ಬೆಂಗಳೂರು: ಮಹಾಮಾರಿ ಕೊರೊನಾದಿಂದ ಮೃತಪಟ್ಟವರಿಗೆ ಉಚಿತ ಅಂತ್ಯಸಂಸ್ಕಾರ ನಡೆಸುವಂತೆ ಬಿಬಿಎಂಪಿ ಮಹತ್ವದ ಆದೇಶ ನೀಡಿದೆ. ಬೆಂಗಳೂರಿನ ವಿದ್ಯುತ್ ಚಿತಾಗಾರಗಲ್ಲಿ ಕೊರೊನಾದಿಂದ ಮೃತಪಟ್ಟ ಶವಗಳ ಅಂತ್ಯಸಂಸ್ಕಾರ ನಡೆಸಲು ಅಲ್ಲಿನ ಸಿಬ್ಬಂದಿ ಹಣ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಬಿಬಿಎಂಪಿ ವಿಶೇಷ ಆಯುಕ್ತ ರಣದೀಪ್ ಆದೇಶ ಹೊರಡಿಸಿದ್ದಾರೆ.
ಕೊರೊನಾದಿಂದ ಹಾಗೂ ಇತರೆ ಕಾರಣಗಳಿಂದ ಮೃತಪಟ್ವವರಿಗೆ ವಿದ್ಯುತ್ ಚಿತಾಗಾರಗಳಲ್ಲಿ ಅಂತ್ಯಕ್ರಿಯೆ ನಡೆಸಲು ಬಿಬಿಎಂಪಿ 250 ರೂ. ನಿಗಧಿ ಮಾಡಿತ್ತು. ಆದರೆ ವಿದ್ಯುತ್ ಚಿತಾಗಾರಗಳ ಸಿಬ್ಬಂದಿ ಮಾಸ್ಕ್, ಪಿಪಿಇ ಕಿಟ್, ಸ್ಯಾನಿಟೈಸರ್ ನೆಪದಲ್ಲಿ 4 ಸಾವಿರ, 5 ಸಾವಿರ, 11 ಸಾವಿರ ಹಾಗೂ ಅಂಬ್ಯುಲೆನ್ಸ್ ಬೇಕಿದ್ದರೆ 20ರಿಂದ 25 ಸಾವಿರದವರೆಗೆ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು.
ಈ ಹಿನ್ನೆಲೆಯಲ್ಲಿ ಚಿತಾಗಾರದ ವೆಚ್ಚ 250 ಸೇರಿದಂತೆ 1750 ರೂ.ಗಳನ್ನು ಭರಿಸಲು ಬಿಬಿಎಂಪಿ ನಿರ್ಧರಿಸಿದೆ. ಈ ಸಂಬಂಧ ಎಲ್ಲಾ ಚಿತಾಗಾರಗಳಿಗೆ ಬಿಬಿಎಂಪಿ ಸುತ್ತೋಲೆ ಹೊರಡಿಸಿದೆ.
ಬೆಂಗಳೂರಿನ ಹೆಬ್ಬಾಳ, ವಿಲ್ಸನ್ ಗಾರ್ಡನ್, ಯಲಹಂಕ, ಬೊಮ್ಮನಹಳ್ಳಿ-ಕೂಡ್ಲು, ಪೀಣ್ಯ ವಿದ್ಯುತ್ ಚಿತಾಗಾರಗಳಲ್ಲಿ ಉಚಿತ ಅಂತ್ಯಸಂಸ್ಕಾರಕ್ಕೆ ಸೂಚನೆ ನೀಡಲಾಗಿದೆ.
ಹಬ್ಬದ ಸೀಸನ್ಗೆ ‘ರಿಯಲ್ಮಿ’ ಬಂಪರ್ ಆಫರ್: ಸ್ಮಾರ್ಟ್ಫೋನ್ ಖರೀದಿಸಿದರೆ ಕಾರು, ಸ್ಕೂಟರ್ ಗೆಲ್ಲುವ ಅವಕಾಶ
ಬೆಂಗಳೂರು: ದೀಪಾವಳಿ ಮತ್ತು ಹಬ್ಬದ ಸೀಸನ್ ಶುರುವಾಗಿದ್ದು ಸ್ಮಾರ್ಟ್ಫೋನ್ ಪ್ರಿಯರಿಗೆ ಭಾರತದ ಜನಪ್ರಿಯ ಬ್ರ್ಯಾಂಡ್ ರಿಯಲ್ಮಿ ಭರ್ಜರಿ ಆಫರ್ಗಳನ್ನು ಘೋಷಿಸಿದೆ. ನೀವು ಹೊಸದಾಗಿ ರಿಯಲ್ಮಿ 16 ಸರಣಿಯ...








