ನಟಿ ವಿದ್ಯಾಬಾಲನ್ ಈಗ ಮೊದಲಿನಂತೆ ಹೆಚ್ಚು ಪಾತ್ರಗಳಲ್ಲಿ ನಟಿಸುತ್ತಿಲ್ಲ. ಹಾಗಂತ ಅವರಿಗೆ ಬೇಡಿಕೆ ಕಡಿಮೆ ಆಗಿದೆ ಅಂತಾನೂ ಅಲ್ಲ. ಆದರೆ, ಇದಕ್ಕೆಲ್ಲ ಕಾರಣವನ್ನು ಸದ್ಯ ಅವರೇ ಬಿಚ್ಚಿಟ್ಟಿದ್ದಾರೆ.
ಹಲವು ನಾಯಕ ನಟರಿಗೆ ಮಹಿಳಾ ಪ್ರಧಾನ ಪಾತ್ರಗಳಲ್ಲಿ ನಟಿಸಲು ಹಿಂಜರಿಕೆ ಇದೆ. ಹೀರೋಗಳಿಗಿಂತಲೂ ಉತ್ತಮ ಚಿತ್ರದಲ್ಲಿ ನಟಿಸುವುದಕ್ಕೆ ಅವರಿಗೆ ನಷ್ಟ ಆದಂತಾಗುತ್ತದೆ. ಆದರೆ, ಮಹಿಳಾ ಪ್ರಧಾನ ಸಿನಿಮಾಗಳು ಹೆಚ್ಚು ರೋಮಾಂಚನಕಾರಿಯಾಗಿ ಇರುತ್ತವೆ. ಹೀಗಾಗಿ ಮಹಿಳೆಯರು ಹೆಚ್ಚು ಹೈಲೈಟ್ ಆಗುವುದನ್ನು ಅವರಿಗೆ ಸಹಿಸಲು ಆಗುವುದಿಲ್ಲ ಎಂದು ಹೇಳಿದ್ದಾರೆ. ವಿದ್ಯಾಬಾಲನ್ ಇತ್ತೀಚೆಗೆ ಮಹಿಳಾ ಪ್ರಧಾನಿ ಸಿನಿಮಾಗಳಲ್ಲಿಯೇ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ.
ವಿದ್ಯಾ ಬಾಲನ್ ಸದ್ಯ ‘ದೊ ಔರ್ ದೋ ಪ್ಯಾರ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ನಟಿಯೊಂದಿಗೆ ನಾಯಕ ನಟನಾಗಿ ಪ್ರತೀಕ್ ಗಾಂಧಿ ನಟಿಸುತ್ತಿದ್ದಾರೆ. ಇದು ರೋಮ್ಯಾಂಟಿಕ್ ಕಾಮಿಡಿ ಚಿತ್ರವಾಗಿದೆ.