ಕೊರೊನಾ ಲಾಕ್ ಡೌನ್ : ಖಿನ್ನತೆಯಿಂದ ಆತ್ಮಹತ್ಯೆಗೆ ಶರಣಾದ ಮಾಡೆಲ್
ನವದೆಹಲಿ: ದೇಶಾದ್ಯಾಂತ ಕೋವಿಡ್ 2ನೇ ಅಲೆಯ ಹಾವಳಿ ನಿಯಂತ್ರಣಕ್ಕೆ ಬಹುತೇಕ ರಾಜ್ಯಗಳಲ್ಲಿ ಲಾಕ್ ಡೌನ್ ಹೇರಲಾಗಿತ್ತು.. ಇದ್ರಿಂದ ಕೆಲಸ ಲಾರ್ಯಗಳಿಗೆ , ವಿದ್ಯಾರ್ಥಿಗಳಿಗೆ , ಕೂಲಿ ಕಾರ್ಮಿಕರು ಸಹ ತೊಂದರೆ ಅನುಭವಿಸುಂತಾಗಿದೆ.. ಕ್ರಮೇಣ ಲಾಕ್ ಡೌನ್ ಸಡಿಲಿಕೆ ಮಾಡಲಾಗ್ತಿದೆ.. ಈ ನಡುವೆ ಅನೇಕರು ಮಾನಸಿಕ ಖಿನ್ನತೆಗೂ ಒಳಗಾಗಿ ದುಡುಕಿ ನಿರ್ಧಾರಗಳನ್ನೂ ತೆಗೆದುಕೊಂಡಿದ್ದಾರೆ.. ಇದೀಗ ಲಾಕ್‍ಡೌನ್ ನಿಂದಾಗಿ ಮನೆಯಲ್ಲಿಯೇ ಇದ್ದು ಖಿನ್ನತೆಗೆ ಒಳಗಾಗಿದ್ದ ರೂಪದರ್ಶಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ.
ಪ್ರಿಯಾ ಎಂಬಾಕೆ ಆತ್ಮಹತ್ಯೆಗೆ ಶರಣಾದ ಯುವತಿಯಾಗಿದ್ದಾಳೆ.. ಈಕೆ ಲಾಕ್ ಡೌನ್ ಗೂ ಮೊದಲು ಮಾಡಲಿಂಗ್ ಜಗತ್ತಿನಲ್ಲಿ ನೆಲೆಕಂಡುಕೊಳ್ಳುವ ಪ್ರಯತ್ನ ಮಾಡುತ್ತಿದ್ದಳು.. ಮುಂಬೈನಲ್ಲಿಯೇ ವಾಸವಾಗಿದ್ದು, ಕೆರಿಯರ್ ಗಾಗಿ ಕಷ್ಟಪಡುತ್ತಿದ್ದಳು.. ಆದ್ರೆ ಕಳೆದ ಎರಡು ಬಾರಿಯೂ ಲಾಕ್‍ಡೌನ್ ಘೋಷಣೆ ಆಗಿದ್ದರಿಂದ ತನ್ನ ವೃತ್ತಿಜೀವನದ ಕುರಿತು ತೀರಾ ಚಿಂತೆಯಲ್ಲಿದ್ದ ಪ್ರಿಯಾ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. 14ನೇ ಮಹಡಿಯಿಂದ ಜಿಗಿದು ಪ್ರಾಣ ಬಿಟ್ಟಿದ್ದಾಳೆ.