ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿದವನ ಹಿಗ್ಗಾ ಮುಗ್ಗಾ ಥಳಿಸಿದ ಪೊಲೀಸರು –  ವ್ಯಕ್ತಿ ಸಾವು

1 min read

 ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿದವನ ಹಿಗ್ಗಾ ಮುಗ್ಗಾ ಥಳಿಸಿದ ಪೊಲೀಸರು –  ವ್ಯಕ್ತಿ ಸಾವು

ಜಾರ್ಖಂಡ್ :  ಕೊರೊನಾ ಹಾವಳಿಯ ನಡುವೆ ಲಾಕ್ ಡೌನ್ ಹಾಗೂ ಇತರೇ ನಿಯಮಾವಳಿಗಳ ಪಾಲನೆ ಕಡ್ಡಾಯ.. ಪೊಲೀಸರು ರೂಲ್ಸ್ ಬ್ರೇಕ್ ಮಾಡಿದವರಿಗೆ ದಂಡ ವಿಧಿಸಬಹುದು.. ಆದ್ರೆ ಇತ್ತೀಚೆಗೆ ಕೆಲವೆಡೆ ಪೊಲೀಸರು ಇಂತಹ ಪ್ರಕರಣಗಳಲ್ಲಿ ದರ್ಪ ಮೆರೆದಿದ್ದು, ದೈಹಿಕವಾಗಿ ಹಲ್ಲೆ ನಡೆಸಿರುವಂತಹ ಪ್ರಕರಣಗಳು ಬೆಳಕಿಗೆ ಬಂದಿವೆ.

ವಿಡಿಯೋಗಳು ಫೋಟೋಗಳು ವೈರಲ್ ಆಗಿವೆ.. ಆದ್ರೆ ಪೊಲೀಸರು ಅಷ್ಟೇ ಅಲ್ಲ.. ಕರ್ತವ್ಯ ನಿರತ ಪೊಲೀಸರ ವಿರುದ್ಧ  ಜನರೂ ಕೂಡ ಅಸಮಂಜಸವಾಗಿ ವರ್ತನೆ ಮಾಡಿದ್ದಾರೆ. ಅವರ ವಿರುದ್ಧ ಹಲ್ಲೆ ನಡೆಸಿರುವ ವಿಡಿಯೋಗಳು ಸಹ ವೈರಲ್ ಆಗಿವೆ.

ಆದ್ರೆ ಇದೆಲ್ಲದನ್ನೂ ಮೀರಿದ  ಕ್ರೂರತೆಗೆ ಸಾಕ್ಷಿಯಾಗಿದೆ ಜಾರ್ಖಂಡ್… ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿದ 50 ವರ್ಷದ ವ್ಯಕ್ತಿಯನ್ನ  ಪೊಲೀಸರು ಥಳಿಸಿದ್ದು, ಪರಿಣಾಮ ಆತ  ಮೃತಪಟ್ಟಿದ್ದಾನೆ. ಹಜಾರಿಬಾಗ್ ನ ಚೌಪರನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮೃತ ಚಕ್ಕನ್ ಭೂಯಾನ್ ತನ್ನ ಹೆಂಡತಿ ಹಾಗೂ ಸಹೋದರನೊಂದಿಗೆ ಹಳ್ಳಿಯೊಂದರಲ್ಲಿ ನಡೆಯುತ್ತಿದ್ದ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೋಗುತ್ತಿರುವಾಗ ಮಾರ್ಗ ಮಧ್ಯೆ ಪೆಟ್ರೋಲ್ ಹಾಕಿಸಲು ಬೈಕ್ ನಿಲ್ಲಿಸಲಾಗಿದೆ.

ತಕ್ಷಣ ಅಲ್ಲಿಗೆ ಬಂದ ಗಸ್ತುವಾಹನದಲ್ಲಿದ್ದ ಪೊಲೀಸರು ಲಾಠಿಯಿಂದ ಥಳಿಸಲು ಪ್ರಾರಂಭಿಸಿದ್ದಾರೆ. ಹೇಗೂ ಆತನ ಹೆಂಡತಿ ಹಾಗೂ ಸಹೋದರ ಅಲ್ಲಿಂದ ಓಡಿಹೋಗಿದ್ದಾರೆ. ಆದರೆ, ಬೈಕ್ ಮೇಲೆಯೇ ಕುಳಿತಿದ್ದ ಚಕ್ಕನ್ ಭೂಯಾನ್ ಮೇಲೆ ಮನ ಬಂದಂತೆ ಹಲ್ಲೆ ನಡೆಸಿದ್ದಾರೆ. ಸಹೋದರ ಪ್ರಜ್ಞೆ ತಪ್ಪಿದಾಗ ಸುತ್ತಮುತ್ತಲಿನ ಜನರು ದೌಡಾಯಿಸಿ, ಆಸ್ಪತ್ರೆಗೆ ಕರೆದೊಯ್ಯಲಾಯಿತು ಆದರೆ, ಮಾರ್ಗ ಮಧ್ಯದಲ್ಲಿಯೇ ಆತ ಸಾವನ್ನಪ್ಪಿದ್ದಾಗಿ ಶಂಕರ್ ಭೂಯಾನ್ ತಿಳಿಸಿದ್ದಾನೆ.

ಬಳಿಕ ಘಟನೆ ಖಂಡಿಸಿ ಸ್ಥಳೀಯರು ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿ, ಪೊಲೀಸರ ಅಮಾನತಿಗೆ ಆಗ್ರಹಿಸಿದ್ದಾರೆ. ಈ  ಪ್ರಕರಣದ ವಿಚಾರಣೆ ನಡೆಸುವುದಾಗಿ ಡಿಎಸ್ ಪಿ ಭರವಸೆ ನೀಡಿದ್ದಾರೆ. ಆದ್ರೆ ಪೊಲೀಸರು ಇಂತಹ ಯಾವುದೇ ಘಟನೆ ಆಗಿಲ್ಲ ಎಂದು ವಾದ ಮಾಡಿದ್ದಾರೆ. ಹೀಗಾಗಿ ಮರಣೋತ್ತರ ಪರೀಕ್ಷೆ ಬಂದ ನಂತರ ಎಲ್ಲವೂ ಗೊತ್ತಾಗಲಿದೆ ಎಂದು ಚೌಪರನ್ ಪೊಲೀಸ್ ಠಾಣಾಧಿಕಾರಿ ವಿನೋದ್ ಟಿರ್ಕಿ ಹೇಳಿದ್ದಾರೆ.

‘ನೀವೂ ಬದುಕಿ, ಇನ್ನೊಬ್ಬರನ್ನು ಬದುಕಲು ಬಿಡಿ’ – ಸತೀಶ್ ನಿನಾಸಂ  

ತಮಿಳು ಸಿನಿಮಾರಂಗದ ಖ್ಯಾತ ನಿರ್ದೇಶಕ ಕೆ.ವಿ ಆನಂದ್ ನಿಧನ

ರೀಲ್ ನಲ್ಲಿ ವಿಲ್ಲನ್… ರಿಯಲ್ ಹೀರೋ – ಕೊರೊನಾ ಸಂಕಷ್ಟ :  ಆಂಬ್ಯುಲೆನ್ಸ್ ಚಾಲಕನಾದ ಕನ್ನಡದ ನಟ ಅರ್ಜುನ್..!

ಭಾರತಕ್ಕೆ ಸಹಾಯ ಮಾಡಿ ಎಂದು ಬೇಡಿಕೊಂಡ ಪ್ರಿಯಾಂಕಾ ಪತಿ ನಿಕ್ ಜೋನಸ್..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd