ಹೊಸ ಆರ್ಥಿಕ ವರ್ಷದಲ್ಲಿ ಈ ಕ್ಷೇತ್ರಗಳಲ್ಲಿ ಸ್ಯಾಲರಿ ಹೈಕ್ ಆಗುವ ಸಾಧ್ಯತೆ ಇದೆ…
ಉದ್ಯೋಗಿಗಳು ಏಪ್ರಿಲ್ ತಿಂಗಳಿಗೆ ಕಾಲಿಟ್ಟಿದ್ದು, ಹೊಸ ಆರ್ಥಿಕ ವರ್ಷ ಆರಂಭಗೊಂಡಿದೆ. ಕೊರೊನಾ ಕಪಿಮುಷ್ಠಿಯಿಂದ ಕೊಂಚ ಹೊರ ಬಂದಿದ್ದು, ನೌಕರರಲ್ಲಿ ಹೊಸ ನಿರೀಕ್ಷೆ ಹುಟ್ಟಿಕೊಂಡಿದೆ. ಈ ವರ್ಷವಾದರೂ ಒಳ್ಳೆಯ ಹೈಕ್ (Salary Hike) ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.
ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳ ಉದ್ಯಮ, ಆಸ್ತಿ ಮತ್ತು ನಿರ್ಮಾಣ, ಹಾಗೆಯೇ ಉತ್ಪಾದನೆ. ವಲಯಗಳಲ್ಲಿ ಸ್ಯಾಲರಿ ಹೈಕ್ ಆಗುವ ಸಾಧ್ಯತೆ ಇದೆ. ಇತ್ತೀಚೆಗೆ ಎಲ್ಲಾ ಕ್ಷೇತ್ರಗಳು ಇ-ಕಾಮರ್ಸ್ ಮತ್ತು ಡಿಜಿಟಲ್ ರೂಪಾಂತರಕ್ಕೆ ಒಳಗಾಗುತ್ತಿರುವುದರಿಂದ ಕಂಪ್ಯೂಟರ್ ವಿಜ್ಞಾನದ ಹಿನ್ನೆಲೆ ಹೊಂದಿರುವ ವೃತ್ತಿಪರ ಕೆಲಸಗಾರರು ಭಾರತದಲ್ಲಿ ಹೆಚ್ಚಿನ ಸಂಬಳ ಪಡೆಯುವ ನಿರೀಕ್ಷೆ ಇದೆ.
ಡಬಲ್ ಡಿಗ್ರಿ ಮಾಡಿರುವ ಡೇಟಾ ವಿಜ್ಞಾನಿಗಳು ವೆಬ್ ಡೆವಲಪರ್ಗಳು ಮತ್ತು ಕ್ಲೌಡ್ ಆರ್ಕಿಟೆಕ್ಟ್ಗಳು ಹೆಚ್ಚಿನ ಬೇಡಿಕೆಯಲ್ಲಿರುತ್ತಾರೆ. ಉನ್ನತ ದರ್ಜೆಯ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಹೊಂದಿದ್ದರೆ ಹೆಚ್ಚಿನ ಸಂಬಳ ಸಿಗುವ ನಿರೀಕ್ಷೆಯಿದೆ.