ಬೆಂಗಳೂರು : ಚಂದ್ರನ ಮೇಲೆ ಕಟ್ಟಡಗಳನ್ನು ನಿರ್ಮಿಸಲು ಸಹಕಾರಿಯಾಗುವ ಇಟ್ಟಿಗೆಯನ್ನು ತಯಾರಿಸುವ ಪ್ರಕ್ರಿಯೆಯೊಂದನ್ನು ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್ ಹಾಗೂ ಇಸ್ರೋದ ಸಂಶೋಧಕರ ತಂಡ ಅಭಿವೃದ್ಧಿ ಪಡಿಸಿದೆ.
ಈ ಇಟ್ಟಿಗೆಯಂತಹ ವಸ್ತು (ಸ್ಪೇಸ್ ಬ್ರಿಕ್ಸ್) ನಿರ್ಮಾಣಕ್ಕೆ ಯೂರಿಯಾ, ಚಂದಿರನ ಅಂಗಳದಲ್ಲಿರುವ ಮಣ್ಣು, ಜತೆಗೆ ಬ್ಯಾಕ್ಟೀರಿಯಾ ಮತ್ತು ಗುವಾರ್ ಬೀನ್ಸ್ ಬಳಸಿ ಮಣ್ಣನ್ನು ಇಟ್ಟಿಗೆಯಂತೆ ಗಟ್ಟಿಗೊಳಿಸಬಹುದಾಗಿದೆ ಎಂದು ಸಂಶೋಧಕರ ತಂಡ ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಈ ಇಟ್ಟಿಗೆಗಳ ನಿರ್ಮಾಣಕ್ಕಾಗಿ ಯೂರಿಯಾ ಮತ್ತು ಚಂದ್ರನ ಮಣ್ಣು ಮೂಲ ವಸ್ತುಗಳಾಗಿ ಬಳಸಲಾಗಿದೆ ಇದು ನಿರ್ಮಾಣ ವೆಚ್ಚಗಳನ್ನು ಬಹಳಷ್ಟು ಕಡಿಮೆಗೊಳಿಸಬಹುದಾಗಿದೆ. ಸಾಮಾನ್ಯವಾಗಿ ಬಾಹ್ಯಾಕಾಶಕ್ಕೆ ಒಂದು ಪೌಂಡ್ ತೂಕದ ಸಾಮಗ್ರಿ ಕಳುಹಿಸಲು ಆಗುವ ವೆಚ್ಚ ರೂ. 7.5 ಲಕ್ಷ ಆಗಿರುವುದರಿಂದ ಇಂತಹ ಒಂದು ತಂತ್ರಜ್ಞಾನ ಹೆಚ್ಚು ಪ್ರಯೋಜನಕಾರಿ ಮೇಲಾಗಿ ಅದು ಸಿಮೆಂಟ್ ಬದಲು ಗುವಾರ್ ಗಮ್ ಬಳಸುತ್ತದೆ.









