ಜಾಗತಿಕವಾಗಿ ಅತಿಹೆಚ್ಚು ಬಿಲಿಯನೇರ್ ಗಳನ್ನು ಹೊಂದಿದ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ 3ನೇ ಸ್ಥಾನ ದೊರಕಿದೆ. ಭಾರತದಲ್ಲಿ ಬಿಲಿಯನೇರ್ ಗಳ ಸಂಖ್ಯೆ 138ಕ್ಕೆ ಏರಿದ್ದು, 799 ಬಿಲಿಯನೇರ್ ಗಳನ್ನು ಹೊಂದಿರುವ ಚೀನಾ ಮತ್ತು 626 ಬಿಲಿಯನೇರ್ ಗಳನ್ನು ಹೊಂದಿರುವ ಅಮೆರಿಕ ಮೊದಲೆರಡು ಸ್ಥಾನಗಳನ್ನು ಪಡೆದಿದೆ.
ಭಾರತದಲ್ಲಿ ಅತಿ ಹೆಚ್ಚು ಬಿಲಿಯನೇರ್ ಗಳನ್ನು ಹೊಂದಿರುವ ನಗರ ಮುಂಬಯಿಯಾಗಿದ್ದು, ಜಗತ್ತಿನಲ್ಲಿ ಮುಂಬಯಿ 9ನೇ ಸ್ಥಾನದಲ್ಲಿದೆ. ಮುಂಬಯಿಯಲ್ಲಿ 90 ಮಂದಿ ಬಿಲಿಯನೇರ್ ಗಳಿದ್ದರೆ ಬೆಂಗಳೂರು 17 ಮಂದಿ ಬಿಲಿಯನೇರ್ ಗಳನ್ನು ಹೊಂದಿದೆ. 67 ಬಿಲಿಯನ್ ಡಾಲರ್ ಹೊಂದಿರುವ ಮುಖೇಶ್ ಅಂಬಾನಿ ಭಾರತದ ಶ್ರೀಮಂತ ವ್ಯಕ್ತಿಯಾಗಿದ್ದಾರೆ.








