದ ನಡುವಿನ ಗಡಿ ಬಿಕ್ಕಟ್ಟು ಬಗೆಹರಿಯುವ ಲಕ್ಷಣಗಳು ಕಾಣುತ್ತಿವೆ. ಗಡಿಯಲ್ಲಿ ಸೇನೆ ಬಿಟ್ಟು ಉದ್ಧಟತನ ಪ್ರದರ್ಶಿಸಿದ್ದ ಚೀನಾ 6 ತಿಂಗಳ ಬಳಿಕ ಮೊದಲ ಬಾರಿಗೆ ಪೂರ್ವ ಲಡಾಖ್ ಭಾಗದಿಂದ ತನ್ನ ಸೇನಾ ಪಡೆಯನ್ನು ಹಿಂಪಡೆಯುವ ಕಾರ್ಯ ಆರಂಭಿಸಿದೆ. ಲಡಾಖ್ನ ಸಂಘರ್ಷದ ಸ್ಥಳದಿಂದ ತನ್ನ ಸೇನೆಯನ್ನು ಮೂರು ಹಂತಗಳಲ್ಲಿ ವಾಪಾಸ್ ಪಡೆಯುವ ಕುರಿತು ಮಾತುಕತೆ ನಡೆದಿತ್ತು. ಇದೀಗ ಎರಡೂ ದೇಶಗಳ ಸೇನಾ ಟ್ಯಾಂಕ್ಗಳನ್ನು ಹಿಂಪಡೆಯಲು ಆರಂಭಿಸಿದೆ. ಭಾರತ-ಚೀನಾ ಸೇನಾ ಕಮಾಂಡರ್ಗಳ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿತ್ತು ಎಂದು ಮೂಲಗಳು ತಿಳಿಸಿದ್ದವು. ಪಾಂಗಾಂಗ್ ಸರೋವರದ ದಡದಲ್ಲಿ ನಿಯೋಜನೆಗೊಂಡಿರುವ ಸೇನಾ ತುಕಡಿಗಳನ್ನು ಹಿಂಪಡೆಯಬೇಕು. ಇದು ಎರಡೂ ದೇಶಗಳಿಗೂ ಅನ್ವಯವಾಗಲಿದೆ ಎಂಬ ಮಾತುಕತೆಯಾಗಿತ್ತು ಎನ್ನಲಾಗಿದೆ. ಭಾರತದ ವ್ಯಾಪ್ತಿಗೆ ಒಳಪಡುವ ಚುಶೂಲ್ನಲ್ಲಿ ಭಾರತ-ಚೀನಾ ಸೇನೆಗಳ ಕಮಾಂಡರ್ ಮಟ್ಟದ ಸಭೆ ನಡೆದಿತ್ತು. ಈ ಸಭೆಯಲ್ಲಿ ಮೂರು ಹಂತದ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಸೇನಾ ಪಡೆಯನ್ನು ವಾಪಾಸ್ ಕರೆಸಿಕೊಳ್ಳಬೇಕು.
ಈರೋಸ್ ನೌ’ ಓಟಿಟಿಯಲ್ಲಿ ಸಂಚಾರಿ ವಿಜಯ್ ಅಭಿನಯದ 6 ನೇ ಮೈಲಿ’
ಗಡಿ ಮಾತುಕತೆಯ ಮೊದಲ ಹಂತವಾಗಿ ಎರಡೂ ಸೇನೆಗಳು ಲಡಾಖ್ ನ ಘರ್ಷಣಾ ಸ್ಥಳದಲ್ಲಿ ಬೀಡುಬಿಟ್ಟಿದ್ದ ಟ್ಯಾಂಕರ್ ಗಳು, ಸೇನಾ ವಾಹನ, ಫಿರಂಗಿ ಮುಂತಾದ ವಾಹನಗಳನ್ನು ಹಿಂಪಡೆಯಲು ಮುಂದಾಗಿದೆ. ಈ ಒಪ್ಪಂದಕ್ಕೆ ಬೀಜಿಂಗ್ ಮತ್ತು ದೆಹಲಿಯಿಂದ ಒಪ್ಪಿಗೆ ಸಿಕ್ಕ ಬಳಿಕ ಲಡಾಖ್ ಗಡಿಯಲ್ಲಿ ಎರಡೂ ಸೇನೆಗಳು ಘರ್ಷಣಾ ಸ್ಥಳದಿಂದ ಟ್ಯಾಂಕರ್ಗಳನ್ನು ಹಿಂಪಡೆಯಲು ನಿರ್ಧರಿಸಿವೆ. 2ನೇ ಭಾಗವಾಗಿ ಉಭಯ ಪಡೆಗಳು ಪ್ಯಾಂಗಾಂಗ್ ಸರೋವರದ ದಕ್ಷಿಣ ತೀರದಿಂದ ತಮ್ಮ ಸಿಬ್ಬಂದಿಗಳನ್ನು ವಾಪಾಸ್ ಕರೆಸಿಕೊಳ್ಳಲಿದ್ದಾರೆ. 3ನೇ ಹಂತದ ಅನ್ವಯ ಪ್ಯಾಂಗಾಂಗ್ ಸರೋವರದ ಉತ್ತರ ಭಾಗದಲ್ಲಿ ಉಭಯ ಸೇನೆಗಳು ಒಂದು ದಿನಕ್ಕೆ ಶೇ.30ರಷ್ಟು ಸಿಬ್ಬಂದಿಗಳನ್ನು ವಾಪಾಸ್ ಕರೆಸಿಕೊಳ್ಳಲಿವೆ. ಈ ರೀತಿ ಒಟ್ಟು ಮೂರು ದಿನಗಳ ಕಾಲ ಸೇನಾ ಸಿಬ್ಬಂದಿಗಳು ವಾಪಾಸ್ ತೆರಳಲಿದ್ದಾರೆ. ಭಾರತೀಯ ಪಡೆಗಳು ಧನ್ಸಿಂಗ್ ಥಾಪಾ ಪೋಸ್ಟ್ ಗೆ ವಾಪಾಸಾಗಲಿವೆ. ಒಟ್ಟಾರೆ ಕಳೆದ ಹಲವು ತಿಂಗಳಿಂದ ಗಡಿಯಲ್ಲಿ ಒಂದು ರೀತಿಯಾದ ಉದ್ವಿಘ್ನ ಸ್ಥಿತಿ ನಿರ್ಮಾಣವಾಗಿತ್ತು. ಚೀನಾ ಕುತಂತ್ರಿತನ ತೋರಿಸಿ ಗಡಿಯಲ್ಲಿ ತನ್ನ ಸೇನೆಯನ್ನ ನೇಮಿಸಿ ಭಾರತದ ಕೆಂಗಣ್ಣಿಗೆ ಗುರಿಯಾಗಿತ್ತು. ಇದಕ್ಕೆ ಭಾರತೀಯ ಸೇನೆಯೂ ತಕ್ಕ ಉತ್ತರ ನೀಡಿತ್ತು.
ladakh border crisis
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel