ಕೊರೊನಾ ಸಂಕಷ್ಟ – ಆಟೋವನ್ನೇ ಆಂಬ್ಯುಲೆನ್ಸ್ ಮಾಡಿದ ಚಾಲಕ : ಸೋಂಕಿತರಿಗೆ ಉಚಿತ ಸೇವೆ..!

1 min read

ಕೊರೊನಾ ಸಂಕಷ್ಟ – ಆಟೋವನ್ನೇ ಆಂಬ್ಯುಲೆನ್ಸ್ ಮಾಡಿದ ಚಾಲಕ : ಸೋಂಕಿತರಿಗೆ ಉಚಿತ ಸೇವೆ..!

ಮಧ್ಯಪ್ರದೇಶ : ದೇಶದಲ್ಲಿ ಕೊರೊನಾ 2ನೇ ಅಲೆಯ ಪ್ರಖರತೆಗೆ ಜನ ತತ್ತರಿಸಿ ಹೋಗಿದ್ದಾರೆ. ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಸಿಗದೇ , ಬೆಡ್ ಕೊರತೆಯಿಂದ , ಆಕ್ಸಿಜನ್ ಕೊರತೆಯಿಂದ, ಚಿಕಿತ್ಸೆ ಫಲಿಸದೇ ನಿತ್ಯ ಸಾವಿರಾರು ಜನ ಸಾಯ್ತಿದ್ದಾರೆ. ಇಂತಹ ವಿಷಮ ಸಂಕಷ್ಟದ ಪರಿಸ್ಥಿತಿಯಲ್ಲಿ. ಕೆಲ ತಾರೆಯರು ಮಾನವೀಯತೆ ಪ್ರದರ್ಶಿಸಿ ಜನರಿಗೆ ಸಹಾಯ ಮಾಡಲು ಮುಂದಾಗಿದ್ರೆ.. ಇನ್ನೂ ಕೆಲ ಸೋ ಕಾಲ್ಡ್ ಸೆಲೆಬ್ರಿಟಿಗಳು ಇದಕ್ಕೂ ನಮಗೂ ಸಂಬಂಧವೇ ಇಲ್ಲ ಅನ್ನೋ ರೀತಿ ವಿದೇಶಗಳಿಗೆ ಪರಾರಿಯಾಗಿ ಟ್ರೋಲ್ ಪೇಜ್ ನಲ್ಲಿ ಟ್ರೆಂಡ್ ಆಗ್ತಿದ್ದಾರೆ.

ಇಂತಹವರ ನಡುವೆ ಸಾಮಾನ್ಯ ಜನರು ನಿಜಕ್ಕೂ ತಮ್ಮ ಕೈಲಾದ ಸಹಾಯ ಮಾಡಲು ಮುಂದಾಗ್ತಿದ್ದಾರೆ. ಇಂತಹವರ ಪೈಕಿ ಮಧ್ಯಪ್ರದೇಶದ ಆಟೋ ಚಾಲಕ ಸಹ ಒಬ್ರು..  ಆಟೋವನ್ನು ಅಂಬುಲೆನ್ಸ್ ಮಾಡಿ, ಕೊರೊನಾ ಸೋಂಕಿತರಿಗೆ ಉಚಿತ ಸೇವೆ ನೀಡುತ್ತಿರುವ ಚಾಲಕ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾರೆ.

ಮಧ್ಯಪ್ರದೇಶದ ಭೋಪಾಲ್‍ನ ಜವೇದ್ ಖಾನ್ ಜನರಿಗೆ ಉಚಿತವಾಗಿ ಸೇವೆ ಮಾಡುತ್ತಿದ್ದಾರೆ. ಕೋವಿಡ್ ಸೋಕಿತರನ್ನು ಉಚಿತವಾಗಿ ಆಸ್ಪತ್ರೆಗೆ ಕರೆದೊಯ್ಯುವಂತಹ ಕೆಲಸವನ್ನು ಜಾವೇದ್ ಮಾಡುತ್ತಿದ್ದಾರೆ. ಆಟೋದಲ್ಲಿ ಆಕ್ಸಿಜನ್, ಮೆಡಿಶಿನ್ ವ್ಯವಸ್ಥೆಯನ್ನು ಮಾಡಲಾಗಿದೆ. ಅಂಬುಲೆನ್ಸ್‍ನಲ್ಲಿ ಹೇಗೆ ಇರುತ್ತದೆಯೋ ಅದೇ ರೀತಿಯಲ್ಲಿ ಆಟೋವನ್ನು ಮಾಡಲಾಗಿದೆ.

ಕೊರೊನಾ 2ನೇ ಅಲೆ ಜನರನ್ನು ಹಿಂಸೆ ಮಾಡುತ್ತಿದೆ. ಇಂಹತ ಸಂದರ್ಭದಲ್ಲಿ ನಾನು ಸುಮ್ಮನೇ ಮನೆಯಲ್ಲಿ ಕುಳಿತುಕೊಳ್ಳಲು ಮನಸ್ಸು ಒಪ್ಪಲಿಲ್ಲ. ಮನೆಯವರ ಸಲಹೆ ಪಡೆದು ಆಟೋದಲ್ಲಿ ಅಂಬುಲೆನ್ಸ್ ಮಾಡಿ ಸೇವೆ ಮಾಡುತ್ತಿದ್ದೇನೆ. 18 ವರ್ಷಗಳಿಂದ ಆಟೋವನ್ನು ಓಡಿಸುತ್ತಿದ್ದೇನೆ. ನನ್ನ ಕುಟುಂಬದಲ್ಲಿ ಯಾರಿಗೂ ಸೋಂಕು ತಗುಲಿಲ್ಲ. ಆದರೆ ದೇಶದಲ್ಲಿ ಸಾವು, ನೋವುಗಳನ್ನು ನೋಡಿ ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಜಾವೇದ್ ಹೇಳಿದ್ದಾರೆ.

ಕಳೆದ ಮೂರು ದಿನಗಳಲ್ಲಿ 10 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಿದ್ದೇನೆ. ಸ್ಯಾನಿಟೈಸರ್, ಆಕ್ಸಿಜನ್, ಕೆಲವು ಮೆಡಿಸಿನ್ ಇಟ್ಟಿದ್ದೇನೆ. ಆಕ್ಸಿಜನ್‍ಕೊಳ್ಳಲು ಪ್ರತಿನಿತ್ಯ 600 ರೂಪಾಯಿ ಖರ್ಚು ಮಾಡುತ್ತೇನೆ. ಸೋಂಕಿತರು ಇರುವ ಜಾಗಕ್ಕೆ ಹೋಗಿ ಕರೆದಕೊಂಡು ಬರುತ್ತೇನೆ. ನನ್ನ ಪತ್ನಿ ಕೂಡಾ ನನ್ನ ಈ ಕೆಲಸಕ್ಕೆ ಸಹಕಾರ ನೀಡುತ್ತಾಳೆ ಎಂದಿದ್ದಾರೆ.

‘ನೀವೂ ಬದುಕಿ, ಇನ್ನೊಬ್ಬರನ್ನು ಬದುಕಲು ಬಿಡಿ’ – ಸತೀಶ್ ನಿನಾಸಂ  

ತಮಿಳು ಸಿನಿಮಾರಂಗದ ಖ್ಯಾತ ನಿರ್ದೇಶಕ ಕೆ.ವಿ ಆನಂದ್ ನಿಧನ

ರೀಲ್ ನಲ್ಲಿ ವಿಲ್ಲನ್… ರಿಯಲ್ ಹೀರೋ – ಕೊರೊನಾ ಸಂಕಷ್ಟ :  ಆಂಬ್ಯುಲೆನ್ಸ್ ಚಾಲಕನಾದ ಕನ್ನಡದ ನಟ ಅರ್ಜುನ್..!

ಭಾರತಕ್ಕೆ ಸಹಾಯ ಮಾಡಿ ಎಂದು ಬೇಡಿಕೊಂಡ ಪ್ರಿಯಾಂಕಾ ಪತಿ ನಿಕ್ ಜೋನಸ್..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd