ಪೂರ್ಣ ಸುದ್ದಿಗಳಿಗಾಗಿ ಲಿಂಕ್ ಗಳನ್ನು ಕ್ಲಿಕ್ ಮಾಡಿ
ಮೋದಿ ಸರ್ಕಾರ ಜನರ ಜೇಬು ಖಾಲಿ ಮಾಡಿ ಸ್ನೇಹಿತ ಜೇಬು ತುಂಬಿಸುತ್ತಿದೆ : ರಾಹುಲ್ ಗಾಂಧಿ
ಮೋದಿ ಸರ್ಕಾರ ಜನರ ಜೇಬು ಖಾಲಿ ಮಾಡಿ ಸ್ನೇಹಿತ ಜೇಬು ತುಂಬಿಸುತ್ತಿದೆ : ರಾಹುಲ್ ಗಾಂಧಿ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಜನರ ಜೇಬನ್ನು ಖಾಲಿ ಮಾಡಿ ತಮ್ಮ ಸ್ನೇಹಿತರ ಜೇಬು ತುಂಬಿಸುವ ದೊಡ್ಡ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪ ಮಾಡಿದ್ದಾರೆ. ತೈಲ ಬೆಲೆಯಲ್ಲಿ ಬಿಜೆಪಿಯ ದರೋಡೆ ಎಂಬ ಹ್ಯಾಷ್ ಟ್ಯಾಗ್ ಮೂಲಕ ಟ್ವಿಟ್ ಮಾಡಿರುವ ರಾಹುಲ್‍ಗಾಂಧಿ, ಮೋದಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿಲ್ಲ. ಬದಲಾಗಿ ಇಳಿಕೆಯಾಗುತ್ತಿದೆ ಎಂಬುದು ಜನರಿಗೆ ಗೊತ್ತಿದೆ. ಆದರೂ, ಬಂಕ್ ಗಳಲ್ಲಿ ಪೆಟ್ರೋಲ್ , ಡೀಸೆಲ್ ಹಾಕಿಸುವಾಗ ದರದ ಮೀಟರ್ ತೀವ್ರಗತಿಯಲ್ಲಿ ಏರಿಕೆಯಾಗುತ್ತಿರುವುದನ್ನು ನೋಡಿದರೆ ಆತಂಕವಾಗುತ್ತಿದೆ. ಪೆಟ್ರೋಲ್ ಲೀಟರ್‍ಗೆ 100ರೂ. ದಾಟಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ ಮೋದಿ ಸರ್ಕಾರ ಜನರ ಜೇಬನ್ನು ಖಾಲಿ ಮಾಡುತ್ತಿದೆ. ಅವರ ಸ್ನೇಹಿತರಿಗೆ ಹಣ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಮುಂಬೈ ಹೋಟೆಲ್‌ನಲ್ಲಿ ದಾದ್ರಾ, ನಗರ್ ಹವೇಲಿ ಸಂಸದ ಆತ್ಮಹತ್ಯೆ
ಮುಂಬೈ ಹೋಟೆಲ್‌ನಲ್ಲಿ ದಾದ್ರಾ, ನಗರ್ ಹವೇಲಿ ಸಂಸದ ಆತ್ಮಹತ್ಯೆ
ಮುಂಬೈ: ಮಹಾರಾಷ್ಟ್ರದ ಮುಂಬೈನಲ್ಲಿ ದಾದ್ರಾ ಹಾಗೂ ನಗರ್ ಹವೇಲಿ ಸಂಸದ ಮೋಹನ್ ಭಾಯ್ ಡೇಲ್ಕರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ನಗರದ ಸೀ ಸೀ ಗ್ರೀನ್ ಹೋಟೆಲ್ʼನಲ್ಲಿ ದಾದ್ರಾ ಮತ್ತು ನಗರ್ ಸಂಸದ ಮೋಹನ್ ದೇಲ್ಕರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಮುಂಬೈ ಪೊಲೀಸರು ಆಗಮಿಸಿದ್ದು, ತನಿಖೆ ನಡೆಸಿದ್ದಾರೆ.
ಕೊರೊನಾ ಎಫೆಕ್ಟ್ : ಮಾರ್ಚ್ 7ರವರೆಗೆ ಶಾಲೆ-ಕಾಲೇಜು ಬಂದ್
ಕೊರೊನಾ ಎಫೆಕ್ಟ್ : ಮಾರ್ಚ್ 7ರವರೆಗೆ ಶಾಲೆ-ಕಾಲೇಜು ಬಂದ್
ಮಹಾರಾಷ್ಟ್ರ : ಕಳೆದ ಕೆಲ ತಿಂಗಳಿನಿಂದ ತೆಪ್ಪಗಾಗಿದ್ದ ಕೊರೊನಾ ಮತ್ತೆ I AM Back ಅಂತಾ ಆರ್ಭಟಿಸಲು ಶುರು ಮಾಡಿದೆ. ದೇಶದಾದ್ಯಂತ ಕೊರೊನಾ ಪ್ರಕರಣಗಳ ಸಂಖ್ಯೆ ಮತ್ತೆ ಹೆಚ್ಚಾಗಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ ನಾಗ್ಪುರದಲ್ಲಿ ಸ್ಥಳೀಯ ಆಡಳಿತ ಶಾಲಾ-ಕಾಲೇಜುಗಳನ್ನು ಮಾ.7 ರವರೆಗೆ ಬಂದ್ ಮಾಡಲು ತೀರ್ಮಾನ ಕೈಗೊಂಡಿದೆ. ಇದಲ್ಲದೆ ಮಾರ್ಚ್ 07ರವರೆಗೂ ಮಾರುಕಟ್ಟೆಗಳನ್ನು ಬಂದ್ ಮಾಡುವಂತೆ ಆದೇಶ ಹೊರಡಿಸಿದೆ. ಹಾಗೆ ಹೋಟೆಲ್‍ಗಳು, ರೆಸ್ಟೋರೆಂಟ್‍ಗಳು 50 ಪ್ರತಿಶತ ಸಾಮಥ್ರ್ಯದಲ್ಲಿ ಮಾತ್ರ ನಡೆಸುವಂತೆ ಸೂಚಿಸಲಾಗಿದೆ. ಇನ್ನು ರಾತ್ರಿ ವೇಳೆ 9 ಗಂಟೆಯ ನಂತರ ಹೋಟೆಲ್‍ಗಳನ್ನು ಮುಚ್ಚುವಂತೆ ಕಟ್ಟಾಜ್ಞೆ ಮಾಡಲಾಗಿದೆ. ಅಲ್ಲದೆ ಈ ತಿಂಗಳ25 ರಿಂದ ಮಾರ್ಚ್ 7 ರವರೆಗೆ ಮದುವೆ ಮಂಟಪಗಳನ್ನು ಮುಚ್ಚುವಂತೆ ಪಾಲಿಕೆ ಆದೇಶ ಹೊರಡಿಸಿದ್ದು, ಮನೆಯಲ್ಲೇ ಮದುವೆಯಾಗಲು ಅನುಮತಿ ನೀಡಿದೆ.
ಕಾಂಗ್ರೆಸ್ ಗೆ ಆಘಾತ : ಪುದುಚೇರಿಯಲ್ಲಿ ಸರ್ಕಾರ ಪತನ
ಕಾಂಗ್ರೆಸ್ ಗೆ ಆಘಾತ : ಪುದುಚೇರಿಯಲ್ಲಿ ಸರ್ಕಾರ ಪತನ
ಪುದುಚೇರಿ : ಪುದುಚೇರಿ ರಾಜಕೀಯದಲ್ಲಿ ಭಾರಿ ಹೈಡ್ರಾಮ ನಡೆದಿದ್ದು, ಸಿಎಂ ನಾರಾಯಣ ಸ್ವಾಮಿ ಸರ್ಕಾರಕ್ಕೆ ಸೋಲಾಗಿದ್ದು, ಕಾಂಗ್ರೆಸ್ ಸರ್ಕಾರ ಪತನವಾಗಿದೆ. ಕಾಂಗ್ರೆಸ್ ನಿಂದ ಸ್ಪರ್ಧಿಸಿ ನಾಲ್ಕು ಬಾರಿ ಶಾಸಕರಾಗಿದ್ದ ಲಕ್ಷ್ಮಿನಾರಾಯಣನ್ ಮತ್ತು ಡಿಎಂಕೆ ಶಾಸಕ ವೆಂಕಟೇಶನ್ ಅವರು ರಾಜೀನಾಮೆಯಿಂದಾಗಿ ನಾರಾಯಣ ಸ್ವಾಮಿ ಸರ್ಕಾರ ಅಲ್ಪಮತಕ್ಕೆ ಕುಸಿದಿತ್ತು. ಈ ಹಿನ್ನಲೆಯಲ್ಲಿ ಇಂದು ಸಿಎಂ ನಾರಾಯಣ ಸ್ವಾಮಿ ವಿಶ್ವಾಸ ಮತಯಾಚನೆ ಮಾಡಬೇಕಿತ್ತು. ಈ ಕುರಿತಂತೆ ಇಂದು ನಡೆದ ವಿಶೇಷ ಅಧಿವೇಶನದಲ್ಲಿ ಸಿಎಂ ನಾರಾಯಣಸ್ವಾಮಿ ವಿಶ್ವಾಸಮತ ಯಾಚನೆಯ ಗೊತ್ತುವಳಿ ಮಂಡಿಸಿ ತಮ್ಮ ಸರ್ಕಾರಕ್ಕೆ ಬಹುಮತವಿದೆ ಎಂದು ಸಭೆಗೆ ತಿಳಿಸಿದರು. ಇದೇ ವೇಳೆ ಮಾಜಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ವಿರುದ್ಧ ಕಿಡಿಕಾರಿದ ಅವರು, ಕಿರಣ್ ಬೇಡಿ ಆಡಳಿತಾತ್ಮಕ ವಿಷಯಗಳಲ್ಲಿ ಸರ್ಕಾರದೊಂದಿಗೆ ನಿರಂತರವಾಗಿ ಸಂಘರ್ಷಕ್ಕಿಳಿದರು.
ಸಚಿವರ ಕಾರ್ ಓವರ್ ಟೇಕ್ ಮಾಡಿದ್ದಕ್ಕೆ 5 ಗಂಟೆ ಠಾಣೆಯಲ್ಲಿ ಕುಳಿತ ಚಾಲಕರು
ಸಚಿವರ ಕಾರ್ ಓವರ್ ಟೇಕ್ ಮಾಡಿದ್ದಕ್ಕೆ 5 ಗಂಟೆ ಠಾಣೆಯಲ್ಲಿ ಕುಳಿತ ಚಾಲಕರು
ನವದೆಹಲಿ : ಎಂಎಸ್ ಎಂಇ ರಾಜ್ಯ ಮಂತ್ರಿ ಪ್ರತಾಪ್ ಚಂದ್ರ ಸಾರಂಗಿ ಅವರ ಕಾರ್ ಓವರ್ ಟೇಕ್ ಮಾಡಿ ಚಾಲಕರಿಬ್ಬರನ್ನು ಐದು ಗಂಟೆ ಕಾಲ ಠಾಣೆಯಲ್ಲಿರಿಸಿ ದಂಡ ವಿಧಿಸಲಾಗಿದೆ. ಹೌದು..! ಓಡಿಶಾದ ರಾಷ್ಟ್ರೀಯ ಹೆದ್ದಾರಿ 16 ರಲ್ಲಿ ಸಚಿವ ಸಾರಂಗಿ ಪ್ರಯಾಣಿಸುತ್ತಿದ್ದ ಮಾರ್ಗದಲ್ಲಿ ಕೊಲ್ಕತ್ತಾ ಮೂಲದ ಸಂತೋಷ್ ತಮ್ಮ ಕುಟುಂಬದೊಂದಿಗೆ ಪಂಚಲಿಂಗೇಶ್ವರ ಕ್ಷೇತ್ರಕ್ಕೆ ಎರಡು ಕಾರುಗಳಲ್ಲಿ ತೆರಳುತ್ತಿದ್ದರು. ಆ ಕಾರುಗಳು ಹೆದ್ದಾರಿ ಪ್ರವೇಶಿಸುತ್ತಿದ್ದಂತೆ ಎಸ್ಕಾರ್ಟ್ ಸಿಬ್ಬಂದಿ ಹಾರ್ನ್ ಮಾಡಿದ್ದಾರೆ. ಇದನ್ನ ಕೇಳದ ಸಂತೋಷ್ ಸಚಿವರ ಕಾರ್ ಗಳನ್ನು ಓವರ್ ಟೇಕ್ ಮಾಡಿ ಮುಂದೆ ಸಾಗಿದ್ದಾರೆ.
ಕೋವಿಡ್ ಸೋಂಕು ಹೆಚ್ಚಳ- ಪುಣೆಯಲ್ಲಿ ಇಂದಿನಿಂದ ರಾತ್ರಿ ಕರ್ಫ್ಯೂ – ಫೆ.28 ರವರೆಗೆ ಶಾಲೆ ಕಾಲೇಜು ಬಂದ್
ಕೋವಿಡ್ ಸೋಂಕು ಹೆಚ್ಚಳ- ಪುಣೆಯಲ್ಲಿ ಇಂದಿನಿಂದ ರಾತ್ರಿ ಕರ್ಫ್ಯೂ – ಫೆ.28 ರವರೆಗೆ ಶಾಲೆ ಕಾಲೇಜು ಬಂದ್
ಪುಣೆ, ಫೆಬ್ರವರಿ22: ಕೊರೋನವೈರಸ್ ಸೋಂಕು ಮತ್ತೊಮ್ಮೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪುಣೆ ಜಿಲ್ಲಾಡಳಿತವು ನಾಗರಿಕರಿಗೆ ರಾತ್ರಿ ವೇಳೆ ನಿರ್ಬಂಧಗಳು, ರೆಸ್ಟೋರೆಂಟ್‌ಗಳು ಮತ್ತು ಬಾರ್‌ಗಳ ಕಾರ್ಯಾಚರಣೆ ಸೇರಿದಂತೆ ಹೊಸ ನಿಯಮಗಳನ್ನು ಪ್ರಕಟಿಸಿದೆ. ಫೆಬ್ರವರಿ 28 ರವರೆಗೆ ಶಾಲೆಗಳು ಮತ್ತು ಕಾಲೇಜುಗಳು ಸಹ ಮುಚ್ಚಲ್ಪಡುತ್ತವೆ. ಭಾನುವಾರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮಹಾರಾಷ್ಟ್ರದಲ್ಲಿ ಸಕಾರಾತ್ಮಕ ದರ ಹೆಚ್ಚುತ್ತಿದೆ. ಪುಣೆ ಜಿಲ್ಲೆಯಲ್ಲಿ ಇದು ಶೇಕಡಾ 10 ಕ್ಕೆ ಏರಿದೆ. ಎರಡು ವಾರಗಳ ಹಿಂದೆ, ಸಕಾರಾತ್ಮಕತೆಯ ಪ್ರಮಾಣವು ಕೇವಲ 4.5 ರಿಂದ 5 ರಷ್ಟಿತ್ತು.
ಭಾರತದೊಂದಿಗಿನ ಸಂಘರ್ಷ ತಡೆಗೆ ಲಂಕಾ ಸಂಸತ್ತಿನಲ್ಲಿ ಇಮ್ರಾನ್ ಖಾನ್ ಭಾಷಣ ರದ್ದು..!
ಭಾರತದೊಂದಿಗಿನ ಸಂಘರ್ಷ ತಡೆಗೆ ಲಂಕಾ ಸಂಸತ್ತಿನಲ್ಲಿ ಇಮ್ರಾನ್ ಖಾನ್ ಭಾಷಣ ರದ್ದು..!
ಶ್ರೀಲಂಕಾ : ಶ್ರೀಲಂಕಾ ಸಂಸತ್ತಿನಲ್ಲಿ ಪಾಕಿಸ್ತಾನ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ನಿಗಧಿತ ಭಾಷಣವನ್ನು ರದ್ದುಗೊಳಿಸಲಾಗಿದೆ. ಭಾರತದೊಂದಿಗಿನ ಸಂಘರ್ಷಕ್ಕೆ ತಡೆ ನೀಡಲು ಇಮ್ರಾನ್ ಭಾಷಣವನ್ನ ಸ್ಥಗಿತಗೊಳಿಸಲಾಗಿದೆ ಎನ್ನಲಾಗಿದೆ. ಕೊಲಂಬೊ ಗೆಜೆಟ್ ಮಾಧ್ಯಮದಲ್ಲಿ ಈ ಕುರಿತು ವರದಿ ಪ್ರಕಟವಾಗಿದ್ದು, ಸಂಸತ್ತಿನಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ನಿಗಧಿತ ಭಾಷಣವನ್ನು ರದ್ದುಗೊಳಿಸುವ ಮೂಲಕ ಭಾರತದೊಂದಿಗಿನ ಮುಖಾಮುಖಿಯನ್ನು ಶ್ರೀಲಂಕಾ ತಪ್ಪಿಸಿದೆ ಎನ್ನಲಾಗಿದೆ.
ಪೂರ್ಣ ಸುದ್ದಿಗಳಿಗಾಗಿ ಲಿಂಕ್ ಗಳನ್ನು ಕ್ಲಿಕ್ ಮಾಡಿ