ಕೇಸರಿ ಬಣ್ಣದಿಂದ ಕಂಗೊಳಿಸುತ್ತಿರುವ ಶಿವಮೊಗ್ಗ – ಮೋದಿ ಆಗಮನಕ್ಕೆ ಸಕಲ ತಯಾರಿ…
ಪ್ರಧಾನಿ ನರೇಂದ್ರ ಮೋದಿಯವರ ಸ್ವಾಗತಕ್ಕೆ ಶಿವಮೊಗ್ಗ ನಗರ ಸಕಲ ರೀತಿಯಿಂದಲೂ ಸಜ್ಜಾಗಿದೆ. ಇಂದು ಹುಟ್ಟ ಹಬ್ಬ ಆಚರಿಸಿಕೊಳ್ಳುತ್ತಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಉಡುಗೊರೆಯಾಗಿ ವಿಮಾನ ನಿಲ್ದಾಣವನ್ನ ಲೋಕಾರ್ಪಣೆಗೊಳಿಸಲಾಗುತ್ತದೆ.
ಈಗಾಗಲೇ ಬಿಎಸ್ ಯಡಿಯೂರಪ್ಪ ಶಿವಮೊಗ್ಗ ಏರ್ಪೋರ್ಟ್ಗೆ ಆಗಮಿಸಿದ್ದಾರೆ. ಎಂದಿನಂತೆ ವೈಟ್ ಅಂಡ್ ವೈಟ್ ಸಫಾರಿಯಲ್ಲಿ ಕಂಗೊಳಿಸುತ್ತಿದ್ದಾರೆ. ಮೋದಿ ಕೆಲಹೊತ್ತಿನಲ್ಲೇ ಏರ್ಪೋರ್ಟ್ಗೆ ಬಂದಿಳಿಯಲಿದ್ಧಾರೆ. ಬಿಎಸ್ವೈ ಸಿಎಂ ಬೊಮ್ಮಾಯಿ ಜತೆ ಮೋದಿ ಸ್ವಾಗತಿಸಲಿದ್ದು, ಫ್ಯಾಮಿಲಿ ಸಮೇತ ಏರ್ಪೋರ್ಟ್ಗೆ ಬಂದಿದ್ದಾರೆ.
ಇಡೀ ಶಿವಮೊಗ್ಗಕ್ಕೆ ಕೇಸರಿ ಸಿಂಗಾರಗೊಂಡಿದ್ದು, ಏರ್ಪೋರ್ಟ್ ಸಂಪರ್ಕದ ರಸ್ತೆಗಳೆಲ್ಲಾ ಝಗಮಗಿಸುತ್ತಿದೆ. ಮೋದಿ, ಬಿಎಸ್ವೈ ಕಟೌಟ್ಗಳಿಂದ ರಸ್ತೆಗಳು ತುಂಬಿ ತುಳುಕುತ್ತಿದೆ. ಸುಮಾರು 10-15 ಕಿಲೋ ಮೀಟರ್ ದೂರ ರಸ್ತೆಗಳಿಗೆ ಸಿಂಗಾರಗೊಂಡಿದೆ.
Narendra Modi: Shimoga, which is beautified with saffron color – all preparations for Modi’s arrival…