ಕೊರೊನಾ ಅಬ್ಬರದ ನಡುವೆ ಮತ್ತೊಂದು ಮಾರಕ ಕಾಯಿಲೆ ಆರ್ಭಟ ಶುರು : 9 ಜನರು ಬಲಿ..!
ಕೊರೊನಾ ಮಹಾಮಾರಿ ಅಬ್ಬರ ಇನ್ನೇನು ಕಮ್ಮಿ ಆಗ್ತಿದೆ ಅನ್ನೋ ಅಷ್ಟರಲ್ಲೇ ಹೊಸದೊಂದು ಸೋಂಕು ಭಾರತಕ್ಕೆ ಒಕ್ಕರಿಸಿದೆ. ಅಷ್ಟೇ ಅಲ್ಲ ಈ ಸೋಂಕಿಗೆ ಈವರೆಗೂ 9 ಜನ ಮೃತಪಟ್ಟಿದ್ದಾರೆ. 44 ಜನರಿಗೆ ಮಾರಣಾಂತಿಕ ಸೋಂಕು ತಗಲಿದೆ. ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮ್ಯೂಕಾರ್ಮೈಕೋಸಿಸ್ ಎಂಬ ಮಾರಕ ಶಿಲೀಂಧ್ರ ರೋಗವು ದೇಶದಲ್ಲಿ ಆರ್ಭಟ ಶುರುಮಾಡಿದೆ. ಕೊರೊನಾದಿಂದಲೇ ತತ್ತರಿಸಸಿಹೋಗಿರುವ ಜನರು ಹೊಸ ಕಾಯಿಲೆಗೆ ಬೆಚ್ಚಿ ಬಿದ್ದಿದ್ದಾರೆ. ಈ ಸೋಂಕು ಮೂಗಿನಿಂದ ಪ್ರಾರಂಭವಾಗಿ ಕಣ್ಣುಗಳಿಗೆ ಹರಡುತ್ತದೆ ಎಂದು ಹೇಳಲಾಗುತ್ತಿದೆ. ಇನ್ನು ಈ ಸೋಂಕಿನ ಶಿಲೀಂದ್ರಗಳು ಪರಿಸರದಲ್ಲಿಯೇ ಇರುತ್ತವೆಯಂತೆ. 
ಹಾಲಿವುಡ್ ನ ‘ದಿ ಗ್ರೇ ಮ್ಯಾನ್ ‘ ನಲ್ಲಿ ‘ಇಂಡಿಯಾದ ಬ್ರೂಸ್ ಲೀ’..!
ಅಂದ್ಹಾಗೆ ಈಗ ಸದ್ಯ ದೆಹಲಿ ಮತ್ತು ಮುಂಬೈನಲ್ಲಿ ಸೋಂಕಿತರು ಪತ್ತೆಯಾಗಿದ್ದಾರೆ. ಸೋಂಕು ತಗುಲಿದ ನಂತರ ಕಣ್ಣಿನ ಭಾಗದ ಸ್ನಾಯುಗಳ ಸೆಳೆತ ಉಂಟಾಗುತ್ತದೆ. ನಂತರ ಮೂಗು ಮತ್ತು ತಲೆ ನೋವು ಕೂಡ ಕಾಣಿಸಿಕೊಳ್ಳುತ್ತದೆ. ಅಷ್ಟೆ ಅಲ್ಲ ಸೋಂಕಿಗೆ ಒಳಗಾದ ವ್ಯಕ್ತಿ ಪಾರ್ಶ್ವವಾಯುವಿಗೂ ಒಳಗಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








